More

    ಸೈಬರ್ ಕ್ರೈಂನಿಂದ ಹಣ ಕಳೆದುಕೊಳ್ಳುತ್ತಿದ್ದಾರೆ ಅಮಾಯಕರು: ಸರ್ಕಲ್ ಇನ್ಸ್‌ಪೆಕ್ಟರ್ ಶಿವಮಲವಯ್ಯ ಬೇಸರ

    ಕೆ.ಎಂ.ದೊಡ್ಡಿ: ಸಾರ್ವಜನಿಕರು ಸಹಕರಿಸಿದರೆ ಅಪರಾಧಗಳನ್ನು ತಡೆಯಲು ಸಾಧ್ಯ ಇದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಶಿವಮಲವಯ್ಯ ಹೇಳಿದರು.
    ಇಲ್ಲಿನ ಖಾಸಗಿ ಸಭಾಂಗಣದಲ್ಲಿ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ನಾಗರಿಕರ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕು. ಯಾರೇ ಅಪರಿಚಿತ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
    ಸೈಬರ್ ಕ್ರೈಂನಿಂದ ಸಾಕಷ್ಟು ಅಮಾಯಕರು ಹಣವನ್ನು ಕಳೆದುಕೊಳ್ಳುತ್ತಿದ್ದು, ನಿಮಗೆ ಮೊಬೈಲ್ ಕರೆಮಾಡಿ ನಾವು ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಎಟಿಎಂ ಕಾರ್ಡ್ ನಂಬರ್ ಅಥವಾ ಓಟಿಪಿ ನಂಬರ್‌ಗಳನ್ನು ಕೇಳಿ ನಿಮ್ಮ ಖಾತೆಯಲ್ಲಿರುವ ಹಣವನ್ನು ಡಾ ್ರಮಾಡಿಕೊಂಡು ವಂಚಿಸುವರ ಸಂಖ್ಯೆ ಹೆಚ್ಚಾಗಿದ್ದು ಜನರು ಜಾಗ್ರತರಾಗಬೇಕು ಎಂದು ಹೇಳಿದರು.
    ಅಪರಿಚಿತರು ಬೈಕ್‌ನಲ್ಲಿ ಬಂದು ಯಾರದೋ ಮನೆ ವಿಳಾಸ ಕೇಳುವ ರೀತಿಯಲ್ಲಿ ನಟನೆ ಮಾಡಿ ಮಹಿಳೆಯರಿಂದ ಆಭರಣಗಳನ್ನು ಕಿತ್ತು ಪರಾರಿಯಾಗುತ್ತಿದ್ದಾರೆ. ಇಂಥ ಪ್ರಕರಣಗಳನ್ನು ತಡೆಯಲು ಪ್ರತಿಯೊಬ್ಬರೂ ಜಾಗೃತರಾಗಿ ಅನುಮಾನ ಬಂದ ಕೂಡಲೇ 112ಕ್ಕೆ ಕರೆ ಮಾಡಬೇಕು. ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಬೇಕೆಂದು ಕೋರಿದರು.
    ಮಾದೇಗೌಡ ಬಡಾವಣೆ ನಿವಾಸಿಗಳು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಳ್ಳತನ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಕ್ರಮವಹಿಸಬೇಕು. ಜತೆಗೆ ಕಳ್ಳತನವಾಗಿರುವ ಮನೆಗಳ ಪ್ರಕರಣಗಳನ್ನು ಭೇದಿಸಿ, ಕಳೆದುಕೊಂಡಿರುವ ಹಣ ಮತ್ತು ಒಡವೆಗಳನ್ನು ಕೊಡಿಸಲು ಮುಂದಾಗಬೇಕೆಂದು ಮನವಿ ಸಲ್ಲಿಸಿದರು.
    ವರ್ತಕರ ಸಂಘದ ಮುಖಂಡ ರಂಗೋಲಿ ರವಿ ಮಾತನಾಡಿ, ವರ್ತಕರ ಸಂಘದ ಸಹಕಾರದೊಂದಿಗೆ ಕೆ.ಎಂ.ದೊಡ್ಡಿ ಮುಖ್ಯ ಸ್ಥಳಗಳಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದು ಸಮರ್ಪಕವಾಗಿ ನಿರ್ವಹಣೆ ಆಗುತಿಲ್ಲ. ತಾಂತ್ರಿಕ ದೋಷಗಳನ್ನು ಸರಿಪಡಿಸಿ ಕ್ಯಾಮರಾಗಳಿಗೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.
    ಗ್ರಾಮ ಪಂಚಾಯಿತಿ ಸದಸ್ಯ ಕೆ.ಟಿ.ಶ್ರೀನಿವಾಸ್ ಮಾತನಾಡಿ, ರಾತ್ರಿ 10 ಗಂಟೆಗೆ ಬಾರ್‌ಗಳ ಬಾಗಿಲು ಮುಚ್ಚಿಸಿ ವೇಶ್ಯಾವಾಟಿಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
    ಗ್ರಾ.ಪಂ.ಸದಸ್ಯರಾದ ಪುಟ್ಟರಾಮು, ಮಹೇಶ್‌ಚಂದ್ರು, ಪುಟ್ಟರಾಮರಾಜೇ ಅರಸು, ಜಿ.ಕೃಷ್ಣ, ರಂಗೋಲಿ ರವಿ, ಸಜ್ಜನ್, ಪೂಜಾರಿ ಮಹೇಶ್, ರೈತ ಸಂಘದ ಮುಖಂಡ ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ ಇತರರು ಸಲಹೆಗಳನ್ನು ನೀಡಿದರು.
    ಸಬ್‌ಇನ್ಸ್‌ಪೆಕ್ಟರ್‌ಗಳಾದ ಭೀಮಪ್ಪ ಬಾನಾಸಿ, ರಾಮಸ್ವಾಮಿ, ಭಾರತಿ ಕಾಲೇಜಿನ ಪ್ರೊ.ಬಿ.ಎಸ್.ಬೋರೇಗೌಡ, ಲಕ್ಷ್ಮೀ, ಮಂಜುಳಾ ಬೋರೇಗೌಡ, ಅಣ್ಣೂರು ಮಹೇಂದ್ರ, ಗ್ರಾ.ಪಂ.ಮಾಜಿ ಅಧ್ಯಕ್ಷ ರವಿಚಂದ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts