More

    ಎಲ್ಲ ಕಾರ್ಯಕ್ರಮಗಳಲ್ಲಿ 2 ಕಂಡಿಕೆ ನಾಡಗೀತೆ ಸಾಕು

    ಬೆಂಗಳೂರು: ರಾಜ್ಯದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಗಳಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ನಾಡಗೀತೆ ಯನ್ನು ಕೇವಲ 2 ಕಂಡಿಕೆ ಹಾಡುವುದು ಸೂಕ್ತ ಎಂದು ಸಾಹಿತಿ ಡಾ. ಕಮಲಾ ಹಂಪನಾ ಸಲಹೆ ನೀಡಿದ್ದಾರೆ.

    ಬೆಂಗಳೂರು ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ ಡಾ. ಎಂ.ಜಿ.ಆರ್. ಅರಸ್ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವೇದಿಕೆ ಕಾರ್ಯಕ್ರಮಗಳಲ್ಲಿ ವೃದ್ಧರು, ಅಂಗವಿಕಲರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಭಾಗವಹಿಸಿರುತ್ತಾರೆ. ಈ ಎಲ್ಲರಿಗೂ ಅನುಕೂಲವಾಗುವಂತೆ ಪಲ್ಲವಿ ಹಾಗೂ ಕೊನೆಯ ಚರಣವನ್ನು ಮಾತ್ರ ಹಾಡುವಂತಾಗಬೇಕು. ಎಲ್ಲ ದೇಶದ ರಾಷ್ಟ್ರಗೀತೆಗಳು ಕೇವಲ 1ರಿಂದ 1.30 ನಿಮಿಷಗಳಲ್ಲಿ ಮುಕ್ತಾಯವಾಗುತ್ತವೆ. ನಮ್ಮ ರಾಷ್ಟ್ರಗೀತೆಯೂ 55 ಸೆಕೆಂಡ್ ಮಾತ್ರ ಇದೆ. ಅದೇ ರೀತಿ ನಾಡಗೀತೆಯನ್ನೂ ಕೇವಲ ಎರಡು ಕಂಡಿಕೆ ಹಾಡಬೇಕು ಎಂದು ಹೇಳಿದರು.

    ಚುಟುಕು ಸಾಹಿತ್ಯ ನೋಡಲಿಕ್ಕೆ ಕಿರಿದಾದರೂ ಅರ್ಥದಲ್ಲಿ ತುಂಬಾ ಹಿರಿದಾದುದು. ಇಡೀ ವ್ಯಕ್ತಿಯ ಭಾವನೆಗಳನ್ನು ಕೇವಲ ಒಂದೆರಡು ಸಾಲಿನಲ್ಲಿ ಹಿಡಿದಿಡುವ ಮೂಲಕ ಗಂಭೀರ ಮತ್ತು ಹಾಸ್ಯದ ಸ್ವರೂಪ ಪ್ರದರ್ಶಿಸುತ್ತವೆ. ಪರಮಾತ್ಮನಿಂದ ಪರಮಾನ್ನದವರೆಗೂ ಚುಟುಕು ಸಾಹಿತ್ಯ ವಿಶಾಲಾರ್ಥ ನೀಡುತ್ತದೆ. ಚುಟುಕು ಸಾಹಿತ್ಯದಲ್ಲಿ ಶಾಹಿರಿ, ದ್ವಿಪದಿ, ಕವನ, ಹೈಕುಗಳು ಕೇವಲ 2ರಿಂದ 4 ಸಾಲುಗಳಲ್ಲಿ ವಿವಿಧ ಭಾವನೆಗಳನ್ನು ಅಭಿವ್ಯಕ್ತಿಸಲು ನೆರವಾಗುತ್ತವೆ ಎಂದರು.

    ಡಾ. ಎಂ.ಜಿ.ಆರ್. ಅರಸ್ ಹಾಗೂ ಡಾ. ಅಂಬಾ ಅರಸ್ ಅವರನ್ನು ಸನ್ಮಾನಿಸಲಾಯಿತು. ಚುಟುಕು ಸಾಹಿತಿ ಪದ್ಮಾವತಿ ಚಂದ್ರು ಅವರ ‘ನನ್ನ ಪ್ರೀತಿಯ ಭಾವನೆಗಳು’ ಕವನಸಂಕಲನವನ್ನು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ. ತಿಮ್ಮಯ್ಯ ಲೋಕಾರ್ಪಣೆ ಮಾಡಿದರು. ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣ, ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರತ್ನಾ ಹಾಲಪ್ಪಗೌಡ, ನಗರ ಜಿಲ್ಲಾ ಘಟಕದ ರಾ. ವಿಜಯಸಮರ್ಥ ಇತರರಿದ್ದರು.

    ದೇ. ಜವರೇಗೌಡರ ಆತ್ಮೀಯರಲ್ಲಿ ಒಬ್ಬರಾಗಿದ್ದ ಡಾ. ಎಂ.ಜಿ.ಆರ್. ಅರಸ್ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಅವರಿಗೆ ಸಲ್ಲಿಸುತ್ತಿರುವ ಅಭಿನಂದನೆ ಸೂಕ್ತವಾಗಿದೆ.

    | ಪಿ.ಜಿ.ಆರ್. ಸಿಂಧ್ಯಾ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts