More

    ಮಠಗಳ ರಕ್ಷಣೆ ಜನರ ಹೊಣೆ: ಡಾ.ಮುಮ್ಮಡಿ ಶಿವರುದ್ರ ಸ್ವಾಮೀಜಿ ಹೇಳಿಕೆ, ಅಜ್ಜೆಬಸವನಹಳ್ಳಿ ಗದ್ದುಗೆ ಮಠದಲ್ಲಿ ದೀಪೋತ್ಸವ

    ಕನಕಪುರ : ತಾಲೂಕಿನ ಕೋಡಿಹಳ್ಳಿ ಹೋಬಳಿ ಅಜ್ಜೆಬಸವನಹಳ್ಳಿ ಗದ್ದುಗೆ ಮಠದಲ್ಲಿ ಕಾರ್ತಿಕ ವಾಸದ ಲಕ್ಷ ದೀಪೋತ್ಸವ ಹಾಗೂ ಲಿಂಗೈಕ್ಯ ಶ್ರೀ ನಲಿಂಗ ಸ್ವಾಮಿಗಳ ಪ್ರಸಾದ ನಿಲಯ ಕಟ್ಟಡ ಉದ್ಘಾಟನೆ ಅಂಗವಾಗಿ ಗ್ರಾಮದಲ್ಲಿ ಸ್ವಾಮೀಜಿಗಳು ಹಾಗೂ ಗ್ರಾಮ ದೇವತೆಗಳ ಮೆರವಣಿಗೆ ಭಾನುವಾರ ನಡೆಯಿತು.

    ಬೆಳಗ್ಗೆ 10:30ಕ್ಕೆ ಮರಳೇಗವಿ ಮಠದ ಶ್ರೀ ಡಾ.ಮುಮ್ಮಡಿ ಶಿವರುದ್ರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರನ್ನು ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಊರ ಮುಂದಿನಿಂದ ಮಠದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
    ವೇದಿಕೆ ಸಮಾರಂಭದಲ್ಲಿ ಮಾತನಾಡಿದ ಡಾ.ಮುಮ್ಮಡಿ ಶಿವರುದ್ರ ಸ್ವಾಮೀಜಿ, ಕರೊನಾದಂತಹ ಸಂಕಷ್ಟದ ಸಮಯದಲ್ಲೂ ಸ್ಥಳೀಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಠದಲ್ಲಿ ಭಕ್ತರ ಸಹಕಾರ ಮತ್ತು ಕೋರಣ್ಯದ ಮೂಲಕ ಪ್ರಸಾದ ನಿಲಯವನ್ನು ನಿರ್ಮಿಸಿರುವುದು ಮೆಚ್ಚುವಂತಹ ಕೆಲಸವಾಗಿದೆ. ಇಲ್ಲಿನ ಶ್ರೀಗಳು ಜನರ ಭಾವನೆಗಳಿಗೆ ತಕ್ಕಂತೆ ಧಾರ್ಮಿಕ ಹಾಗು ಪೂಜಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.

    ಇತ್ತೀಚಿನ ದಿನಗಳಲ್ಲಿ ಆಚಾರ, ವಿಚಾರ, ನಾಡಿನ ಸಂಸ್ಕೃತಿ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿವೆ. ಇಂತಹ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದು ಹಾಗೂ ಮಠಗಳನ್ನು ಕಾಪಾಡುವುದು ಜನರ ಕರ್ತವ್ಯವಾಗಿದೆ. ಧರ್ಮದ ನೆಲೆಗಟ್ಟಿನಲ್ಲಿ ದುಶ್ಚಟಮುಕ್ತ, ಸುಸಂಸ್ಕೃತ ಸವಾಜ ನಿರ್ವಾಣ ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಾನವ ಜನ್ಮ ದೊಡ್ಡದು. ಅದನ್ನು ನಾಶ ವಾಡಿಕೊಳ್ಳಬೇಡಿ ಹುಚ್ಚಪ್ಪಂದಿರ ಎಂಬ ದಾಸರ ವಾಣಿಯಂತೆ ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಧರ್ಮ, ಸಂಸ್ಕೃತಿ, ದೇವರ ಬಗ್ಗೆ ಅವರ ಮನಸ್ಸಿನಲ್ಲಿ ಉತ್ತಮ ಭಾವ ಮೂಡಿಸುವ ಮೂಲಕ ಸವಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.

    ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ವಾತನಾಡಿ, ಮಠ ಮಂದಿರ ದೇವಾಲಯಗಳು ಹಾಗೂ ಧಾರ್ಮಿಕ ಸವಾರಂಭಗಳು ಮನುಷ್ಯನಿಗೆ ಶಾಂತಿ ನೀಡುವ ಸ್ಥಳಗಳಾಗಿವೆ. ಬದುಕಿನ ಜಂಜಾಟದಲ್ಲಿ ಸ್ವಾರ್ಥ ಮನೋಭಾವ ಜನರನ್ನು ಆವರಿಸಿರುವುದರಿಂದ ವಾನವೀಯ ಮೌಲ್ಯಗಳು ಮತ್ತು ಸಂಬಂಧಗಳು ಸಡಿಲವಾಗುತ್ತಿವೆ. ಸಂಪಾದನೆಯಲ್ಲಿ ಸವಾಜಕ್ಕೆ ಸಹಾಯ ವಾಡುವಂತಹ ಮನಃಸ್ಥಿತಿ ಜನರಲ್ಲಿ ಕಡಿಮೆಯಾಗುತ್ತಿದೆ. ಮಠಗಳಿಗೆ ಭಕ್ತರೇ ಆದಾಯದ ಮೂಲಗಳಾಗಿರುವುದರಿಂದ ಮಠ ವಾನ್ಯಗಳನ್ನು ಉಳಿಸಿ ಬೆಳೆಸಲು ಸಹಕಾರ ನೀಡಬೇಕು ಎಂದರು.

    ಅಜ್ಜಬಸವನಹಳ್ಳಿ ಗದ್ದಿಗೆ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಕೋಡಿಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ, ಮುಳ್ಳಹಳ್ಳಿ ಮಠದ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ನೇರಲಟ್ಟಿ ಮಠದ ಬಸವಲಿಂಗ ಸ್ವಾಮೀಜಿ, ಉಡುಬುರಾಣಿ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಹೊರಳಗಲ್ಲು ಮಠದ ಸಿದ್ಧಲಿಂಗ ಸ್ವಾಮೀಜಿ, ಜಿ.ಪಂ. ವಾಜಿ ಅಧ್ಯಕ್ಷ ಹೆಚ್.ಬಸಪ್ಪ, ವಾಜಿ ಸದಸ್ಯ ಮುನಿಹುಚ್ಚೇಗೌಡ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಾಂಬಶಿವ, ಮುಖಂಡರಾದ ಅರ್ಜನಹಳ್ಳಿ ಮಲ್ಲೇಶಪ್ಪ, ಮುಳ್ಳಳ್ಳಿ ನಂಜುಂಡಪ್ಪ, ಸದಾಶಿವಯ್ಯ ಸೇರಿ ಅನೇಕ ದಾನಿಗಳು, ಮುಖಂಡರು ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts