More

    ಕರೊನಾ ಕಡಿಮೆಯಿದ್ದರೂ ನೇಪಾಳದ ಶಾಲಾ ಕಾಲೇಜಿಗೆ ರಜೆ! ದೆಹಲಿಯನ್ನು ಮೀರಿಸ್ತಾ ಕಾಠ್ಮಂಡು?

    ಕಾಠ್ಮಂಡು: ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಅದೇ ಕಾರಣಕ್ಕೆ ಕೆಲ ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ಮತ್ತೊಮ್ಮೆ ರಜೆ ಘೋಷಿಸುವ ಚಿಂತನೆಯೂ ನಡೆಸಲಾಗುತ್ತಿದೆ. ಆದರೆ ಪಕ್ಕದ ನೇಪಾಳದಲ್ಲಿ ಅದಾಗಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ರಜೆಗೆ ಕಾರಣ ಕರೊನಾವಲ್ಲ!

    ನೇಪಾಳದ ಶಾಲಾ ಕಾಲೇಜುಗಳಿಗೆ ಶುಕ್ರವಾರದವರೆಗೆ ರಜೆ ನೀಡಿರುವುದಾಗಿ ಅಲ್ಲಿನ ಶಿಕ್ಷಣ ಸಚಿವಾಲಯ ತಿಳಿಸಿದೆ. ಇದಕ್ಕೆ ಕಾರಣ ಕರೊನಾ ಅಲ್ಲ ಬದಲಾಗಿ ವಾಯು ಮಾಲಿನ್ಯವಂತೆ. ದೇಶದಲ್ಲಿ ಕಳೆದ ಒಂದು ವಾರದಿಂದ ವಾಯುಮಾಲಿನ್ಯ ಹೆಚ್ಚಾಗಿದೆ. ಭಾರತದ ರಾಜಧಾನಿ ದೆಹಲಿಯಲ್ಲಿ ಉಂಟಾಗಿದ್ದ ಸ್ಥಿತಿಯೇ ಅಲ್ಲೂ ಎದುರಾಗಿದೆ. ವಾತಾವರಣದಲ್ಲಿ ದಟ್ಟವಾಗಿ ಹೊಗೆ ತುಂಬಿದ್ದು, ಜನರು ಓಡಾಡುವುದನ್ನು ಕಡಿಮೆ ಮಾಡುವಂತೆ ಸರ್ಕಾರ ಮನವಿ ಮಾಡಿತ್ತು. ಸೋಮವಾರದಂದು ಶಿಕ್ಷಣ ಇಲಾಖೆಯವರು ಸಭೆ ನಡೆಸಿ ಶಾಲಾ ಕಾಲೇಜುಗಳಿಗೆ ಶುಕ್ರವಾರದವರೆಗೆ ರಜೆ ಘೋಷಿಸಿದ್ದಾರೆ.

    ನೇಪಾಳದ 54 ಜಿಲ್ಲೆಗಳಲ್ಲಿ ಕಾಡ್ಗಿಚ್ಚು ಹಬ್ಬಿದೆ. ಇದೇ ಕಾರಣದಿಂದಾಗಿ ಮಾಲಿನ್ಯ ಹೆಚ್ಚಾಗಿರುವುದಾಗಿ ಹೇಳಲಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ನೇಪಾಳ ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. (ಏಜೆನ್ಸೀಸ್​)

    ಒಂದು ಗಂಟೆಗಿಂತ ಹೆಚ್ಚು ಕಾಲ ಮಾರ್ಕೆಟ್​ನಲ್ಲಿದ್ದರೆ ಫೈನ್​! ಆದೇಶ ಹೊರಡಿಸಿದ ಜಿಲ್ಲಾಡಳಿತ

    ನಾನು ಬಜಾರಿ ಅಲ್ಲ…; ‘ಬಿಗ್​ಬಾಸ್’ನಿಂದ ಹೊರಬಿದ್ದ ಚಂದ್ರಕಲಾ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts