More

    ಪೊಲೀಸರ ವಿರುದ್ಧ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ತೀವ್ರ ಅಸಮಾಧಾನ; ಆಗಿದ್ದಾದರೂ ಏನು?

    ನವದೆಹಲಿ: ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ಮಾಡುವುದು, ಅಸಮಾಧಾನ ಹೊರಹಾಕಬೇಕಾಗಿ ಬರುವುದು ಅಸಹಜವೇನಲ್ಲ. ಆದರೆ ದೇಶದ ಪ್ರಧಾನಿಯವರ ಸಹೋದರನೇ ವ್ಯವಸ್ಥೆಯ ವಿರುದ್ಧ ಮಾತನಾಡಬೇಕಾದಂಥ ಘಟನೆಯೊಂದು ನಡೆದಿರುವುದು ವರದಿಯಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ ದಾಸ್ ಮೋದಿಯವರು ವಿಮಾನ ನಿಲ್ದಾಣದಲ್ಲೇ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿ ಪ್ರತಿಭಟನೆ ವ್ಯಕ್ತಪಡಿಸಿದ ಪ್ರಕರಣ ನಡೆದಿದೆ. ಬುಧವಾರ ಲಕ್ನೋ ವಿಮಾನ ನಿಲ್ದಾಣದಲ್ಲಿ ಇಂಥದ್ದೊಂದು ಘಟನೆ ಜರುಗಿದೆ.

    ಪ್ರಹ್ಲಾದ್ ಮೋದಿ ಅವರು 4 ಗಂಟೆ ಸುಮಾರಿಗೆ ಇಂಡಿಗೋ ವಿಮಾನದಲ್ಲಿ ಬಂದು ಇಳಿದಿದ್ದರು. ಈ ಸಂದರ್ಭದಲ್ಲಿ ಅವರ ಬೆಂಬಲಿಗರು ಅವರತ್ತ ಬರುವುದನ್ನು ತಡೆದ ಪೊಲೀಸರ ಕುರಿತು ತೀವ್ರ ಅಸಮಾಧಾನ ಉಂಟಾಗಿದ್ದು, ಅವರು ಪೊಲೀಸರ ವಿರುದ್ಧ ವಿಮಾನ ನಿಲ್ದಾಣ ಆವರಣದಲ್ಲೇ ಧರಣಿ ನಡೆಸಿದ್ದರು ಎಂಬುದಾಗಿ ಲಕ್ನೋ ಚೌಧರಿ ಚರಣ್ ಸಿಂಗ್ ವಿಮಾನನಿಲ್ದಾಣದ ಅಡಿಷನಲ್ ಜನರಲ್ ಮ್ಯಾನೇಜರ್ (ಆಪರೇಷನ್ಸ್) ಭೂಪೇಂದ್ರ ಸಿಂಗ್ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರ ಪ್ರತಿಕ್ರಿಯೆ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. (ಏಜೆನ್ಸೀಸ್)

    ಮಕ್ಕಳಾಗಲಿ ಎಂದು ವಿಶೇಷ ಪೂಜೆ ಮಾಡಲಿಕ್ಕೆ ದೇವಸ್ಥಾನಗಳ ಮೂರ್ತಿಗಳನ್ನು ಕದ್ದ ದಂಪತಿ!; ಗಂಡ ಸಿಕ್ಕಿಬಿದ್ದರೂ ಹೆಂಡತಿ ಸಿಕ್ಕಿಲ್ಲ..

    ಮಲತಾಯಿಯಿಂದಲೇ ಕೊಲೆಗೆ ಸುಪಾರಿ; ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಕೊಲೆ ಪ್ರಕರಣ, ಮಹಿಳೆಯ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts