More

    ಬಲಿಷ್ಠ ಭಾರತಕ್ಕೆ ನೆಹರು ಕೊಡುಗೆ ಅಪಾರ: ಸಚಿವ ಕೆ.ಎನ್.ರಾಜಣ್ಣ

    ಶಿವಮೊಗ್ಗ: ಜವಾಹರಲಾಲ್ ನೆಹರು ದೂರದೃಷ್ಟಿಯುಳ್ಳ ಪ್ರಧಾನಿಯಾಗಿದ್ದರು. ಸ್ವಾತಂತ್ರೃ ಭಾರತದಲ್ಲಿ ಅನೇಕ ಸಮಸ್ಯೆಗಳಿದ್ದವು. ಅವುಗಳನ್ನು ನಿವಾರಿಸಿ ಬಲಿಷ್ಠ ರಾಷ್ಟ್ರವನ್ನಾಗಿಸಲು ಅವರು ಪ್ರಯತ್ನಿಸಿದ್ದರು ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.

    ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಜವಾಹರಲಾಲ್ ನೆಹರು ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶವನ್ನು ನೆಹರೂ ಸಮರ್ಥವಾಗಿ ಕಟ್ಟಿದರು. ಅವರ ಕಾಲದಲ್ಲಿ ಹೊಸ ವೈಜ್ಞಾನಿಕ, ಸಂಶೋಧನಾ ಕೇಂದ್ರಗಳು, ಜಲಾಶಯಗಳು ನಿರ್ಮಾಣವಾದವು ಎಂದು ತಿಳಿಸಿದರು.
    17 ವರ್ಷ ಪ್ರಧಾನ ಮಂತ್ರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ನೆಹರು ಹಲವು ನೀರಾವರಿ ಯೋಜನೆಗಳು, ಕೈಗಾರಿಕೆಗಳ ಅಭಿವೃದ್ಧಿ, ಕೃಷಿ ಕ್ರಾಂತಿ ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಜಗತ್ತಿನಲ್ಲಿಯೇ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಿದರು. ನೆಹರು ಅವರ ಸಿದ್ಧಾಂತಗಳು ಎಂದಿಗೂ ಪ್ರಸ್ತುತವಾಗಿವೆ. ಅವರ ಕೊಡುಗೆಯನ್ನು ಯುವಕರು ಮರೆಯಬಾರದು ಎಂದು ಹೇಳಿದರು.
    ಸಚಿವ ಡಿ.ಸುಧಾಕರ್ ಮಾತನಾಡಿ, ನೆಹರು ಜನ್ಮದಿನವನ್ನು ಸಹಕಾರ ಕ್ಷೇತ್ರದ ದಿನವನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಅವರ ಎಲ್ಲ ಯೋಜನೆಗಳು ಸಹಕಾರ ಕ್ಷೇತ್ರದ ಅಡಿಪಾಯದಲ್ಲೇ ಇವೆ. ನೆಹರೂ ಈ ದೇಶ ಎಂದೆಂದಿಗೂ ಇಷ್ಟಪಡುವ ವ್ಯಕ್ತಿಯಾಗಿದ್ದಾರೆ. ಅವರು ಭಾರತದ ಸ್ವಾತಂತ್ರೃದ ಜತೆಗೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಗಾಗಿ ದುಡಿದವರು. ಅವರ ದೇಶಪ್ರೇಮ ಎಂದಿಗೂ ಮರೆಯಲಾಗದ್ದು. ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಸಮರ್ಥ ಅಭಿವೃದ್ಧಿ ಅನುಷ್ಠಾನಗೊಳಿಸಿದ ನಾಯಕರಾಗಿದ್ದರು ಎಂದು ಅಭಿಪ್ರಾಯಪಟ್ಟರು.
    ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಮುಖಂಡರಾದ ಎಸ್.ಪಿ. ಶೇಷಾದ್ರಿ, ಎನ್. ರಮೇಶ್, ಪ್ರಸನ್ನಕುಮಾರ್, ಚಂದ್ರಶೇಖರ್, ಎಂ.ಶ್ರೀಕಾಂತ್, ಇಕ್ಕೇರಿ ರಮೇಶ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts