More

    ಜಿಲ್ಲೆಗೆ ಆಗಮಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ

    ಮಡಿಕೇರಿ: ಕಳೆದೆರಡು ವರ್ಷಗಳಿಂದ ಮಹಾಮಳೆ, ಪ್ರಾಕೃತಿಕ ವಿಕೋಪಕ್ಕೆ ನಲುಗಿರುವ ಕೊಡಗು ಜಿಲ್ಲೆಗೆ ಮುಂಜಾಗ್ರತ ಕ್ರಮವಾಗಿ ಈ ವರ್ಷ ಕೂಡ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ(ಎನ್‌ಡಿಆರ್‌ಎಫ್) ಮಂಗಳವಾರ ಆಗಮಿಸಿದೆ.

    ಕರ್ನಾಟಕಕ್ಕೆ ನಿಯೋಜಿಸಿರುವ ನಾಲ್ಕು ತಂಡಗಳ ಪೈಕಿ ಕೊಡಗಿಗೆ ಆಂದ್ರಪ್ರದೇಶದ ವಿಜಯವಾಡದ ಆರ್.ಕೆ.ಉಪಾಧ್ಯಾಯ ನೇತೃತ್ವದ 10ನೇ ಬೆಟಾಲಿಯನ್ ಪಡೆ ಮಡಿಕೇರಿಗೆ ಆಗಮಿಸಿದ್ದು ಮೈತ್ರಿ ಭವನದಲ್ಲಿ ವಾಸ್ತವ್ಯ ಹೂಡಿದೆ. 21 ಯೋಧರನ್ನು ಹೊಂದಿರುವ ಈ ತಂಡ ಭೂ ಕುಸಿತ, ಪ್ರವಾಹ, ಕಟ್ಟಡ ಧ್ವಂಸ ಕಂಡ ತಕ್ಷಣ ಕಾರ್ಯೋನ್ಮುಖಗೊಳ್ಳಲಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯ ವಾಸುದೇವ್ ತಿಳಿಸಿದ್ದಾರೆ.

    ಈಗಾಗಲೇ ಜಿಲ್ಲೆಯಲ್ಲಿರುವ ಪಡೆ ಕೆಲವು ದಿನಗಳ ಹಿಂದೆ ಒಡಿಸ್ಸಾದಲ್ಲಿ ಸೃಷ್ಟಿಯಾದ ಇಂಫಾನ್ ಚಂಡಮಾರುತ ವೇಳೆ ರಕ್ಷಣಾ ಕೆಲಸ ಮಾಡಿ ಕೊಡಗಿಗೆ ಆಗಮಿಸಿದೆ. ರಕ್ಷಣಾ ಕಾರ್ಯಕ್ಕೆ ಬೇಕಾದ ಅಗತ್ಯ ಸಲಕರಣೆಗಳೊಂದಿಗೆ ಪಡೆ ಆಗಮಿಸಿದ್ದು, ಯಾವುದೇ ಸಮಯದಲ್ಲಾದರೂ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ ಎಂದು ಪಡೆಯ ಮುಖ್ಯಸ್ಥ ಆರ್.ಕೆ.ಉಪಾಧ್ಯಾಯ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts