More

    ಬೆಟ್ಟದ ತುದಿಯಲ್ಲಿ ಮಕ್ಕಳಿಗೆ ಆನ್‌ಲೈನ್ ಕ್ಲಾಸ್..!

    | ಶ್ರೀಪತಿ ಹೆಗಡೆ ಹಕ್ಲಾಡಿ ಇಡೂರು ಕುಂಜ್ಞಾಡಿ
    ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದಿದ್ದರೂ ಆನ್‌ನೈನ್ ತರಗತಿಗಳು ಆರಂಭವಾಗಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೊಬೈಲ್, ವಿದ್ಯುತ್, ಇಂಟರ್‌ನೆಟ್ ಮುಂತಾದ ಸಮಸ್ಯೆ ಎದುರಿಸಿ, ತರಗತಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪ್ರತಿಭಾವಂತ ಇಬ್ಬರು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಾಗಿ ಬೆಟ್ಟ ಹತ್ತಿ ಮಡಲು ಗೂಡಲ್ಲಿ ಕೂತು ಲೈವ್ ತರಗತಿಯಲ್ಲಿ ಪಾಲ್ಗೊಳ್ಳುತ್ತಾರೆ.

    ಬೈಂದೂರು ತಾಲೂಕು ಇಡೂರು ಕುಂಜ್ಞಾಡಿ ಗ್ರಾಮ ಗೋಳಿಕೆರೆ ಆನ್‌ಲೈನ್ ತರಗತಿ ಕೇಂದ್ರ ಸ್ಥಾನ. ಗೋಳಿಕೆರೆ ಗೋಪಾಲ ಗೌಡ ಮತ್ತು ಗೀತಾ ಮಕ್ಕಳಾದ ಭೂಮಿಕಾ ಮತ್ತು ಭರತ ಆನ್‌ಲೈನ್ ತರಗತಿ ವಿದ್ಯಾರ್ಥಿಗಳು. ಹೆಬ್ರಿ ಚಾರದಲ್ಲಿರುವ ನವೋದಯ ಶಾಲೆಯಲ್ಲಿ ಭೂಮಿಕಾ ಎಸ್ಸೆಸ್ಸೆಲ್ಸಿ ಕಲಿಯುತ್ತಿದ್ದರೆ, ಭರತ್ ೯ನೇ ತರಗತಿ ವಿದ್ಯಾರ್ಥಿ. ಈ ಇಬ್ಬರು ವಿದ್ಯಾರ್ಥಿಗಳು ಕುಂಜ್ಞಾಡಿ ಸರ್ಕಾರಿ ಶಾಲೆಯಲ್ಲಿ ೫ನೇ ತರಗತಿ ಕಲಿಯುತ್ತಿರುವಾಗಲೇ ಪರೀಕ್ಷೆ ಬರೆದು ಸವೋದಯ ಶಾಲೆಗೆ ಪ್ರವೇಶ ಗಿಟ್ಟಿಸಿಕೊಂಡ ಪ್ರತಿಭಾವಂತರು.

    ಈ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾದ್ದರಿಂದ ಸೂಕ್ತ ನೆಟ್‌ವರ್ಕ್ ಸಿಗದೆ ಕಷ್ಟ ಪಡುವಂತಾಗಿದೆ. ನೆಟ್‌ವರ್ಕ್ ಎಲ್ಲಿ ಸಿಗುತ್ತದೆ ಎಂಬ ಹುಡುಕಾಟದಲ್ಲಿ ಮನೆಯಿಂದ ೩೦೦ ಮೀಟರ್ ಅಂತರ ಬೆಟ್ಟದ ನೆತ್ತಿಮೇಲೆ ನೆಟ್‌ವರ್ಕ್ ಸಿಕ್ಕಿದೆ. ನೆಟ್‌ವರ್ಕ್ ಸಿಕ್ಕ ಸ್ಥಳದಲ್ಲಿ ಸಣ್ಣದೊಂದು ಚಪ್ಪರ ಮಾಡಿ ಅದರೊಳಗೆ ಮಕ್ಕಳಿಗೆ ಓದಲು ತಂದೆ ತಾಯಿ ಅವಕಾಶ ಮಾಡಿಕೊಟ್ಟಿದ್ದು, ಸುತ್ತ್ತ ಕಾಡಿರುವುದರಿಂದ ಪಾಲಕರು ಕಾದು ಕೂರುತ್ತಾರೆ. ವಿದ್ಯಾರ್ಥಿಗಳ ಚಿಕ್ಕ ಸಹೋದರಿ ತಿನ್ನೋದಕ್ಕೆ ಕುಡಿಯೋಕೆ ಪೂರೈಕೆ ಮಾಡುತ್ತಾಳೆ.
    ಮಕ್ಕಳನ್ನು ಹೇಗಾದರೂ ಮಾಡಿ ಓದಿಸುವ ಹಠದಿಂದ ಸ್ವಸಹಾಯ ಸಂಘದಲ್ಲಿ ತಂದೆ ಗೋಪಾಲ ಗೌಡ ೫೦ ಸಾವಿರ ರೂ. ಸಾಲ ಮಾಡಿ ಮಕ್ಕಳಿಗೆ ಎರಡು ಮೊಬೈಲ್ ಕೊಡಿಸಿದ್ದಾರೆ. ವಿದ್ಯುತ್ ಕಣ್ಣಮುಚ್ಚಾಲೆ, ಲೋ ವೋಲ್ಟೇಜ್ ಹಾಗೂ ಗೂಡಲ್ಲಿ ವಿದ್ಯುತ್ ಇರದ ಕಾರಣ ಮೊಬೈಲ್ ಚಾರ್ಜ್ ಮಾಡಲು ಬ್ಯಾಟರಿ, ಚಾರ್ಜರ್ ಹೊತ್ತುಕೊಂಡು ೩೦೦ ಮೀ. ಎತ್ತರದ ಬೆಟ್ಟ ಹತ್ತುತ್ತಾರೆ.

    ತುಂಬ ಮಳೆ, ಮೋಡವಿದ್ದರೆ ನೆಟ್‌ವರ್ಕ್ ಇಲ್ಲದೆ ತರಗತಿ ಮಿಸ್ಸಾಗುತ್ತದೆ. ವಿದ್ಯುತ್ ಇಲ್ಲದಿದ್ದರೆ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಿಗೋದಿಲ್ಲ. ಖಾಸಗಿ ನೆಟ್‌ವರ್ಕ್ ಕೂಡ ಇರೋದಿಲ್ಲ. ವಿದ್ಯುತ್ ಇದ್ದರೂ ಬುಡ್ಡಿ ಹಚ್ಚಿಕೊಂಡು ಓದೋದು ತಪ್ಪಿಲ್ಲ. ಡಾಕ್ಟರ್ ಆಗಬೇಕು ಎನ್ನೋದು ಕನಸು ಬಡತನ, ತಂದೆ ಕಷ್ಟ ನೋಡಿದರೆ ಭಯವಾಗುತ್ತದೆ.
    | ಭೂಮಿಕಾ ವಿದ್ಯಾರ್ಥಿನಿ ನವೋದಯ ಶಾಲೆ, ಚಾರ ಹೆಬ್ರಿ

    ಮಕ್ಕಳ ಕನಸುಗಳನ್ನು ಸಾಕಾರ ಮಾಡಲು ಸಾಧ್ಯವೇ ಎನ್ನುವ ಚಿಂತೆ ಶುರುವಾಗಿದೆ. ಮುಂದೆ ಏನು ಮಾಡಬೇಕು ಎನ್ನೋದು ತಿಳಿಯುತ್ತಿಲ್ಲ. ಮೂವರಿಗೆ ಇಂಟರ್‌ನೆಟ್‌ಗೆ ತಿಂಗಳಿಗೆ ೪೦೦ ರೂ. ಬೇಕಾಗುತ್ತದೆ. ಈಗಾಗಲೇ ಮೊಬೈಲ್, ಬ್ಯಾಟರಿ ಅದೂ ಇದೂ ಅಂತ ೫೦ ಸಾವಿರ ಸಾಲ ಮಾಡಿದ್ದೇನೆ. ಮನೆ ಸರಿದೂಗಿಸಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡುವುದು ಕಬ್ಬಿಣದ ಕಡಲೆಯಾಗುತ್ತದೆ.
    | ಗೋಪಾಲ ಗೌಡ, ಪಾಲಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts