More

    ಮ್ಯಾಜಿಕ್ ಕಲೆಗೆ ಬೇಕಿದೆ ಪ್ರೋತ್ಸಾಹ, ಡಿಸಿ ಡಾ.ರಾಜೇಂದ್ರ ಅಭಿಮತ

    ಮಂಗಳೂರು: ಮ್ಯಾಜಿಕ್ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸಬೇಕು. ಆ ಮೂಲಕ ಯುವಜನರೂ ಅದನ್ನು ಸ್ವೀಕರಿಸುವಂತಾಗಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆಶಿಸಿದರು.

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಮಂಗಳವಾರ ಭಾರತೀಯ ಜಾದೂ ಪಿತಾಮಹ ಪ್ರೊ.ಪಿ.ಸಿ.ಸರ್ಕಾರ್ ಅವರ 109ನೇ ಜನ್ಮದಿನ ಪ್ರಯುಕ್ತ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಜಾದೂ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಜಾದೂ ಕಲೆಯನ್ನು ಹಿಂದೆ ಎಲ್ಲರೂ ಕುಟುಂಬ ಸಹಿತ ಆಸ್ವಾದಿಸುತ್ತಿದ್ದೆವು. ಆದರೆ ಬದಲಾಗುತ್ತಿರುವ ತಂತ್ರಜ್ಞಾನದ ಹೊಡೆತದಿಂದ ೀ ಕಲೆ ಹಿನ್ನಡೆ ಅನುಭವಿಸಿದೆ. ಅನೇಕ ಯುವಜನರು ಈಗ ಅದನ್ನು ಅನುಸರಿಸುತ್ತಿರುವುದು ಧನಾತ್ಮಕ ಬೆಳವಣಿಗೆ. ರಾಜ್ಯಾದ್ಯಂತ ಇದನ್ನು ಪಸರಿಸುವಲ್ಲಿ ಜಾದೂಗಾರ ಕುದ್ರೋಳಿ ಗಣೇಶ್ ಸಾಧನೆ ಶ್ಲಾಘನೀಯ ಎಂದರು.

    ಮಾಜಿ ಮೇಯರ್ ದಿವಾಕರ್ ಕದ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಬಿ ಶುಭ ಹಾರೈಸಿದರು. ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಜಾದೂಗಾರ, ಪ್ರೊ.ಮಾಧವ ಕಾಸರಗೋಡು ಅವರಿಗೆ ಐಂದ್ರಜಾಲಿಕ ಪ್ರಶಸ್ತಿ ನೀಡಲಾಯಿತು. ವಿಸ್ಮಯ ಜಾದೂ ಪ್ರತಿಷ್ಠಾನ ಅಧ್ಯಕ್ಷ ಕುದ್ರೋಳಿ ಗಣೇಶ್ ಸ್ವಾಗತಿಸಿದರು. ಪ್ರವೀಣ್ ಉಡುಪ ಕಾರ್ಯಕ್ರಮ ನಿರ್ವಹಿಸಿದರು. ಜಾದೂಗಾರರಾದ ರಾಜೇಶ್ ಮಳಿ, ಅಪೂರ್ವ ಮಳಿ, ಅಂಜನಾ ಮಳಿ, ಸೂರಜ್ ಚೌಟ, ಸತೀಶ್ ಹೆಮ್ಮಾಡಿ ಹಾಗೂ ಕುದ್ರೋಳಿ ಗಣೇಶ್ ಜಾದೂ ಪ್ರದರ್ಶನ ನೀಡಿದರು.

    ರಾಮಕೃಷ್ಣ ಮಠ ಹಮ್ಮಿಕೊಂಡ ಸ್ವಚ್ಛತಾ ಆಂದೋಲನದಲ್ಲಿ ಸ್ವಚ್ಛತೆ ಅರಿವು ಮೂಡಿಸಲು ಕುದ್ರೋಳಿ ಗಣೇಶ್ ಮ್ಯಾಜಿಕ್ ಕಲೆಯನ್ನು ಬಳಸಿಕೊಂಡರು. ಸರ್ಕಾರ, ಜಿಲ್ಲಾಡಳಿತ ಅದೇ ಮಾದರಿಯಲ್ಲಿ ಹಲವು ಸಾಮಾಜಿಕ ಕಾರ್ಯಗಳಿಗೆ ಜಾದೂಗಾರರನ್ನು ಬಳಸಿಕೊಂಡು ಪ್ರೋತ್ಸಾಹ ಕೊಡಬೇಕು.
    – ಕ್ಯಾ.ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts