More

    ಬೆಳವಟ್ಟಿಯ ಮೈಲಾರಲಿಂಗೇಶ್ವರ ಪ್ರಸನ್ನ ಫಸ್ಟ್

    ಸವಣೂರ: ರೈತರು ತಮ್ಮ ಬದುಕಿನೊಂದಿಗೆ ಪಾಲನೆ ಮಾಡಿದ ಎತ್ತುಗಳನ್ನು ಪ್ರೀತಿಯಿಂದ ಪೂಜಿಸುವುದು ಶ್ಲಾಘನೀಯ ಕಾರ್ಯ ಎಂದು ಕೆಪಿಸಿಸಿ ಸದಸ್ಯ ಎಸ್.ಎಸ್. ಶಿವಳ್ಳಿ ಹೇಳಿದರು.

    ತಾಲೂಕಿನ ತಳ್ಳಿಹಳ್ಳಿ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಕಟ್ಟಡ ಸಹಾಯಾರ್ಥವಾಗಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಗಾಡಾ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿ ರೈತರು ಸೋಲು-ಗೆಲುವಿನ ಬಗ್ಗೆ ಯೋಚಿಸದೆ ಸಂತಸ ಹಂಚಿಕೊಳ್ಳಬೇಕು ಎಂದರು.

    ಜಲ್ಲಾಪೂರ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ ಯಲವಿಗಿ, ಉಪಾಧ್ಯಕ್ಷ ಸತೀಶ ಗೌಳಿ, ಸದಸ್ಯರಾದ ಮಂಜುನಾಥ ತಿಪ್ಪಣ್ಣನವರ, ಜಿ.ಎನ್. ಕುರಿ, ರತ್ನವ್ವ ಹರಿಜನ, ಪ್ರಮುಖರಾದ ಈರಪ್ಪ ಗೌಡಗೇರಿ, ಚಂದ್ರು ಗೌಡಗೇರಿ, ನಿಂಗಪ್ಪ ಕೆಳಸಗೇರಿ, ಬಸವರಾಜ ಗೌಡಗೇರಿ, ಕುಮಾರ ಗಾಂಜಿ, ಇತರರಿದ್ದರು.

    ವಿಜೇತ ಜೋಡೆತ್ತು

    ಸ್ಪರ್ಧೆಯಲ್ಲಿ ಧಾರವಾಡ, ಬೆಳಗಾವಿ, ಗದಗ ಹಾಗೂ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ 65 ಜೊತೆ ಎತ್ತುಗಳು ಪಾಲ್ಗೊಂಡಿದ್ದವು. ಅಂತಿಮವಾಗಿ, ಬೆಳವಟ್ಟಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಪ್ರಸನ್ನ (ಪ್ರಥಮ 40 ಸಾವಿರ ರೂಪಾಯಿ), ತಳ್ಳಿಹಳ್ಳಿ ಹಾಗೂ ಬೆಣಚಿ ಗ್ರಾಮದ ಶ್ರೀ ಗ್ರಾಮದೇವತೆ ಪ್ರಸನ್ನ (ದ್ವಿತೀಯ 30 ಸಾವಿರ ರೂಪಾಯಿ) ಹಾಗೂ ಹಿರೇಹೊಸಳ್ಳಿ ಗ್ರಾಮದ ಕರಡಿಕೊಪ್ಪ (ತೃತೀಯ 20 ಸಾವಿರ ರೂಪಾಯಿ) ಸೇರಿದಂತೆ ವಿವಿಧ 18 ಜೋಡಿ ಎತ್ತುಗಳು ವಿವಿಧ ಹಂತಗಳಲ್ಲಿ ಬಹುಮಾನ ಪಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts