More

    ರಸ್ತೆ ಬದಿ ಅಡಕೆ ಸಿಪ್ಪೆ ಹಾಕಿದರೆ ಕ್ರಮ

    ತರೀಕೆರೆ: ರಸ್ತೆ ಬದಿಯಲ್ಲಿ ಅಡಕೆ ಸಿಪ್ಪೆ ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಆಡಳಿತಾಧಿಕಾರಿ ರೇಣುಕಾಪ್ರಸಾದ್ ಹೇಳಿದರು.

    ಶುಕ್ರವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಗೌರಿ ಚಾರಿಟಬಲ್ ಟ್ರಸ್ಟ್, ಮಮತಾ ಮಹಿಳಾ ಸಮಾಜ, ಅರಿವು ವೇದಿಕೆ ಹಾಗೂ ಪುರಸಭೆಯಿಂದ ಏರ್ಪಡಿಸಿದ್ದ ಪರಿಸರ, ಆರೋಗ್ಯ ಸಂರಕ್ಷಣೆ ಮತ್ತು ಕಸ ವಿಂಗಡಣೆ, ಪೈಪ್ ಕಾಂಪೋಸ್ಟ್ ಪದ್ಧತಿಯಿಂದ ಗೊಬ್ಬರ ತಯಾರಿಸುವ ವಿಧಾನ ಕುರಿತ ಪ್ರಾತ್ಯಕ್ಷಿತೆ, ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳ ನೈಮರ್ಲತೆಗೆ ಸಹಕರಿಸಬೇಕಾದ ಅಡಕೆ ಬೆಳೆಗಾರರು ತಮ್ಮ ಮೇಲಿರುವ ಹೊಣೆಗಾರಿಕೆ ಮರೆಯುತ್ತಿದ್ದಾರೆ. ಅಡಕೆ ಸಿಪ್ಪೆ ಇನ್ನಿತರ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಸುರಿದು ಪರಿಸರ ಮಲೀನಗೊಳಿಸುತ್ತಿದ್ದಾರೆ. ಸದ್ಯದಲ್ಲೇ ಆಯಾ ಗ್ರಾಪಂ ಪಿಡಿಒಗಳು, ತಾಪಂ ಇಒ ಮತ್ತು ಅಡಕೆ ಬೆಳೆಗಾರರ ಸಭೆ ಕರೆದು ಅಡಕೆ ಸಿಪ್ಪೆ ಸುರಿಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದ ಎಂದರು.

    ಗೌರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಭಗವಾನ್ ಮಾತನಾಡಿ, ಪಟ್ಟಣದ ಸಾರ್ವಜನಿಕರು ಕಸ ನಿರ್ವಹಣೆಗೆ ಪುರಸಭೆ ಪರಿಚಯಿಸುತ್ತಿರುವ ಸರಳ, ಸುಲಭ ವಿಧಾನ ಅನುಸರಿಸಿ ನೈರ್ಮಲ್ಯತೆಗೆ ಒತ್ತು ನೀಡಬೇಕು ಎಂದರು.

    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಸುರೇಶ್​ಚಂದ್ರ, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಮಮತ ಮಹಿಳಾ ಸಮಾಜ ಅಧ್ಯಕ್ಷೆ ಲತಾ, ಹಿರಿಯ ಆರೋಗ್ಯ ನಿರೀಕ್ಷಕ ಟಿ.ಸಿ.ಮಹೇಶ್ವರಪ್ಪ, ಪರಿಸರ ಇಂಜಿನಿಯರ್ ತಾಹೀರಾ ತಸ್ನೀಮ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts