More

    ಮುಸ್ಲಿಂ ಮುಖಂಡರಿಂದ ಕರೊನಾ ತಡೆಗಟ್ಟಲು ಶ್ರಮಿಸುತ್ತಿರುವ ವಿವಿಧ ಇಲಾಖೆ ಸಿಬ್ಬಂದಿಗೆ ಮಾಸ್ಕ್ ವಿತರಣೆ

    ಮಾನ್ವಿ: ಕರೊನಾ ವೈರಸ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಪೋಲಿಸ್, ಕಂದಾಯ ಇಲಾಖೆ, ಆಶಾಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ನರ್ಸ್‌ಗಳಿಗೆ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಮುಸ್ಲಿಂ ಸಮುದಾಯ ಗುರುವಾರ ಮಾಸ್ಕ್ಕ್‌ಗಳನ್ನು ವಿತರಿಸಿತು.

    ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಸ್, ಕುಮಾರಸ್ವಾಮಿ, ಪೋತ್ನಾಳ ಗ್ರಾಮದ ಮುಸ್ಲಿಂ ಸಮುದಾಯ ವೈರಸ್ ತಡೆಗಟ್ಟಲು ಶ್ರಮಿಸುತ್ತಿರುವ ಸೇನಾನಿಗಳಿಗೆ ಮಾಸ್ಕ್ ವಿತರಣೆ ಮಾಡಿರುವುದು ಶ್ಲಾಘನೀಯ. ಈ ಹಿಂದೆ ಗ್ರಾಮದಲ್ಲಿ ನಡೆದ ಆರ್‌ಎಸ್‌ಎಸ್‌ನ ಪಥ ಸಂಚಲನದ ಗಣವೇಷಧಾರಿಗಳಿಗೆ ಇದೇ ಮುಸ್ಲಿಂ ಸಮುದಾಯ ಪಾನಕ, ಹಣ್ಣು ವಿತರಿಸಿದ್ದು, ಸಹೋದರತ್ವಕ್ಕೆ ಸಾಕ್ಷಿಯಾಗಿದೆ ಎಂದರು.

    ಗ್ರಾಮದ ನ್ಯಾಯಬೆಲೆ ಅಂಗಡಿಗೆ ತೆರಳಿ ಅಲ್ಲಿ ಸೇರಿದ್ದ ಎಲ್ಲ ಪಡಿತರದಾರರಿಗೆ ಮಾಸ್ಕ್‌ಗಳನ್ನು ವಿತರಿಸಲಾಯಿತು, ಈ ಸಂದರ್ಭ ಡಾ.ಪ್ರಶಾಂತ ಇಲ್ಲೂರು, ಎಚ್.ಶರ್ಪುದ್ದೀನ್ ಪೋತ್ನಾಳ, ಮುಖಂಡರಾದ ಖಾನಸಾಬ್, ಇಸ್ಮಾಯಿಲ್ ಅಫೀಜ್‌ಸಾಬ್, ರಾಜಾ ಮೇಸ್ತ್ರಿ, ಫಕೀರಸಾಬ್, ನದಾಫ ಸಂಘದ ಗ್ರಾಮ ಘಟಕದ ಅಧ್ಯಕ್ಷ ಮೋದಿನ್‌ಸಾಬ್, ಗ್ರಾಪಂ ಸದಸ್ಯರಾದ ಎಂ.ಪಿ.ಶರೀಫ್, ಜಾಕೀರ್ ಜೀನೂರ, ರಾಯಲ್ ಟೇಲರ್, ನಬಿಸಾಬ್ ಹಾಲಪುರ, ಯಂಕಪ್ಪ ನಾಯಕ, ಮಲ್ಲಯ್ಯ, ಹನ್ಮಂತ್ರಾಯ, ಗುರುರಾಜ ಬಸವರಾಜ ಭಜಂತ್ರಿ, ಹಾಗೂ ಗ್ರಾಪಂ ಸಿಬ್ಬಂದಿ ಹಾಗೂ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts