More

    ನನಗೆ ವಿರಾಟ್​ ಕೊಹ್ಲಿಯಂತಾಗಲು ಇಷ್ಟವಿಲ್ಲ ಎಂದಿದ್ದ ಪಾಕ್​ನ ಯುವ ಆಟಗಾರ ಹೈದರ್​ ಅಲಿಯ ಅಚ್ಚುಮೆಚ್ಚಿನ ವ್ಯಕ್ತಿ ಭಾರತದ ಈ ಕ್ರಿಕೆಟರ್​…

    ಕರಾಚಿ: ಪಾಕಿಸ್ತಾನದ ಭವಿಷ್ಯದ ಭರವಸೆಯ ಬ್ಯಾಟ್ಸ್​ಮನ್​ ಹೈದರ್​ ಅಲಿ ಇತ್ತೀಚೆಗಷ್ಟೇ ನನಗೆ ವಿರಾಟ್​ ಕೊಹ್ಲಿಯಂತೆ ಆಗಲು ಇಷ್ಟವಿಲ್ಲ. ನನಗೆ ಕ್ರಿಕೆಟರ್​ ಬಾಬರ್​ ಅಜಮ್​ ತುಂಬ ಇಷ್ಟ. ಅವರಂತೆ ಆಗುತ್ತೇನೆ ಎಂದು ಹೇಳಿದ್ದರು.

    19 ವರ್ಷದೊಳಗಿನವರ ವಿಶ್ವಕಪ್​ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಹೈದರ್ ಅಲಿಯ ಪ್ರತಿಭೆ ಪ್ರದರ್ಶನವಾಗಿದೆ. ಈತನೋರ್ವ ಅದ್ಭುತ ಬ್ಯಾಟ್ಸ್​ಮೆನ್​. ಭವಿಷ್ಯದಲ್ಲಿ ಪಾಕಿಸ್ತಾನದ ನಾಯಕನಾಗುವ ಎಲ್ಲ ಲಕ್ಷಣಗಳೂ ಇವೆ ಎಂದು ಕ್ರಿಕೆಟ್​ ತಜ್ಞರೂ ಹೇಳುತ್ತಿದ್ದಾರೆ. ಹೈದರ್​ ಅಲಿ ಈ ಬಾರಿಯ ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಕೂಡ ಅತ್ಯಂತ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ.

    ಹೈದರ್​ ಅಲಿ ವಿರಾಟ್​ ಕೊಹ್ಲಿ, ಬಾಬರ್​ ಅಜಮ್​ರಂತೆಯೇ ಅದ್ಭುತ ಆಟಗಾರರೆನಿಸಿಕೊಳ್ಳುತ್ತಾರೆ ಎಂದು ಹೋಲಿಕೆ ಮಾಡಲಾಗಿತ್ತು. ಈ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ, ನನಗೆ ವಿರಾಟ್​ ಕೊಹ್ಲಿ ಇಷ್ಟವಿಲ್ಲ, ಬಾಬರ್ ಅಜಮ್​ ರೀತಿ ಆಗುತ್ತೇನೆ ಎಂದು ಹೈದರ್​ ಹೇಳಿದ್ದರು.

    ಆದರೆ ನಿಜಕ್ಕೂ ತನ್ನ ರೋಲ್ ಮಾಡೆಲ್​ ಯಾರು? ಅಚ್ಚುಮೆಚ್ಚಿನ ಕ್ರಿಕೆಟರ್​ ಯಾರು ಎಂಬುದನ್ನು ಹೈದರ್​ ಅಲಿ ಈಗ ಬಹಿರಂಗಗೊಳಿಸಿದ್ದಾರೆ. ಭಾರತ ಕ್ರಿಕೆಟ್​ ತಂಡದ ರೋಹಿತ್​ ಶರ್ಮಾ ಅವರೇ ನನ್ನ ಅಚ್ಚುಮೆಚ್ಚಿನ ವ್ಯಕ್ತಿ. ಅವರ ಸ್ಟ್ರೈಕ್​ ರೇಟ್​ ನನಗೆ ತುಂಬ ಖುಷಿಕೊಡುತ್ತದೆ. ನನ್ನ ಆಟದಲ್ಲೂ ಸಹ ಅದನ್ನು ಅಳವಡಿಸಿಕೊಳ್ಳುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts