More

    ನಮ್ಮೂರಾಗ ಹೆಣ್ಮಕ್ಳಿಗೆ ಮರ್ಯಾದಿ ಇಲ್ಲದ್ಹಂಗ ಆಗೈತ್ರಿ..!

    ರೋಣ: ‘ಯಪ್ಪಾ, ನಮ್ಮೂರಾಗ ಹೆಣ್ಮಕ್ಳಿಗೆ ಮರ್ಯಾದಿ ಇಲ್ಲದ್ಹಂಗ ಆಗೈತ್ರಿ. ಹೊರಕಡಿ ಹೋಗಾಕ ಒಂದ್ಗೇಣು ಜಾಗ ಇಲ್ರಿ. ನಮ್ ತ್ರಾಸು ಯಾರಿಗೂ ತಿಳಿವಲ್ದು’.

    ಹೀಗೆ ಮಾಧ್ಯಮದವರ ಮುಂದೆ ಅಸಮಾಧಾನ ಹೊರ ಹಾಕಿದ್ದು, ತಾಲೂಕಿನ ಜಿಗಳೂರ ಗ್ರಾಮದ ಮಹಿಳೆಯರು.

    ಗ್ರಾಮದ ಬಹುತೇಕ ಮನೆಗಳಲ್ಲಿ ವೈಯಕ್ತಿಕ ಶೌಚಗೃಹ ನಿರ್ವಣಕ್ಕೆ ಅನುಕೂಲವಿಲ್ಲ. ಹೀಗಾಗಿ ಬಹಿರ್ದೆಸೆಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಮುಂದಿನ ಬಯಲನ್ನೇ ಅವಲಂಬಿಸಿದ್ದು, ನರಕಯಾತನೆ ಅನುಭವಿಸುತ್ತಿದ್ದಾರೆ. ನಿತ್ಯ ಸುರ್ಯೋದಯಕ್ಕೆ ಮೊದಲು ಅಥವಾ ಸೂರ್ಯಾಸ್ತ ನಂತರ ಬಹಿರ್ದೆಸೆಗೆ ಹೋಗಬೇಕು. ಇದರಿಂದ ಬೇಸತ್ತ ಮಹಿಳೆಯರು, ಸಾಮೂಹಿಕ ಮಹಿಳಾ ಶೌಚಗೃಹ ನಿರ್ವಿುಸಿಕೊಡುವಂತೆ ಸಾಕಷ್ಟು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಪ್ರಯೋಜನವಾಗಿಲ್ಲ.

    ಸದ್ಯದಲ್ಲೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿವೆ ಎಂಬುದನ್ನು ಅರಿತಿರುವ ಮಹಿಳೆಯರು, ‘ಈ ಬಾರಿ ವೋಟು ಕೇಳಲು ಬಂದರೆ ತಕ್ಕ ಪಾಠ ಕಲಿಸುತ್ತೇವೆ. ಮೊದಲು ಸಾಮೂಹಿಕ ಮಹಿಳಾ ಶೌಚಗೃಹ ನಿರ್ವಿುಸಿ ನಂತರ ವೋಟು ಕೇಳಲು ಬನ್ನಿ ಎಂದು ಹೇಳಿ ಕಳುಹಿತ್ತೇವೆ’ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

    ನಿತ್ಯ ಅನುಭವಿಸುತ್ತಿರುವ ತೊಂದರೆ ಕುರಿತು ಗ್ರಾಮದ ಮಂಜುಳಾ ಬಸೇವಡೆಯರ, ಈರವ್ವ ನಿಡಗುಂದಿ, ಕಸ್ತೂರೆವ್ವಾ ಹಡಪದ, ಶಾಂತವ್ವಾ ನಸಬೀ, ಸುವರ್ಣಾ ಹಾಳಕೇರಿ ಮುಂತಾದವರು ವಿವರಿಸಿದರು.

    ವೈಯಕ್ತಿಕ ಶೌಚಗೃಹ ನಿರ್ವಿುಸಿಕೊಂಡರೆ ತಕ್ಷಣವೇ ಹಣ ನೀಡುತ್ತೇವೆ. ಗ್ರಾಮದಲ್ಲಿ ಸಾಮೂಹಿಕ ಮಹಿಳಾ ಶೌಚಗೃಹ ನಿರ್ವಣಕ್ಕೆ ಜಾಗ ನೀಡಿ, ಅವುಗಳ ನಿರ್ವಹಣೆಯನ್ನು ಅವರೇ ಮಾಡಿಕೊಳ್ಳುವುದಾದರೆ ಶೌಚಗೃಹ ನಿರ್ವಿುಸಿಕೊಡಲಾಗುವುದು.

    ಸಂತೋಷ ಪಾಟೀಲ, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts