More

    ನಾಲತವಾಡ ಪ್ರವೇಶಿಸಿದ ಸಂಕಲ್ಪ ನಡಿಗೆ

    ನಾಲತವಾಡ: ಸ್ವಾತಂತ್ರೃದ ಅಮೃತ ಮಹೋತ್ಸವ ನಿಮಿತ್ತ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಅವರ ಪುತ್ರ ಭರತಗೌಡ ಅವರ ನೇತೃತ್ವದಲ್ಲಿ ಆರಂಭವಾದ ಯುವ ಸಂಕಲ್ಪ ನಡಿಗೆ ಹಿರೇಮುರಾಳ ಹಾಗೂ ನಾಗರಬೆಟ್ಟ ಮೂಲಕ ಮಂಗಳವಾರ ಪಟ್ಟಣ ಪ್ರವೇಶಿಸುತ್ತಿದ್ದಂತೆ ಭವ್ಯ ಸ್ವಾಗತ ಕೋರಲಾಯಿತು.ಮುದ್ದೇಬಿಹಾಳ ತಾಲೂಕಿನ ಸಾವಿರಾರು ರಾಷ್ಟ್ರ ಭಕ್ತರೊಂದಿಗೆ ಪಟ್ಟಣ ಪ್ರವೇಶಿಸಿದ ಸಂಕಲ್ಪ ನಡಿಗೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಪಂ ವ್ಯಾಪ್ತಿಯ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ, ಕಾಲೇಜ್ ಸಿಬ್ಬಂದಿ, ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಭಾಗವಹಿಸಿ ನಡಿಗೆಗೆ ಸಾಥ್ ನೀಡಿದರು.

    ಅಮರೇಶ್ವರ ದೇವಸ್ಥಾನದಲ್ಲಿ ಆಶಾ ಕಾರ್ಯಕರ್ತೆಯರು ಶಾಸಕರು ಹಾಗೂ ಪುತ್ರರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಗಣ್ಯರಾದ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ಪಟ್ಟಣ ಪ್ರವೇಶಿಸುತ್ತಿದ್ದಂತೆ ಶಾಸಕ ನಡಹಳ್ಳಿ ಹಾಗೂ ಪುತ್ರ ಭರತಗೌಡ ಅವರಿಗೆ ನಾನಾ ವೇಷ ಧರಿಸಿ ಕಲಾ ಪ್ರದರ್ಶನ ನೀಡಿದ ಮಂಡ್ಯದ ಕಲಾತಂಡಗಳ ಸದಸ್ಯರು ಜೆಸಿಬಿ ಯಂತ್ರಗಳ ಸಹಾಯದಿಂದ ಹೂಗುಚ್ಛ ನೀಡಿ ಸ್ವಾಗತಿಸಿದರು.

    ಶಾಸಕರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಹಿರಿಯ ಜೀವಿ ನೀಲಮ್ಮ ಬಿಳೇಬಾವಿ ಧ್ವಜ ಸ್ವಾಗತ ಕೋರುವ ಮೂಲಕ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡು ಯುವರನ್ನು ಹುರಿದುಂಬಿಸಿ ಯಾತ್ರೆ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

    ವೀರೇಶ್ವರ ವಿದ್ಯಾ ಸಂಸ್ಥೆ ಆವರಣದಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಸಕ ನಡಹಳ್ಳಿ ಅಪಾರ ಬೆಂಬಲಿಗರೊಂದಿಗೆ ಕಾಲೇಜಿನಲ್ಲೇ ವಾಸ್ತವ್ಯ ಹೂಡಿದರು. ಮುಖಂಡರಾದ ಎಂ.ಎಸ್.ಪಾಟೀಲ, ಬಸಣ್ಣ ವಡಿಗೇರ, ಎಂ.ಬಿ.ಅಂಗಡಿ, ರಮೇಶ ಬುದ್ನೂರ, ಶಶಿ ಬಂಗಾರಿ ಮತ್ತಿತರರು ಇದ್ದರು. ಬುಧವಾರ ಬೆಳಗ್ಗೆ ಪಟ್ಟಣದಿಂದ ನಿರ್ಗಮಿಸುವ ಯಾತ್ರೆ ಅಡವಿ ಸೋಮನಾಳವರೆಗೆ ಸಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts