More

    ನಾಡ ರಕ್ಷಣೆಗೆ ಪ್ರಾಣ ತ್ಯಾಜಿಸಿದ ಕಿತ್ತೂರು ರಾಣಿ

    ಹನುಮಸಾಗರ: ಕಿತ್ತೂರ ರಾಣಿ ಚನ್ನಮ್ಮ ದೇಶದ ಸ್ವಾತಂತ್ರೃ ಹಾಗೂ ಜನತೆಯ ರಕ್ಷಣೆಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ದಿಟ್ಟ ಮಹಿಳೆ ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು.

    ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ, ಬೃಹತ್ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ

    ಸಮೀಪದ ಯರಗೇರಾ ಗ್ರಾಮದಲ್ಲಿ ಬುಧವಾರ ಕಿತ್ತೂರ ರಾಣಿ ಚನ್ನಮ್ಮ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಬ್ರಿಟಿಷರ ವಿರುದ್ಧ ದಿಟ್ಟತನದಿಂದ ಹೋರಾಡಿದ ಚನ್ನಮ್ಮಳ ಧೈರ್ಯ ಮೆಚ್ಚುವಂತದು.

    ಈಗಿನ ಮಹಿಳೆಯರು ರಾಣಿ ಚನ್ನಮ್ಮಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ. ಬದುಕುನಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದರು.

    ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ನಂತರ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ಮಾಡಲಾಯಿತು.

    ಗ್ರಾಪಂ ಅಧ್ಯಕ್ಷ ಬಸವರಾಜ ಶೆಟ್ಟರ, ಮುಖಂಡರಾದ ಮಹೇಶ ನೆರತೆಲಿ, ಬಲವಂತಪ್ಪ ಪೂಜಾರ, ಮುತ್ತು ಸೂಡಿ, ವಿಜಯ ಮಾಳಶೆಟ್ಟಿ, ವಿರಣ್ಣ ಸೂಡಿ, ಚನ್ನಬಸಪ್ಪ ಬ್ಯಾಳಿ, ಬಸವರಾಜ ಮೆಟಿ, ವಿರೂಪಾಕ್ಷಪ್ಪ ಸೂಡಿ, ಈರಪ್ಪ ಕಲ್ಯಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts