More

    ನಾಡಹಬ್ಬವಾಗಲಿ ಕನಕ ಜಯಂತಿ

    ಉಡುಪಿ: ಭಕ್ತ ಮತ್ತು ದೇವರ ನಡುವಿನ ಅನನ್ಯ ಸಂಬಂಧವನ್ನು ಸಾರಿದ ಕನಕದಾಸರ ಜಯಂತಿ ಪ್ರತಿ ಮನೆ-ಮನಗಳಲ್ಲಿ ಆಚರಿಸುವ ಮೂಲಕ ನಾಡಹಬ್ಬವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜರುಗಿದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಕನಕದಾಸರ ಸೂಕ್ಷ್ಮತೆ ಪರಿವರ್ತನೆ ನಿಯಮವನ್ನು ಸೂಚಿಸುತ್ತದೆ. ನಾಗರಿಕತೆ ಬದಲಾವಣೆಯಾದರೂ ಸಂಸ್ಕಾರ ಮರೆಯಬಾರದು. ಸಂಸ್ಕಾರ ಉಳಿದರೆ ಧರ್ಮ ಉಳಿಯುತ್ತದೆ , ಧರ್ಮದಿಂದ ನ್ಯಾಯ, ನೀತಿ ಇರುತ್ತದೆ. ಇದನ್ನೇ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಸಾರಿದ್ದು, ಈ ಮೂಲಕ ಸದಾ ಪ್ರಸ್ತುತರಾಗುತ್ತಾರೆ ಎಂದರು.

    ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಕನಕ ಸಮಾಜ ಸಂಘದ ಮುಖಂಡ ಮೇಟಿ ಮುದಿಯಪ್ಪ, ಕರಾವಳಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ.ಪಂ. ಸಿಇಒ ನವೀನ್ ಭಟ್ ವೈ, ಪಶ್ಚಿಮ ವಲಯ ಐಜಿಪಿ ದೇವ್‌ಜ್ಯೋತಿ ರಾಯ್, ಎಸ್‌ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts