More

    ಒಂದು ತಿಂಗಳಲ್ಲಿ 83 ಲಕ್ಷ ರೂ. ಸಂಗ್ರಹ

    ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹುಂಡಿ ಪರ್ಕಾವಣೆಯಲ್ಲಿ 83 ಲಕ್ಷ ರೂ. ನಗದು ಸಂಗ್ರಹವಾಗಿದೆ.

    ಒಟ್ಟು 83,12,484 ರೂ. ನಗದು, 45 ಗ್ರಾಂ ಚಿನ್ನ, 1.4 ಕೆಜಿ ಬೆಳ್ಳಿ ಹಾಗೂ 15 ವಿದೇಶಿ ಡಾಲರ್ ಲಭ್ಯವಾಗಿವೆ. ಒಟ್ಟು 30 ಹುಂಡಿಗಳ ಎಣಿಕೆಯನ್ನು ಮಾಡಲಾಗಿದೆ. ಇದು ಒಂದು ತಿಂಗಳ ಅವಧಿಯಲ್ಲಿ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.

    ದೇವಾಲಯದ ವಸಂತ ಮಂಟಪ ಹಾಗೂ ಕಲ್ಯಾಣ ಮಂಟಪದಲ್ಲಿ ಮಂಗಳವಾರ ದಿನವಿಡೀ ನಡೆದ ಹುಂಡಿ ಪರ್ಕಾವಣೆಯಲ್ಲಿ ಕೆನರಾ ಬ್ಯಾಂಕ್ ನೌಕರರು, ದೇವಾಲಯದ ಸಿಬ್ಬಂದಿ ಹಾಗೂ ವಿವಿಧ ಮಹಿಳಾ ಸ್ವಸಹಾಯ ಸಂಘ ಪದಾಧಿಕಾರಿಗಳು ಸೇರಿ 120ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.

    ವಿಡಿಯೋ ಕ್ಯಾಮರಾ ಕಣ್ಗಾವಲಿನಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಎಣಿಕಾ ಕಾರ್ಯ ನಡೆಯಿತು. ದೇವಾಲಯ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಯ್ಯ ಪರ್ಕಾವಣೆಯ ಉಸ್ತುವಾರಿ ಹೊತ್ತಿದ್ದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವನಂಜಯ್ಯ, ಸದಸ್ಯರಾದ ಪುಟ್ಟನಿಂಗಶೆಟ್ಟಿ, ಆರ್.ಇಂದನ್ ಬಾಬು, ಮಂಜುಳಾ ಮಧು, ಶ್ರೀಧರ್, ಶಶಿರೇಖಾ ಹಾಜರಿದ್ದರು.

    ಅಮಾನ್ಯ ನೋಟು ಪತ್ತೆ: ಅಮಾನ್ಯಗೊಂಡಿರುವ 1000 ರೂ. ಮುಖಬೆಲೆಯ 8, 500 ಮುಖಬೆಲೆಯ 55 ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿವೆ. ಪ್ರತಿ ಎಣಿಕೆಯಲ್ಲೂ ಅಮಾನ್ಯ ನೋಟು ಕಂಡುಬರುತ್ತಿವೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts