More

    ನಂದನವನ ಶಾಲೆಗೆ ನೂತನ ಕಟ್ಟಡ

    ಕುಂದಾಪುರ: ಸ್ಥಳಾವಕಾಶ ಕೊರತೆಯಿಂದ ಹಲವು ಸಮಸ್ಯೆ ಎದುರಿಸುತ್ತಿದ್ದ ಬೈಂದೂರು ತಾಲೂಕು ಕೆರ್ಗಾಲು ಗ್ರಾಪಂ ನಂದನವನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ, ಆವರಣ ಗೋಡೆ ನಿರ್ಮಿಸಿಕೊಡಲಾಗಿದ್ದು, ಪ್ರಸಕ್ತ ಇಡೀ ಶಾಲೆಯ ಚಿತ್ರಣವೇ ಬದಲಾಗಿದೆ.
    ಮಲೆನಾಡು ಅಭಿವೃದ್ಧಿ ಯೋಜನೆ, ಶಾಸಕರ ನಿಧಿ ಬಳಸಿ 21 ಲಕ್ಷ ರೂ. ವೆಚ್ಚದಲ್ಲಿ ಎರಡು ಕೊಠಡಿ ನಿರ್ಮಾಣ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಕೃತಿ ವಿಕೋಪ ನಿಧಿಯಲ್ಲಿ 2.50 ಲಕ್ಷ ನೀಡಿದ್ದು, ಆಡಳಿತ ಕಚೇರಿ ನಿರ್ಮಿಸಲಾಗಿದೆ. ಜಿಪಂ ಹಾಗೂ ಗ್ರಾಪಂ ಜಂಟಿ ಅನುದಾನ ರೂ.2.50ದಲ್ಲಿ ಲಕ್ಷ ಶೌಚಗೃಹ ಮತ್ತು ಉದ್ಯೋಗ ಖಾತ್ರಿ ಯೋಜನೆಯಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ ನಿರ್ಮಿಸಲಾಗಿದೆ.
    ಅಂಗವಿಕಲ ಮಕ್ಕಳು ಶಾಲೆಗೆ ಬರಲು ಅನುಕೂಲವಾಗುವಂತೆ ರ‌್ಯಾಂಪ್, ಶೌಚಗೃಹ ನಿರ್ಮಿಸಲಾಗಿದೆ. ಶಾಲೆ ಮುಂಭಾಗದಲ್ಲಿ ಧ್ವಜಸ್ತಂಭ, ಅಂಗನವಾಡಿ ಕೂಡ ಇದೆ. ಶಾಲೆಯಲ್ಲಿ 25 ಮಕ್ಕಳಿದ್ದು, 6 ಮಕ್ಕಳು 5ನೇ ತರಗತಿ ಮುಗಿಸಿದ್ದು, ಬೇರೆ ಶಾಲೆಗೆ ಹೋಗಲಿದ್ದಾರೆ. ನಂದನವನ ಸರ್ಕಾರಿ ಶಾಲೆ ಕುರಿತು ವಿಜಯವಾಣಿ ಎರಡು ಬಾರಿ ವಿಸ್ತೃತ ವರದಿ ಪ್ರಕಟಿಸಿತ್ತು.

    ಶತಮಾನ ಕಂಡ ಶಾಲೆ
    ವಿದ್ಯಾಭಿಮಾನಿಯೊಬ್ಬರು ದಾನಪತ್ರದ ಮೂಲಕ ನೀಡಿದ 25 ಸೆಂಟ್ಸ್ ಜಾಗದಲ್ಲಿ 1914ರಲ್ಲಿ ನಂದನವನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಯಿತು. ಕೆರ್ಗಾಲ್ ಗ್ರಾಮ ನಂದನವನ, ಕರ್ಕಿಕಳಿ, ಮಡಿಕಲ್ ಪರಿಸರದ ಮುನ್ನೂರಕ್ಕೂ ಅಧಿಕ ಮೀನುಗಾರಿಕಾ ವೃತ್ತಿ ಅವಲಂಬಿತ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡುತ್ತಿತ್ತು. ಆರಂಭದಲ್ಲಿ 400ಕ್ಕೂ ಅಧಿಕ ಮಕ್ಕಳಿದ್ದು, ಬಳಿಕ ಮಕ್ಕಳ ಸಂಖ್ಯೆ ಕುಂಠಿತವಾಯಿತು. ಉಪ್ಪುಂದ, ಮಡಿಕಲ್, ನಂದನವ ಪರಿಸರದ ಮಕ್ಕಳಿಗೂ ಆಧಾರವಾಗಿದ್ದ ಈ ಶಾಲೆ ಶತಮಾನ ಕಂಡಿದೆ.

    ಕಳೆದ ಬಾರಿ ಸುರಿದ ಗಾಳಿ ಮಳೆಗೆ ಮೂರು ಕೊಠಡಿ, ಪೀಠೋಪಕರಣ ಸೇರಿದಂತೆ ಎಲ್ಲವೂ ನೆಲಸಮವಾಗಿತ್ತು.ಅಡುಗೆ ಕೋಣೆ, ಸ್ಟಾಕ್ ರೂಮ್‌ನಲ್ಲಿ ಮಕ್ಕಳನ್ನು ಕೂರಿಸಿ ಪಾಠ ನಡೆಯುತ್ತಿತ್ತು. ಬಳಿಕ ಸ್ಥಳೀಯ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿವಿಧ ಯೋಜನೆಯಡಿ ಅನುದಾನ ಒದಗಿಸಿ ಮೂರು ಕಟ್ಟಡ, ಶೌಚಗೃಹ ನಿರ್ಮಾಣವಾಗಿದೆ.
    ಶಾರದಾ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂದನವನ

    ಶಾಲಾ ಕಟ್ಟಡ ಕುಸಿದ ನಂತರ ಸ್ಥಳಕ್ಕೆ ಭೇಟಿ ನೀಡಿ ಹೊಸ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಿದ್ದು, ಈಗ ಸಾಕಾರಗೊಂಡಿದೆ. ಸಂಸದ ಬಿ.ವೈ.ರಾಘವೇಂದ್ರ ಸಹಕಾರದಲ್ಲಿ ಒಂದು ಕೋಟಿ ರೂ. ಅನುದಾನದಲ್ಲಿ 10 ಶಾಲಾ ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಿತ್ತು. ಅದರಲ್ಲಿ ಒಂದು ಕಟ್ಟಡ ನಂದನವನಕ್ಕೆ ಮಂಜೂರು ಮಾಡಲಾಗಿತ್ತು. ಲೋಕೋಪಯೋಗಿ ಇಲಾಖೆ ಮೂಲಕ ನಾಲ್ಕು ಶಾಲಾ ಕಟ್ಟಡಕ್ಕೆ ಅನುದಾನ ಬಂದಿದ್ದು, ಅದರಲ್ಲಿ ಒಂದು ನಂದನವನಕ್ಕೆ ನೀಡಲಾಗಿತ್ತು.
    ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕ ಬೈಂದೂರು

    ಚಿತ್ರಗಳು :ಕೆಎನ್‌ಡಿ_16 ಜೆಯುಎನ್‌_1,2,3
    1.ನಂದನವನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಾಮಫಲಕ ಅಳವಡಿಸಲಾಯಿತು.
    2.ಹಿಂದೆ ಪಾಳುಬಿದ್ದ ಕೋಟೆಯಂತಿದ್ದ ನಂದನವನ ಶಾಲೆ ಪ್ರಸಕ್ತ ನೂತನ ಕಟ್ಟಡ, ಕಾಂಪೌಂಡ್ ನಿರ್ಮಿಸಲಾಗಿದೆ.
    3.ಮೂರು ಲಕ್ಷ ರೂ.ವೆಚ್ಚದಲ್ಲಿ ಶಾಲಾ ಮಕ್ಕಳಿಗಾಗಿ ನಿರ್ಮಿಸಿದ ಶೌಚಗೃಹ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts