More

    ದತ್ತಪೀಠದಲ್ಲಿ ನಿಷೇಧವಿದ್ದರೂ ಮಾಂಸ-ನಮಾಜ್!; ವಿಡಿಯೋ ವೈರಲ್​

    ಚಿಕ್ಕಮಗಳೂರು: ದೇಶ ಮಟ್ಟದಲ್ಲಿ ಜ್ಞಾನವಾಪಿ ಶಿವಲಿಂಗ ಸುದ್ದಿಯಲ್ಲಿದ್ದರೆ ಇದೀಗ ರಾಜ್ಯಮಟ್ಟದಲ್ಲಿ ದತ್ತಪೀಠದಲ್ಲಿ ಮಾಂಸ-ನಮಾಜ್ ಸುದ್ದಿಯಲ್ಲಿದೆ. ಮಾತ್ರವಲ್ಲ, ಆ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.

    ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್​, ನಮಾಜ್ ಮಾಡುವುದಕ್ಕೆ ಅದೇನು ಮಸೀದಿಯಾ? ಅಲ್ಲಿನ ಜಿಲ್ಲಾಧಿಕಾರಿ-ಎಸ್​ಪಿ, ಮುಜರಾಯಿ ಇಲಾಖೆ ಏನು ಮಾಡುತ್ತಿದೆ? ನಿಷೇಧವಿದ್ದರೂ ಮಾಂಸ ತಂದಿದ್ದಾರೆ, ಸಂಬಂಧಪಟ್ಟವರು ಕತ್ತೆ ಕಾಯುತ್ತಿದ್ದರಾ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

    ಹಿಂದೂಗಳು ಬಂದ ಕೂಡಲೇ ವಿಡಿಯೋ ಹಿಡಿದುಕೊಂಡು ಬರುತ್ತೀರಿ. ಇದು ಮರುಕಳಿಸಿದರೆ ನಾವೇ ಉತ್ತರ ಕೊಡಬೇಕಾಗುತ್ತದೆ. ಆಗ ಗಲಭೆ-ಗೊಂದಲ-ಸುಡುಗಾಡಾಯ್ತು ಅಂದ್ರೆ ನೀವೇ ಜವಾಬ್ದಾರಿ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

    ದತ್ತಪೀಠ ಹಿಂದೂಗಳ ಪೀಠ, ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ. ಹೈಕೋರ್ಟ್ ಹೇಳಿದ ಮೇಲೆ ಅದು ಪೂರ್ತಿ ಹಿಂದೂಗಳ ಪೀಠ ಆಗುತ್ತೆ. ಧಾರ್ಮಿಕ ದತ್ತಿ ಇಲಾಖೆಗೆ ಹಿಂದೂಗಳ ದೇವಸ್ಥಾನ-ಮಠಗಳಿಗೆ ಸಂಬಂಧಪಟ್ಟಿದ್ದಾಗುತ್ತದೆ ಎಂದು ಮುತಾಲಿಕ್ ಹೇಳಿದ್ದಾರೆ.

    ಪೆಟ್ರೋಲ್​-ಡೀಸೆಲ್ ಬೆಲೆ ಇಳಿಕೆ, ಅಡುಗೆ ಅನಿಲಕ್ಕೆ 200 ರೂ. ಸಬ್ಸಿಡಿ!

    ಕಡ್ಡಾಯ ನಿವೃತ್ತಿ ಹೊಂದಿದ್ದ ಜಡ್ಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts