More

    ಸೋತ ವಿಶ್ವನಾಥ್, ಎಂಟಿಬಿ ಸಾಮಾನ್ಯದವರಲ್ಲ: ಗೆದ್ದವರು ಇನ್ನೊಬ್ಬರ ಬಗ್ಗೆ ಮಾತನಾಡುವುದನ್ನು ಬಿಡಬೇಕೆಂದ ಮುನಿರತ್ನ

    ಬೆಂಗಳೂರು: ವಿಧಾನಸಭೆ ಉಪಚುನಾವಣೆಯಲ್ಲಿ ಸೋತ ಎಚ್​.ವಿಶ್ವನಾಥ್​ ಮತ್ತು ಎಂ.ಟಿ.ಬಿ ನಾಗರಾಜ್​ ಸಾಮಾನ್ಯದವರಲ್ಲ. ಸೋತವರಿಗೂ ನ್ಯಾಯ ಸಿಗಬೇಕು ಎಂದು ಅನರ್ಹ ಶಾಸಕ ಮುನಿರತ್ನ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಸೋತವರಿಗೆ ಸಚಿವ ಸಂಪುಟದಲ್ಲಿ ಸ್ಥಾನವಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜೀನಾಮೆ ಕೊಟ್ಟ 17 ಜನರಿಗೂ ನ್ಯಾಯ ಸಿಗಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ‌ ನನಗೆ ನಂಬಿಕೆ ಇದೆ. ಸೋತ ವಿಶ್ವನಾಥ್ ಮತ್ತು ಎಂಟಿಬಿ ಸಾಮಾನ್ಯದವರೇನಲ್ಲ. ಒಬ್ಬರು ರಾಜ್ಯಾಧ್ಯಕ್ಷರಾಗಿದ್ದವರು, ಮತ್ತೊಬ್ಬರು ಸಚಿವರಾಗಿದ್ದವರು. ಹೀಗಾಗಿ ಸೋತವರಿಗೂ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

    ಉಪ ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಸಿಗುವ ನಂಬಿಕೆ ಇದೆ. ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾವೆಲ್ಲ ಬದ್ಧ. ವರಿಷ್ಠರ ಬಗ್ಗೆ ನಾನು ಮಾತನಾಡುವಷ್ಟು ದೊಡ್ಡವನಲ್ಲ. ನಮಗೆ ಅನ್ಯಾಯವಾಗದ ರೀತಿ ಬಿಜೆಪಿ ನಡೆಸಿಕೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ರಮೇಶ್ ಜಾರಕಿಹೊಳಿಗೆ ಉಪ ಮುಖ್ಯಮಂತ್ರಿ ನೀಡಿಕೆ ವಿಚಾರವಾಗಿ ಮಾತನಾಡಿ, ಜಾರಕಿಹೊಳಿ 35 ವರ್ಷದಿಂದ ರಾಜಕೀಯದಲ್ಲಿ ಇರುವವರು. ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡೋಣ, ಗೆದ್ದ ಶಾಸಕರು ಇನ್ನೊಬ್ಬರ ಬಗ್ಗೆ ಮಾತನಾಡುವುದನ್ನು ಬಿಡಬೇಕೆಂದರು.

    ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ನೂರಕ್ಕೆ ನೂರು ಮುನಿರತ್ನ ಚುನಾವಣೆಗೆ ನಿಲ್ತಾರೆ. ನಾನು ಬಿಜೆಪಿಗೆ ಸೇರಿದ್ದರಿಂದ ಪ್ರಮುಖರನ್ನು ಭೇಟಿ ಆಗೋದು ನನ್ನ ಕರ್ತವ್ಯ. ಆರ್​ಎಸ್​ಎಸ್ ಮುಖಂಡರು ಮತ್ತು ಬಿಜೆಪಿ ಹಿರಿಯರನ್ನು ಭೇಟಿ ಮಾಡಿದ್ದು ನಿಜ. ಆದರೆ ಭೇಟಿ ವೇಳೆ ತುಳಸಿ ಮುನಿರಾಜುಗೌಡ ವಿಚಾರ ಮಾತನಾಡಿಲ್ಲ ಎಂದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts