More

    ಐತಿಹಾಸಿಕ ದಸಾರಕ್ಕೆ ಡಾ.ಮಂಜುನಾಥ್ ಚಾಲನೆ; ವಾರಿಯರ್ಸ್​ಗೆ ಸನ್ಮಾನ

    ಮೈಸೂರು: ಐತಿಹಾಸಿಕ 410ನೇ ದಸರಾಕ್ಕೆ ಅಲಂಕೃತ ಬೆಳ್ಳಿ ರಥದಲ್ಲಿ ವಿರಾಜಮಾನಳಾದ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಯದೇವ ಹೃದ್ರೋಗ ಆಸ್ಪತ್ರೆ ಎಂಡಿ ಡಾ.ಸಿ.ಎನ್.ಮಂಜುನಾಥ್ ಅವರು ಚಾಲನೆ ನೀಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಾದಿಯಾಗಿ ಬಹುತೇಕ ಎಲ್ಲರೂ ಸಾಂಪ್ರದಾಯಿಕ ಪಂಚೆ, ಶಲ್ಯ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾದರು.

    ಇದಾದ ಬಳಿಕ ವೇದಿಕೆಯಲ್ಲಿ ಆರು ಕರೊನಾ ವಾರಿಯರ್ಸ್​​ಗೆ ಸನ್ಮಾನ ನಡೆಯತು.

    ಸನ್ಮಾನಿತರು
    1. ಡಾ.ನವೀನ್ ಟಿ.ಆರ್.- ವೈದ್ಯಾಧಿಕಾರಿ.
    2. ರುಕ್ಮಿಣಿ – ಹಿರಿಯ ಶುಶ್ರುಷಾಧಿಕಾರಿ.
    3. ಕುಮಾರ್ ಪಿ. ಪೊಲೀಸ್ ಕಾನ್ ಸ್ಟೇಬಲ್.
    4. ಮರಗಮ್ಮ- ಪೌರಕಾರ್ಮಿಕರು.
    5. ನೂರ್ ಜಾನ್ – ಆಶಾ ಕಾರ್ಯಕರ್ತೆ.
    6. ಆಯೂಬ್ ಅಹ್ಮದ್ – ಸಮಾಜ ಸೇವಕರು.

    ಇದನ್ನೂ ಓದಿ: ಐತಿಹಾಸಿಕ ಸರಳ ದಸರಾ ಆರಂಭಕ್ಕೆ ಕ್ಷಣಗಣನೆ

    ಸನ್ಮಾನಕ್ಕೂ ಕರೊನಾ ಕರಿಛಾಯೆ: ಪೊಲೀಸ್ ಕಚೇರಿ ಸಿಬ್ಬಂದಿಗೂ ಕರೊನಾ ಸೋಂಕು ತಗುಲಿರುವ ಕಾರಣ, ಅಲ್ಲೇ ಕೆಲಸ ಮಾಡುತ್ತಿರುವ ಪೊಲೀಸ್ ಕಾನ್ಸ್​ಟೆಬಲ್​ ಕುಮಾರ್ ಸದ್ಯ ಕ್ವಾರಂಟೈನ್​ನಲ್ಲಿದ್ದಾರೆ. ಹೀಗಾಗಿ ಕುಮಾರ್ ಪರವಾಗಿ ಅವರ ಪತ್ನಿ ಸನ್ಮಾನ ಸ್ವೀಕರಿಸಿದ್ದು ಕಂಡುಬಂತು.

    ಇದನ್ನೂ ಓದಿ: ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂಪನ್ನ

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಹರ್ಷವರ್ಧನ್, ಎಲ್.ನಾಗೇಂದ್ರ, ಶ್ರೀಕಂಠೇಗೌಡ, ಎನ್.ಮಹೇಶ್, ಅಡಗೂರು ಎಚ್.ವಿಶ್ವನಾಥ್, ಸಂಸದ ಪ್ರತಾಪ್ ಸಿಂಹ, ಮೇಯರ್ ತಸ್ನೀಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಸೇರಿದಂತೆ ಪ್ರಮುಖರು ಭಾಗಿಯಾಗಿದ್ಧಾರೆ.

    ಐತಿಹಾಸಿಕ ಸರಳ ದಸರಾ ಆರಂಭಕ್ಕೆ ಕ್ಷಣಗಣನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts