More

    ನದಾಫ್, ಪಿಂಜಾರ ಸಂಘದಿಂದ ಪ್ರತಿಭಟನೆ

    ರಾಣೆಬೆನ್ನೂರ: ನದಾಫ್ ಹಾಗೂ ಪಿಂಜಾರ ಸಮಾಜದವರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೂಡಲೇ ಪಿಂಜಾರ ಅಭಿವೃದ್ಧಿ ನಿಗಮ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿ ನದಾಫ್ ಹಾಗೂ ಪಿಂಜಾರ ಸಂಘದ ತಾಲೂಕು ಘಟಕದ ವತಿಯಿಂದ ಮಂಗಳವಾರ ನಗರದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಲಾಯಿತು.

    ಪಿಂಜಾರ ಜನಾಂಗದವರು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬಹಳ ಹಿಂದೆ ಉಳಿದಿದ್ದಾರೆ. ಕೇಂದ್ರ ಸರ್ಕಾರ ಒಬಿಸಿ ಪಟ್ಟಿಯಲ್ಲಿ ಪಿಂಜಾರ ಜನಾಂಗ ಸೇರ್ಪಡೆ ಮಾಡಿದೆ. ರಾಜ್ಯ ಸರ್ಕಾರ ಅತ್ಯಂತ ಹಿಂದುಳಿದಿರುವ ಸಮಾಜ ಎಂದು ಗುರುತಿಸಿದೆ. ಪಿಂಜಾರರು ಗಾದಿ ತಯಾರಿಸುವುದು, ಗುಡಾರ ನೈಯುವುದು, ಹಗ್ಗ ತಯಾರಿಕೆ ಸೇರಿ ಇತರ ಚಿಕ್ಕಪುಟ್ಟ ಉದ್ಯೋಗ ಅವಲಂಬಿಸಿಕೊಂಡು ಜೀವನ ಮಾಡುತ್ತಿದ್ದಾರೆ. ಈವರೆಗೂ ಸಮಾಜದ ಯಾವ ವ್ಯಕ್ತಿಯೂ ಉನ್ನತ ಹುದ್ದೆ ಲಭಿಸಿಲ್ಲ. ರಾಜಕೀಯವಾಗಿ ಯಾರೂ ಬೆಳೆದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಪಿಂಜಾರರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

    ಶಿರಸ್ತೇದಾರ ಎಂ.ಎನ್. ಹಾದಿಮನಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ಎಚ್. ಹಿರೇಮನಿ, ತಾಲೂಕು ಅಧ್ಯಕ್ಷ ಎಂ.ಜಿ. ಹಿತ್ತಲಮನಿ, ಬಾದಷಾ ಹೊನ್ನೂರಸಾಬ, ಬಿ.ಬಿ. ನಂದ್ಯಾಲ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts