More

    ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಸಹಕರಿಸಿ

    ನಾಯಕನಹಟ್ಟಿ: ಮೀಸಲಾತಿ ಹೋರಾಟ ಮತ್ತು ಸಮಾಜ ಸಂಘಟನೆ ಕಾರ್ಯದಲ್ಲಿ ತೊಡಗಿರುವ ವಾಲ್ಮೀಕಿ ಗುರುಪೀಠದ ಸ್ವಾಮಿಗಳಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ಕೋರಿದರು.

    ಪಟ್ಟಣದ ಹಟ್ಟಿಮಲ್ಲಪ್ಪನಾಯಕ ಪ್ರೌಢಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ವಾಲ್ಮೀಕಿ ಸಮುದಾಯ ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಸಮಾಜದ ಪ್ರಗತಿಗಾಗಿ ಗುರುಪೀಠ ಸ್ಥಾಪಿಸಲಾಗಿದೆ. ರಾಜನಹಹಳ್ಳಿಯಲ್ಲಿ ಫೆ.8, 9ರಂದು ವಾಲ್ಮೀಕಿ ಜಾತ್ರೆ ಜರುಗಲಿದ್ದು, ಇದರ ಸಿದ್ಧತೆಗಾಗಿ ವಾಲ್ಮೀಕಿ ಸ್ವಾಮೀಜಿ ಜ.10ರಂದು ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದರು.

    ಜಿಪಂ ಮಾಜಿ ಸದಸ್ಯ ಜಿ.ತಿಪ್ಪೇಸ್ವಾಮಿ ಮಾತನಾಡಿ, ಇತರ ಸಮುದಾಯಕ್ಕೆ ಹೋಲಿಸಿದರೆ ವಾಲ್ಮೀಕಿ ಸಮಾಜಕ್ಕೆ ಶೈಕ್ಷಣಿಕ ಮೀಸಲಾತಿ ಕಡಿಮೆ ಇದೆ. ಹೀಗಾಗಿ ಸಮುದಾಯದ ಎಲ್ಲ ಶಾಸಕರು ಶೇ.7.5ರ ಮೀಸಲಾತಿಗೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಸನ್ನಾನಂದ ಸ್ವಾಮೀಜಿ, ಅಗತ್ಯಬಿದ್ದರೆ ರಾಜೀನಾಮೆ ನೀಡುವಂತೆ ಶಾಸಕರುಗಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

    ಜಿಪಂ ಸದಸ್ಯ ಓ. ಮಂಜುನಾಥ್, ಪಪಂ ಕೌನ್ಸಿಲರ್ ಟಿ. ಬಸಣ್ಣ, ಎನ್. ಮಹಾಂತಣ್ಣ, ನಲಗೇತನಹಟ್ಟಿ ಗ್ರಾಪಂ ಅಧ್ಯಕ್ಷ ಮುತ್ತಯ್ಯ, ಮುಖಂಡರಾದ ಕಾಕಸೂರಯ್ಯ, ಜಿ.ಬಿ. ಮುದಿಯಪ್ಪ, ಪಿ.ಒ. ತಿಪ್ಪೇಸ್ವಾಮಿ, ಎಸ್. ಓಬಣ್ಣ, ಕೆ.ಓ. ರಾಜಯ್ಯ, ತಾಪಂ ಮಾಜಿ ಸದಸ್ಯ ಬಸವರಾಜ್, ಓಬಣ್ಣ, ನಾಗರಾಜ್, ಗಜ್ಜುಗಾನಹಳ್ಳಿ, ಬೋರಯ್ಯ, ಪಿ.ಬಿ. ನಾರಾಯಣ ಸ್ವಾಮಿ ಇತರರಿದ್ದರು.

    (ಎನ್‌ವೈಕೆ ವಾಲ್ಮೀಕಿ 06)
    ===

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts