More

    ನಂಜೇಗೌಡರು ಹಗರಣಗಳಲ್ಲಿ ಸಿಲುಕಿ ಅಭಿವೃದ್ಧಿ ಮರೆತಿದ್ದಾರೆ; ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಆರೋಪ

    ಲಕ್ಕೂರು: ಶಾಸಕ ಕೆ.ವೈ.ನಂಜೇಗೌಡರು ಹಗರಣಗಳಲ್ಲಿ ಸಿಲುಕಿ ತಾಲೂಕಿನ ಅಭಿವೃದ್ಧಿಯನ್ನು ಮರೆತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

    ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಯ ಅಂಚೆಮುಸ್ಕೂರು ಗ್ರಾಮದಲ್ಲಿ ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ಗೌಡ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ಗೌಡರು ಉತ್ತಮ ವ್ಯಕ್ತಿಯಾಗಿದ್ದು, ಜನ ಸೇವೆ ಹಾಗೂ ಜನರಿಗೋಸ್ಕರ ಬದುಕುವ ವ್ಯಕ್ತಿ. ತಾಲೂಕಿನ 28 ಗ್ರಾಪಂಗಳಲ್ಲಿ ಕಾರ್ಯಕರ್ತರ ಸಭೆಗಳನ್ನು ಏರ್ಪಡಿಸಲಾಗುವುದು ಎಂದರು.

    ಸಂಸದ ಎಸ್​.ಮುನಿಸ್ವಾಮಿ ಮಾತನಾಡಿ, ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ಗೌಡರನ್ನು ಶಾಸಕರನ್ನಾಗಿ ಮಾಡುತ್ತೇವೆ ಎಂದು ಹೇಳಿ ಪಕ್ಷಕ್ಕೆ ಕರೆದುಕೊಂಡು ಬಂದಿರುವುದು. ಅದನ್ನು ಹೈಕಮಾಂಡ್​ ತಿಮಾರ್ನ ಮಾಡಿದೆ. ನಿಮಗೆ ಯಾವುದೇ ರೀತಿಯ ಅಪನಂಬಿಕೆ ಬೇಡ. ತಾಲೂಕಿನಲ್ಲಿ ಮಣ್ಣು, ಕಲ್ಲು, ನೀರು, ಹಾಲು, ಬೆಣ್ಣೆ, ತುಪ್ಪ, ಸರ್ಕಾರಿ ಜಮೀನು ಎಲ್ಲದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ಹೋಗಲಾಡಿಸಲು ಕಾರ್ಯಕರ್ತರು ಪಣ ತೊಡಬೇಕು ಎಂದು ಹೇಳಿದರು.

    ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ಗೌಡ ಮಾತನಾಡಿ, ರಾಜಕಾರಣಿಗಳು ಸರ್ಕಾರಿ ಅಧಿಕಾರಿಗಳ ಬಳಿ ಲಂಚಕ್ಕಾಗಿ ಬೇಡಿಕೆ ಇಟ್ಟರೆ ಗೌರವ ಸಿಗುವುದಿಲ್ಲ. ಬಿಜೆಪಿಯಲ್ಲಿ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದರು.

    ಅಭಿಮಾನಿಗಳು ಸಚಿವ ಮುನಿರತ್ನಗೆ ಕ್ರೇನ್​ ಮೂಲಕ ಸೇಬಿನ ಹಾರ ಹಾಕಿದರು. ಡಿ.ಎನ್​.ದೊಡ್ಡಿ ಗ್ರಾಪಂ ಅಧ್ಯಕ್ಷ ಚಿಕ್ಕತಿಮ್ಮರಾಯಪ್ಪ, ಪಡುವನಹಳ್ಳಿ ಗ್ರಾಪಂ ಸದಸ್ಯರಾದ ಶ್ರೀನಿವಾಸ್​, ಬೂತಪ್ಪ ಬಿಜೆಪಿಗೆ ಸೇರ್ಪಡೆಯಾದರು.

    ಬಿಬಿಎಂಪಿ ಸದಸ್ಯ ಮಂಜುನಾಥ್​, ಶಿಡ್ಲಘಟ್ಟದ ಮಾಜಿ ಶಾಸಕ ರಾಜಣ್ಣ, ಜಿಪಂ ಮಾಜಿ ಸದಸ್ಯ ಚಿನ್ನಸ್ವಾಮಿಗೌಡ, ಗ್ರಾಪಂ ಸದಸ್ಯರಾದ ಸಂಪಂಗೆರೆ ರಘು, ಪ್ರೇಮ್​ಕುಮಾರ್​, ಗ್ರಾಪಂ ಮಾಜಿ ಉಪಾಧ್ಯಕ್ಷ ವೆಂಕಟರಮಣಪ್ಪ, ಮಾಜಿ ಸದಸ್ಯರಾದ ಸಂಪಂಗೆರೆ ಬಾಲಕೃಷ್ಣ, ಬಾಬು, ಮುಖಂಡರಾದ ಅಗ್ರಿ ನಾರಾಯಣಪ್ಪ, ಎ.ಎನ್​.ಬಸಪ್ಪ, ಟಿ.ಆರ್​.ವೆಂಕಟೇಶ್​ಗೌಡ, ಮರಿರಾಜು, ವೇಣು, ಬೆಳ್ಳಾವಿ ಸೋಮಣ್ಣ, ಅಮುದಾ ವೇಣು, ಪದ್ಮಾವತಿ, ಚಂದ್ರು, ರಘು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts