More

    ಖಾಕಿ ಧಿರಸಿಗೆ ತಾಕತ್ ತುಂಬ ಬೇಕು,ಅಲೋಕ್‌ಕುಮಾರ್

     

    ಖಾಕಿ ಧಿರಸಿಗೆ ತಾಕತ್ ತುಂಬ ಬೇಕು,ಅಲೋಕ್‌ಕುಮಾರ್ಚಿತ್ರದುರ್ಗ: ನಾವು ಧರಿಸಿರುವ ಖಾಕಿಗೆ ಇನ್ನಷ್ಟು ತಾಕತ್ ತುಂಬ ಬೇಕಿದೆ ಎಂದು ಎಡಿಜಿಪಿ ಅಲೋಕ್‌ಕುಮಾರ್(ಕಾ.ಸು)ಪೊಲೀಸ್ ಅಧಿಕಾರಿ,ಸಿ ಬ್ಬಂದಿಗೆ ಸಲಹೆ ನೀಡಿದರು. ನಗರದ ಕವಾಯಿತು ಮೈದಾನದಲ್ಲಿ ಗುರುವಾರ ಪೊಲೀಸ್ ಪೆರೇಡ್ ಪರಿವೀಕ್ಷಿಸಿ ಮಾತನಾಡಿ,ನಮಗೆ ಪೊ ಲೀಸ್ ಕೆಲಸ ದೊರೆತಿರುವುದು ನಮ್ಮ ಪುಣ್ಯ.

    ವೈದ್ಯರನ್ನು ಹೊರತು ಪಡಿಸಿ,ಜನರಿಗೆ ಪೊಲೀಸ್‌ಸೇವೆ ಅತ್ಯಗತ್ಯವಾಗಿದೆ. ಸಾರ್ವಜನಿಕರ ಮಾನ-ಪ್ರಾಣ,ಆಸ್ತಿಪಾಸ್ತಿ ರಕ್ಷಣೆ ನಮ್ಮ ಹೊ ಣೆ. ಕರ್ತವ್ಯಪಾಲನೆ ವೇಳೆ ಜಾತಿ,ಮತ,ಧ್ವೇಷಾಸೂಯೆಗಳು ನುಸುಳಬಾರದು. ಸ್ವೀಕರಿಸಿರುವ ಪ್ರತಿಜ್ಞೆ ಮರೆಯಬಾರದು. ತ್ವರಿತವಾಗಿ ಸಾರ್ವಜನಿಕರ ದೂರುಗಳಿಗೆ ಕಾನೂನಾತ್ಮಕವಾಗಿ ಸ್ಪಂದಿಸಬೇಕು.

    ಸಿವಿಲ್,ಕೆಎಸ್‌ಆರ್‌ಪಿ ಹಾಗೂ ಡಿಎಎಸ್‌ಆರ್ ವಿಭಾಗಗಳನ್ನು ಒಗ್ಗೂಡಿಸಬೇಕೆಂಬ ಬೇಡಿಕೆ ಇದೆ. ಇದನ್ನು ಸಿವಿಲ್ ಸಿಬ್ಬಂದಿ ಗಮನಿಸ ಬೇಕು. ನಿರ್ಲಕ್ಷೃದ ಕರ್ತವ್ಯ ಸಲ್ಲದು. ಬಂದೋಬಸ್ತ್ ಕಾರ‌್ಯ ಚೆನ್ನಾಗಿದ್ದರೂ ಅಪರಾಧ ಪ್ರಕರಣಗಳ ನಿರ್ವಹಣೆ ತೃಪ್ತಿಕರವಾಗಿಲ್ಲ. ಕೋ ಮು ಭಾವನೆ ಹೆಚ್ಚಾಗುತ್ತಿದೆ.

    ಯಾವುದೇ ಗಲಾಟೆಗಳಿಗೆ ಅವಕಾಶ ಕೊಡದಂತೆ ಯುವ ಜನರ ಸಮಿತಿ ರಚಿಸಬೇಕು,ತಪ್ಪು ದಾರಿ ತುಳಿದ ಯುವಕರಿಗೆ ತಿಳಿ ಹೇಳ ಬೇಕು. ಈಗ ನಾವು ಚುನಾವಣಾ ಸವಾಲುಗಳನ್ನೂ ಎದುರಿಸಲು ಸಜ್ಜಾಗ ಬೇಕಿದೆ. ಸಂಚಾರಿ ಪೊಲೀಸರಿಗೆ ರಿಪ್ಲೆಕ್ಟ್ ಜಾಕೆಟ್,ಬ್ಯಾಟನ್ ಕೊಡಬೇಕು.

    ಕರ್ತವ್ಯ ಹಂಚಿಕೆ
    ಕರ್ತವ್ಯ ಹಂಚಿಕೆ ಸರಿಯಾಗಿ ಇರಲಿ. ಮಹಿಳಾ ಪೊಲೀಸರನ್ನೂ ರಾತ್ರಿ ಪಾಳಿ ಗಸ್ತಿಗೆ ನಗರದಲ್ಲಿ ನಿಯೋಜಿಸಬೇಕು. ಬಂದೋಬಸ್ತ್ ಟಿಎ,ಡಿಎ ಕಳೆದ ಆಗಸ್ಟ್‌ವರೆಗೆ ಬಿಡುಗಡೆಯಾಗಿದೆ. ಆರೋಗ್ಯ ಚೆನ್ನಾಗಿರಲಿ. ಅಧಿಕ ತೂಕ ಸರಿಯಲ್ಲ.ಕುಟುಂಬದ ಯೋಗ ಕ್ಷೇಮ,ಮಕ್ಕಳ ವಿದ್ಯಾಭ್ಯಾಸದೆಡೆ ಕಾಳಜಿ ವಹಿಸಿ ಎಂದರು.

    ಮೆಚ್ಚುಗೆ ಪತ್ರ
    ದೂರು,ಸಮಸ್ಯೆಗಳನ್ನಾಲಿಸಲು ಎಡಿಜಿಪಿ ಸಿದ್ಧವಿದ್ದರೂ ಬಹುತೇಕ ಅಧಿಕಾರಿ,ಸಿಬ್ಬಂದಿ ಹಿಂದೇಟು ಹೊಡೆದರು.ವಿವಿಧ ವಿಭಾಗಗಳಲ್ಲಿ ಕಾರ‌್ಯದಕ್ಷತೆ ಮೆರೆದ ಹಾಗೂ ಭಾರತ್‌ಜೋಡೋ ಯಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಶ್ರಮಿಸಿದ ಅಧಿಕಾರಿ,ಸಿಬ್ಬಂದಿಯನ್ನು ನಗದು ಪುರಸ್ಕಾರ,ಮೆಚ್ಚುಗೆ ಪತ್ರದೊಂದಿಗೆ ಎಡಿಜಿಪಿ ಗೌರವಿಸಿದರು.
    ಕುಂದು ಕೊರತೆ
    ಡಿಎಆರ್ ಕ್ವಾಟರ್ಸ್‌ಗೆ ತೆರಳಿ ಅಲ್ಲಿಯ ನಿವಾಸಿಗಳ ಕುಂದು ಕೊರತೆ ಆಲಿಸಿದರು. ಶುದ್ಧ ಕುಡಿವ ನೀರು ಗ್ರಂಥಾಲಯ ಇತ್ಯಾದಿ ಬೇ ಡಿಕೆಗಳು ಕೇಳಿ ಬಂದವು. ಇಲಾಖೆಯಲ್ಲಿ ಮದ್ಯವ್ಯಸನಿಗಳಿದ್ದರೆ ಅವರನ್ನು ಮದ್ಯವರ್ಜನಾ ಶಿಬಿರಕ್ಕೆ ಕಳಿಸಲು ಸಿದ್ಧವೆಂದರು. 22 ವರ್ಷ ಗಳ ಹಿಂದೆ ದುರ್ಗದಲ್ಲಿ ಎಸ್ಪಿಯಾಗಿದ್ದಾಗ ಪೆರೇಡ್‌ನಲ್ಲಿ ಭಾಗವಹಿಸುತ್ತಿದ್ದದನ್ನು ನೆನಪಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts