More

    ನೇಹದ ನೇಯ್ಗೆ ರಂಗೋತ್ಸವ ಮಾ. 27ರಿಂದ

    ಚಿಕ್ಕಮಗಳೂರು: ನಿರ್ದಿಗಂತ ತಂಡದಿಂದ ನಗರದ ಕುವೆಂಪು ಕಲಾಮಂದಿರಲ್ಲಿ ಮಾರ್ಚ್ ೨೭ರಿಂದ ಏಪ್ರಿಲ್ ೧ರವರೆಗೆ ನಾಟಕಗಳ ಹಬ್ಬ ನೇಹದ ನೇಯ್ಗೆ ರಂಗೋತ್ಸವ ಆಯೋಜಿಸಲಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ತಿಳಿಸಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ರಂಗತಂಡಗಳೊಂದಿಗೆ ಚರ್ಚಿಸಿ ನಾಟಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಮಾ. ೨೭ರಂದು ಸಂಜೆ ೫.೩೦ಕ್ಕೆ ನಾಟಕೋತ್ಸವನ್ನು ನಟ ಕಿಶೋರ್ ಉದ್ಘಾಟಿಸಲಿದ್ದಾರೆ. ಹಾಡುಗಳನ್ನು ನಿರ್ದಿಗಂತ ರಂಗತಂಡ ಪ್ರಸ್ತುತಪಡಿಸಲಿದೆ. ಸಂಜೆ ೭ಕ್ಕೆ ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್ ನಾಟಕ ಪ್ರದರ್ಶನಗೊಳ್ಳುತ್ತಿದ್ದು, ಶ್ರವಣ ಹೆಗ್ಗೋಡು ನಿರ್ದೇಶನವಿದೆ. ಮಂಗಳೂರಿನ ಕಲಾಭಿ ತಂಡದವರು ಈ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಹೇಳಿದರು.
    ಕಲಾಮಂದಿರದ ಹೇಮಾಂಗಣದಲ್ಲಿ ಮಾ. ೨೮ರಂದು ಬೆಳಗ್ಗೆ ೯.೩೦ರಿಂದ ಮಧ್ಯಾಹ್ನ ೧ ಗಂಟೆಯ ವರೆಗೆ ರಂಗಸಂವಾದ ನಡೆಯಲಿದೆ. ಪ್ರಯೋಗಗೊಂಡ ನಾಟಕದ ಬಗ್ಗೆ ಚರ್ಚೆ ಇದೆ. ಶಶಿಧರ ಅಡಪ ಅವರಿಂದ ರಂಗವಿನ್ಯಾಸದ ಪ್ರಾತ್ಯಕ್ಷಿಕೆ ಇರುತ್ತದೆ. ಮಧ್ಯಾಹ್ನ ೩ಕ್ಕೆ ಲೀಕ್ ಔಟ್ ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ ೫.೩೦ರಿಂದ ೬.೩೦ಕ್ಕೆ ಬಯಲರಂಗ ಸಂಭ್ರಮವನ್ನು ಮೈಸೂರಿನ ರಿದಂ ಅಡ್ಡಾ ಪ್ರಸ್ತುತಪಡಿಸಲಿದೆ. ಸಂಜೆ ೭ರಿಂದ ಎಚ್.ಕೆ. ಶ್ವೇತಾರಾಣಿ ನಿರ್ದೇಶನದ ತಪ್ಪಿದ ಎಳೆ ನಾಟಕವನ್ನು ಚಿಕ್ಕಮಗಳೂರಿನ ಅಭಿಯನ ದರ್ಪಣ ಯುವವೇದಿಕೆ ಕಲಾವಿಧರು ಪ್ರಸ್ತುತಪಡಿಸಲಿದ್ದಾರೆ ಎಂದು ಹೇಳಿದರು.
    ಹೇಮಾಂಗಣದಲ್ಲಿ ಮಾ.೨೯ರಂದು ಬೆಳಗ್ಗೆ ೯.೩೦ರಿಂದ ಹಿಂದಿನ ದಿನ ಪ್ರಯೋಗಗೊಂಡ ನಾಟಕದ ಬಗ್ಗೆ ಚರ್ಚೆಯನ್ನು ನಿರ್ದೇಶಕ, ಸಂಘಟಕ ಪ್ರಸಾದ್ ರಕ್ಷಿದಿ ಅವರೊಂದಿಗೆ ಮಮತಾ ಮಹೇಶ್‌ಚಂದ್ರ ನಡೆಸಿಕೊಡಲಿದ್ದಾರೆ. ಡಾ.ಸವಿತಾ ರಾಣಿ ಅವರು ರೆಸ್ಟ್ಲೆಸ್‌ನೆಸ್ ಇನ್‌ಪೀಸಸ್ ಏಕವ್ಯಕ್ತಿ ರಂಗಪ್ರಯೋಗ ನಡೆಸಿಕೊಡಲಿದ್ದಾರೆ. ಸಂಜೆ ೫.೩೦ಕ್ಕೆ ಮೂಡಿಗೆರೆ ಪೂರ್ಣಚಂದ್ರತೇಜಸ್ವಿ ಕಲಾತಂಡದಿಂದ ಜನಪದ ಸಂಗೀತ ನಡೆಯಲಿದೆ. ಸಂಜೆ ೭ಕ್ಕೆ ಕಲಾಮಂದಿರದಲ್ಲಿ ಕೆ.ಪಿ. ಲಕ್ಷ್ಮಣ ನಿರ್ದೇಶನದ ಬಾಬಾಮಾರ್ಲೆ ಫ್ರಂ ಕೋಡಿಹಳ್ಳಿ ನಾಟಕವನ್ನು ಬೆಂಗಳೂರಿನ ಜಂಗಮ ಕಲೆಕ್ಟಿವ್ ತಂಡದವರು ಪ್ರಸ್ತುತ ಪಡಿಸಲಿದ್ದಾರೆ ಎಂದು ವಿವರಿಸಿದರು.
    ಹೇಮಾಂಗಣದಲ್ಲಿ ಮಾ.೩೦ರಂದು ಬೆಳಗ್ಗೆ ೯.೩೦ಕ್ಕೆ ಪ್ರದರ್ಶನಗೊಂಡ ನಾಟಕದ ಬಗ್ಗೆ ರಂಗಸಂವಾದ ನಡೆಯಲಿದೆ. ಬಳಿಕ ರಂಗಸಂಘಟಕ ಹೊನ್ನಾಳಿ ಚಂದ್ರಶೇಖರ್ ಅವರೊಂದಿಗೆ ಚರ್ಚೆ ನಡೆಯಲಿದೆ. ಮಧ್ಯಾಹ್ನ ೨ಕ್ಕೆ ಉತ್ಸವಗೊನವಾರ ನಿರ್ದೇಶನದ ಪೋಟೊ ನಾಟಕ ಪ್ರದರ್ಶನವಿದೆ. ಮಂಸೋರೆ, ರೂಪರಾವ್, ಚಂಪಾಶೆಟ್ಟಿ, ಸತ್ಯಪ್ರಕಾಶ್, ಅಭಯಸಿಂಹ ಅವರೊಂದಿಗೆ ಸಿನೆಮಾ ನನ್ನ ಒಲವು ನಿಲುವುಗಳು ಕುರಿತು ಸಂವಾದ ನಡೆಯಲಿದೆ. ಸಂಜೆ ೫ಕ್ಕೆ ಚಿಕ್ಕಮಗಳೂರಿನ ದಿನ್ಮಹಾ ಕಲಾತಂಡದಿಂದ ಬೀದಿ ನಾಟಕ ಪ್ರದರ್ಶನವಿದೆ. ಸಂಜೆ ೭ಕ್ಕೆ ಕಲಾಮಂದಿರದ ಹೊರ ಆವರಣದಲ್ಲಿ ಅರುಣಲಾಲ್ ನಿರ್ದೇಶನದ ಮತ್ತಾಯ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಮಾ.೩೧ರಂದು ಹೇಮಾಂಗಣದಲ್ಲಿ ಬೆಳಗ್ಗೆ ೯.೩೦ರಿಂದ ಪ್ರದರ್ಶನಗೊಂಡ ನಾಟಕದ ಬಗ್ಗೆ ಚರ್ಚೆ ನಡೆದರೆ, ೧೧ಕ್ಕೆ ರಂಗಭೂಮಿ ಮತ್ತು ಸೌಂದರ್ಯ ಮೀಮಾಂಸೆ, ಹೊಸಕಾಲದ ನಿರೂಪಣೆಗಳು ಕುರಿತು ಎಚ್.ಎಸ್.ಶಿವಪ್ರಕಾಶ್ ವಿಚಾರ ಮಂಡಿಸಲಿದ್ದಾರೆ. ರಂಗಭೂಮಿಯಲ್ಲಿ ಸ್ತ್ರೀಯರ ನಡೆ ಬಗ್ಗೆ ಸವಿತಾರಾಣಿ, ರಂಗಭೂಮಿ ಮತ್ತು ಪರಿಸರ ಅಂತಃ ಸಂಬಂಧದ ನೆಲೆಗಳ ಕುರಿತು ಕೃಪಾಕರ ಸೇನಾನಿ, ರಂಗಭೂಮಿಯಲ್ಲಿ ಜೀವಗುರುತುಗಳ ಅನ್ವೇಷಣೆ ಕುರಿತು ಸರಸ್ವತಿ, ರಂಗಭೂಮಿ, ಪ್ರತಿರೋಧದ ಹೊಸಮಾದರಿ ಕುರಿತು ಕೆ.ವೈ. ನಾರಾಯಣಸ್ವಾಮಿ ವಿಷಯಮಂಡಿಸಲಿದ್ದಾರೆ. ಸಂಜೆ ೬ಕ್ಕೆ ಮಲ್ಲಿಗೆ ಸುಧೀರ್ ಮತ್ತು ತಂಡ ರಂಗಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ ೭ಕ್ಕೆ ಕಲಾಮಂದಿರದಲ್ಲಿ ಮೈಸೂರಿನ ನಾವು ತಂಡದಿಂದ ಪ್ರತಿರೋಧದ ಹಾಡುಗಳು ಇವೆ. ಬಳಿಕ ಅರುಣಲಾಲ್ ನಿರ್ದೇಶನದ ಬ್ಲಾಕ್ ಬಲೂನ್ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
    ಕೊನೆದಿನವಾದ ಏಪ್ರಿಲ್ ೧ರಂದು ಬೆಳಗ್ಗೆ ಹೇಮಾಂಗಣದಲ್ಲಿ ರಂಗಸವಾದವಿದೆ. ಬಳಿಕ ಮಾತಾಡಿ ಪ್ಲೀಸ್ (ಆಮೆಕತೆ)ಯ ಪ್ರಾತ್ಯಕ್ಷಿಕೆ ಇದೆ. ಮಧ್ಯಾಹ್ನ ೨.೩೦ಕ್ಕೆ ರಂಗಭೂಮಿ ವರ್ತಮಾನ ಎಂಬ ಸಂವಾದದಲ್ಲಿ ಜೆ.ಚಂದ್ರಶೇಖರ್, ಮಹೇಶಚಂದ್ರ, ಶಿವಮೊಗ್ಗದ ರಂಗನಾಥ, ಅಹಲ್ಯಾಬಲ್ಲಾಳ, ಮಂಜುನಾಥಸ್ವಾಮಿ, ಸತೀಶ್, ಪ್ರತಿಭಾ, ಶಿವಕುಮಾರ್, ಜ್ಯೋತಿಪ್ರಕಾಶ್, ಸಾಸ್ವೇಹಳ್ಳಿ ಸತೀಶ್ ಮಾತನಾಡಲಿದ್ದಾರೆ. ಸಂಜೆ ೫.೩೦ಕ್ಕೆ ಬಹುವಾದ್ಯಗಳ ನುಡಿನಡಿಗೆ ಇದೆ. ಸಂಜೆ ೭ರಿಂದ ಡಾ.ಶ್ರೀಪಾದಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ ಆಯೋಜಿಸಲಾಗಿದೆ ಎಂದು ತಿಳಿಸಿದರು.
    ಸುದ್ದಿಗೋಷ್ಟಿಯಲ್ಲಿ ರಂಗನಿರ್ದೇಶಕ ಶ್ರೀಪಾದಭಟ್, ಪತ್ರಕರ್ತರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎನ್.ರಾಜು, ಪ್ರಮುಖರಾದ ಹಿರೇಗೌಜ ಶಿವಕುಮಾರ್, ಸಂಯೋಜಕ ವಿನಿತ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts