More

    ನಂದಿ ಹುಂಡಿ ದೋಚಿದ್ದ ಖದೀಮರ ಬಂಧನ

    ಚಿಕ್ಕಬಳ್ಳಾಪುರ : ತಾಲೂಕಿನ ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದ ಹುಂಡಿ ಹಣ ದೋಚಿದ್ದ ಕಳ್ಳರಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.

    ಮೈಸೂರಿನ ಏಕಲವ್ಯ ನಗರದ ಕಬಾಲ್ ಚಂದು (25) ಮತ್ತು ಮಂಡ್ಯ ಜಿಲ್ಲೆಯ ಹಿಂಡುವಾಳದ ಸುಮಂತ್ (21) ಬಂಧಿತರು. ಜ.30ರಂದು ಶ್ರೀ ಭೋಗನಂದೀಶ್ವರ ದೇವಾಲಯದ ಶೃಂಗತೀರ್ಥ ಕಲ್ಯಾಣದ ಗೋಪುರದಿಂದ ದೇಗುಲ ಒಳ ಪ್ರವೇಶಿಸಿದ್ದ ಕಳ್ಳರು ಹುಂಡಿ ಹೊತ್ತೊಯ್ದು ಕೊನೆಗೆ ಹಣ ತೆಗೆದುಕೊಂಡು ಹುಂಡಿ ಬಿಸಾಡಿದ್ದರು. ಇದೆಲ್ಲವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆದರೆ ಖದೀಮರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರಿಂದ ಗುರುತು ಪತ್ತೆಯಾಗಿರಲಿಲ್ಲ.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಡಿವೈಎಸ್ಪಿ ಕೆ.ರವಿಶಂಕರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಪ್ರಶಾಂತ್, ನಂದಿ ಗಿರಿಧಾಮ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಬಸನಗೌಡ ಕೆ.ಪಾಟೀಲ್, ಅಪರಾಧ ಪತ್ತೆ ದಳದ ರವಿಕುಮಾರ್, ಬಾಲಕೃಷ್ಣ, ಮಧುಸೂಧನ್, ವಿಜಯ್ ಕುಮಾರ್‌ರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು. ಕಾರ್ಯಾಚರಣೆ ತಂಡ ದೊಡ್ಡಬಳ್ಳಾಪುರದ ರಾಜಘಟ್ಟ ಮಾರ್ಗದ ರೈಲ್ವೆ ಬ್ರಿಡ್ಜ್ ಬಳಿ ಕಳ್ಳರಿಬ್ಬರನ್ನು ಬಂಧಿಸಿದ್ದು, ಎರಡು ಕಬ್ಬಿಣದ ರಾಡ್, ದ್ವಿಚಕ್ರ ವಾಹನ ಮತ್ತು 6,700 ನಗದು ಹಣವನ್ನು ವಶಪಡಿಸಿಕೊಂಡಿದೆ.

    ಬೆಂಗಳೂರು ನಗರದ ಅಮೃತಹಳ್ಳಿ, ದೇವನಹಳ್ಳಿ, ಮಾದನಾಯಕನಹಳ್ಳಿ, ಚಿಕ್ಕಪೇಟೆ, ಸೋಲದೇವನಹಳ್ಳಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ, ಮಂಡ್ಯ ಜಿಲ್ಲೆಯ ಮದ್ದೂರು, ನಾಗಮಂಗಲ, ತುಮಕೂರು, ಮೈಸೂರು ಸೇರಿ ಇತರ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts