More

    ನೆಹರು ತಪ್ಪಿನಿಂದಲೇ ಕಾಶ್ಮೀರ ಸಮಸ್ಯೆ: ಸಂಸತ್ತಿನಲ್ಲಿ ಮತ್ತೆ ವಾಗ್ದಾಳಿ ಮಾಡಿದ ಅಮಿತ್ ಶಾ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿಯು ಪ್ರತ್ಯೇಕತಾವಾದಕ್ಕೆ ದಾರಿ ಮಾಡಿಕೊಟ್ಟಿದೆ…

    ನಾಲ್ಕು ವರ್ಷಗಳ ಹಿಂದೆ ಈ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಬೆಂಬಲಿಸಿದ ಕೆಲವೇ ಗಂಟೆಗಳ ನಂತರದಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಕೇಂದ್ರ ಇಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    “ಕಾಶ್ಮೀರಕ್ಕಿಂತ ಹೆಚ್ಚಿನ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಇತರ ರಾಜ್ಯಗಳಿವೆ. ಹಾಗಾದರೆ ಜಮ್ಮು ಮತ್ತು ಕಾಶ್ಮೀರವು ಮಾತ್ರ ಏಕೆ ಭಯೋತ್ಪಾದನೆಯಿಂದ ಬಳಲುತ್ತಿದೆ? 370 ನೇ ವಿಧಿಯು ಪ್ರತ್ಯೇಕತಾವಾದಕ್ಕೆ ಕಾರಣವಾಯಿತು,” ಎಂದು ಷಾ ಸಾರಿದ್ದಾರೆ,

    370ನೇ ವಿಧಿಯು ತಾತ್ಕಾಲಿಕವಾಗಿತ್ತು, ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭಾಗವಾಗಿಸುವ ಉದ್ದೇಶ ಮಾತ್ರ ಇದರಲ್ಲಿತ್ತು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ನ್ಯಾಯಾಲಯದ ಈ ಆದೇಶವು ಕೇಂದ್ರ ಸರ್ಕಾರದ ನಿಲುವನ್ನು ಸಮರ್ಥಿಸುತ್ತದೆ. ಹೀಗಿದ್ದರೂ ನ್ಯಾಯಾಲಯದ ತೀರ್ಪಿನಿಂದ ಕಾಂಗ್ರೆಸ್‌ಗೆ ಸಂತಸವಿಲ್ಲ ಎಂದು ಶಾ ಹೇಳಿದರು,

    ನಾಲ್ಕು ವರ್ಷಗಳ ಹಿಂದೆ 370ರ ವಿಧಿ ರದ್ದುಪಡಿಸುವ ಹಾಗೂ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸುವ ಘೋಷಣೆಯನ್ನು ಅಮಿತ್​ ಶಾ ಅವರೇ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

    “ಇಂದು, ಕಾಂಗ್ರೆಸ್ ತನ್ನ ಪತ್ರಿಕಾಗೋಷ್ಠಿಯಲ್ಲಿ 370 ನೇ ವಿಧಿಯನ್ನು ತಪ್ಪಾದ ರೀತಿಯಲ್ಲಿ ರದ್ದುಪಡಿಸಲಾಗಿದೆ ಎಂದು ಹೇಳಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಅವರು ಇದನ್ನು ಒಪ್ಪುವುದಿಲ್ಲ ಎಂದು ಹೇಳುತ್ತಿದ್ದಾರೆ,” ಎಂದು ಶಾ ಹರಿಹಾಯ್ದರು.

    ಕಾಂಗ್ರೆಸ್ 40 ವರ್ಷಗಳಿಂದ ತಪ್ಪು ಮಾಡಿದೆ. 40 ವರ್ಷಗಳ ತಪ್ಪುಗಳನ್ನು ಮೋದಿಯವರು ನಾಲ್ಕು ವರ್ಷಗಳಲ್ಲಿ ಸರಿಪಡಿಸಬೇಕೆಂದು ಎಂದು ಅವರು ನಿರೀಕ್ಷಿಸುತ್ತಾರೆ. ಆದರೆ ಅವರು ಸರಿಯಾಗಿದ್ದಾರೆ, ಯಾವಾಗಲೂ ಉನ್ನತ ಗುರಿ ಹೊಂದಿರಬೇಕು” ಎಂದು ಅವರು ಹೇಳಿದರು.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೃಷ್ಟಿಗೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ಕಾರಣ ಎಂಬ ಅರೋಪವನ್ನು ಅವರು ಪುನರುಚ್ಚರಿಸಿದರು.

    “ಅಕಾಲಿಕ ಕದನ ವಿರಾಮ ಇಲ್ಲದಿದ್ದರೆ (ಪಾಕಿಸ್ತಾನದೊಂದಿಗಿನ ಯುದ್ಧದ ಸಮಯದಲ್ಲಿ), ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಇರುತ್ತಿರಲಿಲ್ಲ. ನಮ್ಮ ದೇಶ ಗೆಲ್ಲುತ್ತಿತ್ತು, ಅವರು (ನೆಹರು) ಎರಡು ದಿನ ಕಾಯುತ್ತಿದ್ದರೆ, ಇಡೀ ಕಾಶ್ಮೀರ ನಮ್ಮದಾಗುತ್ತಿತ್ತು” ಎಂದು ಶಾ ಹೇಳಿದರು.

    ನೆಹರೂ ಇಲ್ಲದಿದ್ದರೆ ಕಾಶ್ಮೀರವೇ ಇರುತ್ತಿರಲಿಲ್ಲ ಎನ್ನುತ್ತಾರೆ. ಇತಿಹಾಸ ತಿಳಿದಿರುವ ಜನರನ್ನು ನಾನು ಕೇಳಲು ಬಯಸುತ್ತೇನೆ, ಹೈದರಾಬಾದ್ ದೊಡ್ಡ ಸಮಸ್ಯೆ ಎದುರಿಸಿತು, ನೆಹರೂ ಅಲ್ಲಿಗೆ ಹೋಗಿದ್ದರಾ? ನೆಹರೂ ಲಕ್ಷದ್ವೀಪಕ್ಕೆ, ಜುನಾಗಢ ಅಥವಾ ಜೋಧಪುರಕ್ಕೆ ಹೋಗಿದ್ದರಾ? ಅವರು ಕಾಶ್ಮೀರಕ್ಕೆ ಮಾತ್ರ ಹೋಗುತ್ತಿದ್ದರು. ಅಲ್ಲಿಯೂ ಅವರು ಕೆಲಸವನ್ನು ಪೂರ್ಣಗೊಳಿಸದೆ ಬಿಟ್ಟರು ” ಎಂದು ಶಾ ವಾಗ್ದಾಳಿ ನಡೆಸಿದರು.

    ಜಮ್ಮು ಮತ್ತು ಕಾಶ್ಮೀರದ ಮುಖ್ಯವಾಹಿನಿಗೆ ತರುವ ಸರ್ಕಾರದ ಕ್ರಮದಿಂದಾಗಿ ಅಲ್ಲಿನ ಜನರ ಜೀವನ ಸುಧಾರಿಸಿದೆ ಎಂದು ಅವರು ಪ್ರತಿಪಾದಿಸಿದರು..

    “ಕಾಶ್ಮೀರಿಗಳು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಬಗ್ಗೆ ಮಾತನಾಡುವ ಜನರ ಮಾತನ್ನು ಕೇಳುವುದಿಲ್ಲ, ಅವರು ಈಗ ಪ್ರಜಾಪ್ರಭುತ್ವದ ಮಾತುಗಳನ್ನು ಕೇಳುತ್ತಾರೆ. 2014 ರ ಮೊದಲು, ಸಾವಿರಾರು ಜನರು ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿದ್ದರು. ಈಗ ಯಾರಾದರೂ ಅಂತಹದನ್ನು ನೋಡುತ್ತಾರೆಯೇ? ನಾವು ನಿಬಂಧನೆ ಮಾಡಿದ್ದರಿಂದ ಇದು ಸಂಭವಿಸಿದೆ. ಅವರನ್ನು ಕೊಂದ ಸ್ಥಳದಲ್ಲಿಯೇ ಅವರ ಅಂತಿಮ ಸಂಸ್ಕಾರ ನಡೆಯಲಿದೆ” ಎಂದು ಅವರು ಹೇಳಿದರು.

    2 ಮಸೂದೆ ಅಂಗೀಕಾರ:
    ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2023 ಅನ್ನು ಮಂಡಿಸಿದರು. ಕಳೆದ ವಾರ ಲೋಕಸಭೆಯಲ್ಲಿ ಅನುಮೋದನೆ ಪಡೆದ ಎರಡು ಮಸೂದೆಗಳು ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡವು.

    70 ಸಾವಿರ ಗಡಿ ದಾಟಿ ದಾಖಲೆ ಬರೆದ ಸೂಚ್ಯಂಕ: ಮಂಗಳವಾರ ಪ್ರಕಟವಾಗುವ ಅಮೆರಿಕ ಹಣದುಬ್ಬರ ವರದಿ ಬೀರಲಿದೆ ಪ್ರಭಾವ

    t

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts