More

    ಡ್ರಗ್ಸ್​ ಪ್ರಕರಣದಲ್ಲಿ ಹೆಸರು ಕೇಳಿ ಬರುತ್ತಿದ್ದಂತೆ ನಟಿ ದಿಯಾ ಮಿರ್ಜಾ ಹೇಳಿದ್ದೇನು?

    ಮುಂಬೈ: ಡ್ರಗ್ಸ್​ ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬರುತ್ತಿದ್ದಂತೆ ‘ಡಿಪ್ರೆಷನ್​’ಗೆ ಹೋಗಿದ್ದ ಬಾಲಿವುಡ್​ನಲ್ಲಿ ಆ ಸಂಬಂಧ ಬಹಳಷ್ಟು ಚರ್ಚೆಗಳು ಆಗಲಾರಂಭಿಸಿವೆ. ಮಾತ್ರವಲ್ಲ, ದೀಪಿಕಾ ಜತೆ ಇನ್ನೂ ಕೆಲವು ನಟಿಯರ ಹೆಸರುಗಳೂ ಹರಿದಾಡಲಾರಂಭಿಸಿವೆ.

    ಈ ಮಧ್ಯೆ ‘ರೆಹನಾ ಹೈ ತೇರಾ ದಿಲ್​ ಮೇ’ ಖ್ಯಾತಿಯ ನಟಿ ದಿಯಾ ಮಿರ್ಜಾ ಹೆಸರು ಕೂಡ ಕೇಳಿ ಬಂದಿದೆ. ಮಾಧ್ಯಮವೊಂದರಲ್ಲಿ ಈ ಬಗ್ಗೆ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ದಿಯಾ ಮಿರ್ಜಾ ಇನ್​ಸ್ಟಾಗ್ರಾಮ್​ನಲ್ಲಿ ಪ್ರತಿಕ್ರಿಯಿಸಿ ಸ್ಪಷ್ಟನೆ ಕೊಟ್ಟಿದ್ದಾರೆ.

    “ಅವೆಲ್ಲ ಸುಳ್ಳು, ಆಧಾರರಹಿತ. ಹಾಗೆಲ್ಲ ಸುಮ್ಮನೆ ಸುದ್ದಿ ಮಾಡಿದರೆ ನನ್ನ ಕರಿಯರ್​ಗೆ ಧಕ್ಕೆಯಾಗುತ್ತದೆ. ನಾನು ನನ್ನ ಜೀವನದಲ್ಲಿ ಮಾದಕವಸ್ತುಗಳನ್ನು ಯಾವುದೇ ರೂಪದಲ್ಲೂ ಬಳಸಿಲ್ಲ..” ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಕೆಲವರು ಅವರಿಗೆ ಬೆಂಬಲ ಸೂಚಿಸಿ ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಎಲ್ಲ ನಾಟಕ ಎಂದು ಕಾಲೆಳೆದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts