More

    ನನ್ನ ತಂದೆ, ಆತನ 27 ಪತ್ನಿಯರು, 150 ಮಕ್ಕಳು: ತನ್ನದೇ ಕುಟುಂಬದ ರಹಸ್ಯ ಬಿಚ್ಚಿಟ್ಟ ಯುವಕ!

    ಒಟ್ಟವಾ: ಒಡಹುಟ್ಟಿದವರ ಕಿತ್ತಾಟ, ಜಗಳ, ಕೀಟಲೆ ಮತ್ತು ವಿಭಿನ್ನ ಅಭಿಪ್ರಾಯಗಳು ಅವಿಭಕ್ತ ಕುಟುಂಬಗಳಲ್ಲಿ ಸಾಮಾನ್ಯ. ಆದರೆ, ಒಂದೇ ಕುಟುಂಬದಲ್ಲಿ 150 ಮಂದಿ ಒಡಹುಟ್ಟಿದವರಿದ್ದರೆ ಹೇಗಿರುತ್ತೆ ಒಮ್ಮೆ ಯೋಚಿಸಿ. ಅದರಲ್ಲೂ ಎಲ್ಲರೂ ಸಹ ಸೋದರಸಂಬಂಧಿಯಾಗಿರದೇ, ಒಡಹುಟ್ಟಿದವರೇ ಆಗಿದ್ದರೆ ಆ ಮನೆಯ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನೂ ಊಹಿಸಲು ಆಗದು.

    ಆದರೆ, ಕೆನಡಾದ 19 ವರ್ಷ ಯುವಕ ಮೆರ್ಲಿನ್​ ಬ್ಲ್ಯಾಕ್​ಮೋರ್ ತಮ್ಮದೇ ಬಹುಪತ್ನಿತ್ವ-ಆರಾಧನಾ ಕುಟುಂಬದ ರಹಸ್ಯವೊಂದನ್ನು ಟಿಕ್​ಟಾಕ್​ನಲ್ಲಿ ಹೊರಹಾಕಿದ್ದು ಭಾರಿ ವೈರಲ್​ ಆಗಿದೆ.​ ತುಂಬಾ ದೊಡ್ಡದಾದ ಕುಟುಂಬದಲ್ಲಿ ತಾನು ಬೆಳೆದಿದ್ದಾಗಿ ಹೇಳಿಕೊಂಡಿರುವ ಮೆರ್ಲಿನ್​, ತಮ್ಮ ತಂದೆಗೆ 27 ಪತ್ನಿಯರು ಮತ್ತು ಕುಟುಂಬದಲ್ಲಿ 150 ಮಂದಿ ಒಡಹುಟ್ಟಿದವರು ಇರುವುದಾಗಿ ಹೇಳಿದ್ದಾರೆ. ಇವರ ಕುಟುಂಬವನ್ನು ಕೆನಡಾದ ಅತಿದೊಡ್ಡ ಬಹುಪತ್ನಿತ್ವ ಆರಾಧನಾ ಕುಟುಂಬ ಎಂದು ಕರೆಯಲಾಗುತ್ತದೆ.

    ಇದನ್ನೂ ಓದಿರಿ: ಮದುವೆ ನಿಶ್ಚಯವಾಗಿದ್ದ ಮಧುಮಗಳಿಗೆ ತಾಳಿಕಟ್ಟಿ ಬಿಗ್ ​ಶಾಕ್​ ಕೊಟ್ಟ ಯುವಕನ ವಿರುದ್ಧ ದೂರು ದಾಖಲು!

    ವಿನ್​ಸ್ಟನ್​ ಬ್ಲ್ಯಾಕ್​ಮೋರ್​ (64) ಎಂಬುವರೇ ಆರಾಧನ ಕುಟುಂಬದ ಮುಖ್ಯಸ್ಥ ಹಾಗೂ ಸೃಷ್ಟಿಕರ್ತ. ವಿನ್​ಸ್ಟನ್​ ಅವರು ಬ್ರಿಟಿಷ್ ಕೊಲಂಬಿಯಾದ ಉದಾರವಾದ ವಸಾಹತು ಹೊಂದಿದ್ದು, ಬಹುಪತ್ನಿತ್ವ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬದ ಮೂವರು ಮಕ್ಕಳು ಇದೀಗ ತಮ್ಮ ಅನುಭವದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.

    ಮೆರ್ಲಿನ್​ ಹೊರತುಪಡಿಸಿ 19 ವರ್ಷದ ಮುರ್ರೆ ಮತ್ತು 21ರ ವಾರ್ರೆನ್​ ಸಾಮಾಜಿಕ ಜಾಲತಾಣದಲ್ಲಿ ಕುಟುಂಬದ ಬಗ್ಗೆ ಬರೆದುಕೊಂಡಿದ್ದಾರೆ. ಮುಜಗರದಿಂದ ಈ ಹಿಂದೆ ತಮ್ಮ ಕುಟುಂಬದ ರಹಸ್ಯವನ್ನು ಬಚ್ಚಿಡುತ್ತಿದ್ದರಂತೆ. ಆದರೆ, ಕೊನೆಗೂ ಎಲ್ಲವನ್ನು ಮುಕ್ತವಾಗಿ ಬಹಿರಂಗಪಡಿಸಿದ್ದಾರೆ. ಮೂವರು ಸಹೋದರರಲ್ಲಿ ತುಂಬಾ ಕಿರಿಯವನಾದ ಮೆರ್ಲಿನ್​ ಕುಟುಂಬದ ಜತೆ ವಾಸವಿರದೆ ಅಮೆರಿಕಕ್ಕೆ ಸ್ಥಳಾಂತರವಾಗಿದ್ದಾರೆ.

    ಕುಟುಂಬದ ಬಗ್ಗೆ ಮಾತನಾಡಿರುವ ಮೆರ್ಲಿನ್​, ನಾನು ಅನೇಕ ವರ್ಷಗಳಿಂದ ಈ ಬಗ್ಗೆ ಮಾತನಾಡಲು ಬಯಸಿದ್ದೇನೆ. ನಾನೀಗ ಒಳ್ಳೆಯ ಸ್ಥಾನದಲ್ಲಿದ್ದೇನೆ. ಇದೀಗ ಜಗತ್ತಿನ ಕುಟುಂಬದ ಬಗ್ಗೆ ತಿಳಿಸುತ್ತೇನೆಂದಿದ್ದಾರೆ. ಅನೇಕ ಮಂದಿಯನ್ನು ಒಳಗೊಂಡ ದೊಡ್ಡ ಕುಟುಂಬ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮೆರ್ಲಿನ್​ ವಿವರಿಸಿದ್ದಾರೆ.

    ಇದನ್ನೂ ಓದಿರಿ: ಇನ್​ಸ್ಟಾಗ್ರಾಂ ಪರಿಚಯ ತಂದಿಟ್ಟ ಆಪತ್ತು: ಕಾಮುಕರ ಕೈಗೆ ಸಿಕ್ಕಿ ನರಕಯಾತನೆ ಅನುಭವಿಸಿದ ಅಪ್ರಾಪ್ತೆ!

    ತಂದೆ ವಿನ್​ಸ್ಟನ್​ ಕುಟುಂಬದಲ್ಲಿ ಒಟ್ಟು 27 ಪತ್ನಿಯರಿದ್ದಾರೆ. ಅವರಲ್ಲಿ 22 ಮಂದಿಗೆ ಮಕ್ಕಳಿದ್ದಾರೆ. ಹೆತ್ತತಾಯಿಯನ್ನು ಮಾತ್ರ ಮಮ್ಮಿ ಎಂದು ಕರೆಯಲು ಹೇಳಲಾಗುತ್ತದೆ. ಉಳಿದವರನ್ನು ಅವರವರ ಮೊದಲ ಅಕ್ಷರದಿಂದ ಕರೆಯಲಾಗುತ್ತದೆ. ದೊಡ್ಡ ಕುಟುಂಬವು ದೊಡ್ಡ ಮನೆಯನ್ನೇ ಹೊಂದಿದ್ದು, ಎಲ್ಲ ಒಡಹುಟ್ಟಿದವರು ಒಟ್ಟಿಗೆ ಮಲಗಿಕೊಳ್ಳುತ್ತಾರೆ. ವಯಸ್ಸಾದಂತೆ ಅವರು ತಾಯಂದಿರೊಂದಿಗೆ ವಾಸಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ವಾರ್ರೆನ್​ ಹೇಳುವ ಪ್ರಕಾರ ದೊಡ್ಡ ಮನೆಯಲ್ಲಿ ಅನೇಕ ಕೊಠಡಿಗಳಿದ್ದು, ಇಬ್ಬರು ಪತ್ನಿಯರು ತಮ್ಮ ಮಕ್ಕಳೊಂದಿಗೆ ಒಂದು ಕೊಠಡಿಯಲ್ಲಿ ಇರುತ್ತಾರೆ. ಅನೇಕ ಪತ್ನಿಯರ ಸಹೋದರಿಯರನ್ನೇ ವಿನ್​ಸ್ಟನ್​ ಮದುವೆಯಾಗಿದ್ದಾರೆ. ಬಹುದೊಡ್ಡ ಕುಟುಂಬವಾಗಿದ್ದು, ತಾವೇ ಆಹಾರವನ್ನು ತಯಾರಿಸಿಕೊಳ್ಳುತ್ತಾರೆ. ಮಕ್ಕಳನ್ನು ತೋಟದ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಆದಾಗ್ಯೂ, ಅವರ ವಿಲಕ್ಷಣ ಕುಟುಂಬವು ಕಾನೂನಿಗೆ ವಿರುದ್ಧವಾಗಿದೆ. ವಿನ್​ಸ್ಟನ್​ 2017ರಲ್ಲಿ ಬಹುಪತ್ನಿತ್ವ ಆರಾಧನಾ ವಿವಾಹವನ್ನು ಅಭ್ಯಾಸ ಮಾಡಿದನೆಂದು ಆರೋಪಿಸಲಾಗಿದೆ. ಅಲ್ಲದೆ, ಆರು ತಿಂಗಳ ಗೃಹಬಂಧನದಲ್ಲಿಯೂ ಇದ್ದರಂತೆ.

    ಸದ್ಯ ಮೂವರು ಸಹೋದರರು ಈಗ ತಮ್ಮ ಕುಟುಂಬವನ್ನು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದಾಗ್ಯೂ, ಅವರು ಇನ್ನೂ ತಮ್ಮ ಒಡಹುಟ್ಟಿದವರೊಂದಿಗೆ ಮನೆಗೆ ಮರಳುತ್ತಾರೆ. (ಏಜೆನ್ಸೀಸ್​)

    ಇದನ್ನೂ ಓದಿರಿ: ಮೃತ ವ್ಯಕ್ತಿಯ ವೀರ್ಯದ ಹಕ್ಕು ಪತ್ನಿಗೆ ಮಾತ್ರ: ತಂದೆಯ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ!

    VIDEO| ಸೋರಿಕೆಯಾದ ಹಾಟ್​ ವಿಡಿಯೋ ಬಗ್ಗೆ ಅನಿಕಾ ಸುರೇಂದ್ರನ್​ ಬೇಸರ: ನಟಿಯ ಸ್ಪಷ್ಟನೆ ಹೀಗಿದೆ…

    ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

    ಬೆತ್ತಲೆ ಫೋಟೋ ಹರಿಬಿಟ್ಟು ಸಂಭ್ರಮಿಸಿದ ಮಹಿಳೆ: ಕಾರಣ ಕೇಳಿದ್ರೆ ಹೀಗೂ ಉಂಟೆ ಅಂತಿರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts