More

    ಫ್ರೆಂಚ್ ಓಪನ್ ಗೆಲುವಿನ ಬೆನ್ನಲ್ಲೇ ರಾಫೆಲ್ ನಡಾಲ್ ಮತ್ತೊಂದು ಸಾಧನೆ

    ಪ್ಯಾರಿಸ್: ಕ್ಲೇಕೋರ್ಟ್ ಕಿಂಗ್ ರಾಫೆಲ್ ನಡಾಲ್ ವೃತ್ತಿಪರ ಟೆನಿಸ್‌ನಲ್ಲಿ ಸಾವಿರ ಗೆಲುವಿನ ಸರದಾರರೆನಿಸಿದ್ದಾರೆ. ಅವರು ಈ ಸಾಧನೆ ಮಾಡಿದ ವಿಶ್ವದ 4ನೇ ಆಟಗಾರರಾಗಿದ್ದಾರೆ.ಸ್ಪೇನ್ ತಾರೆ ನಡಾಲ್ ಪ್ಯಾರಿಸ್ ಮಾಸ್ಟರ್ಸ್‌ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ದೇಶಬಾಂಧವ ಫೆಲಿಸಿಯಾನೊ ಲೋಪೆಜ್ ವಿರುದ್ಧ 4-6, 7-6, 6-4ರಿಂದ ಜಯಿಸುವ ಮೂಲಕ ಈ ಸಾಧನೆ ಮಾಡಿದರು. ಕರೊನಾ ಹಾವಳಿಯ ನಡುವೆ 20 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಸ್ಟೇಡಿಯಂ ಖಾಲಿಯಾಗಿತ್ತು. ಹೀಗಾಗಿ ನೀರವ ಮೌನದ ನಡುವೆ 34 ವರ್ಷದ ನಡಾಲ್ ಗೆಲುವನ್ನು ಸಂಭ್ರಮಿಸಬೇಕಾಯಿತು. ಇದು ಅವರಾಡಿದ 1201ನೇ ಪಂದ್ಯವಾಗಿತ್ತು.

    ಅಮೆರಿಕದ ಜಿಮ್ಮಿ ಕಾನರ್ಸ್‌ (1,274), ಸ್ವಿಸ್ ದಿಗ್ಗಜ ರೋಜರ್ ಫೆಡರರ್ (1,242) ಮತ್ತು ಜೆಕ್ ಗಣರಾಜ್ಯದ ಇವಾನ್ ಲೆಂಡ್ಲ್ (1,068) ಮುಕ್ತ ಟೆನಿಸ್ ಯುಗದಲ್ಲಿ ಈ ಮುನ್ನ ಸಾವಿರ ಗೆಲುವಿನ ಸರದಾರರಾಗಿರುವ ಆಟಗಾರರು.

    ‘ಈ ಗೆಲುವು ಅತ್ಯಂತ ವಿಶೇಷವಾದುದು ಎಂಬುದು ನನಗೆ ತಿಳಿದಿದೆ. ಪ್ರೇಕ್ಷಕರಿಲ್ಲದ ಕಾರಣ ಈ ಗೆಲುವಿನ ಸಂಭ್ರಮ ಅಷ್ಟಾಗಿ ಆಚರಣೆ ಕಾಣದಿದ್ದರೂ, ಈ ಗೆಲುವಿನ ಮೌಲ್ಯ ಕಡಿಮೆಯಾಗುವುದಿಲ್ಲ’ ಎಂದು ನಡಾಲ್ ಹೇಳಿದ್ದಾರೆ. ಕಳೆದ ತಿಂಗಳಷ್ಟೇ 13ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಬೀಗಿದ್ದ ನಡಾಲ್, ಫೆಡರರ್‌ರ 20 ಗ್ರಾಂಡ್ ಸ್ಲಾಂ ಗೆಲುವಿನ ದಾಖಲೆಯನ್ನೂ ಸರಿಗಟ್ಟಿದ್ದರು.

    ನಡಾಲ್ 2002ರ ಮೇನಲ್ಲಿ ವೃತ್ತಿಪರ ಟೆನಿಸ್‌ನ ಮೊದಲ ಗೆಲುವನ್ನು ಕಂಡಿದ್ದರು. ಪರಾಗ್ವೆಯ ರೋಮನ್ ಡೆಲ್ಗಾಡೊ ವಿರುದ್ಧ ಮಲ್ಲೋರ್ಕಾದಲ್ಲಿ ಚೊಚ್ಚಲ ಗೆಲುವು ಕಂಡಾಗ ನಡಾಲ್ ವಯಸ್ಸು ಕೇವಲ 15 ವರ್ಷ. ಅದರ ಮರುವರ್ಷ 16ನೇ ವಯಸ್ಸಿನಲ್ಲಿ ನಡಾಲ್ ಆಗಿನ ಫ್ರೆಂಚ್ ಓಪನ್ ಚಾಂಪಿಯನ್ ಅಲ್ಬರ್ಟ್ ಕೋಸ್ಟಾಗೆ ಸೋಲುಣಿಸುವ ಮೂಲಕ ಟೆನಿಸ್ ಜಗತ್ತಿನ ಗಮನಸೆಳೆದಿದ್ದರು. 24ನೇ ವಯಸ್ಸಿನಲ್ಲೇ 500 ಗೆಲುವಿನ ಸಾಧನೆ ಮಾಡಿದ್ದ ನಡಾಲ್, 35 ಮಾಸ್ಟರ್ಸ್‌ ಸಹಿತ ಇದುವರೆಗೆ ಒಟ್ಟು 86 ಪ್ರಶಸ್ತಿ ಜಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts