More

    ನಗರಸಭೆ ಮಾಜಿ ಸದಸ್ಯ ವೇಣುಗೋಪಾಲ ಬಂಧನ:
    ಸರ್ಕಾರಿ ಜಾಗೆ ಮಾರಾಟ, ಕೊಲೆ ಬೆದರಿಕೆ ಪ್ರಕರಣ

    ಹೊಸಪೇಟೆ: ಸರ್ಕಾರಿ ಜಾಗೆ ಮಾರಾಟ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಾಗುತ್ತಿದ್ದಂತೆ ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ನಗರಸಭೆ ಮಾಜಿ ಸದಸ್ಯ ಡಿ.ವೇಣುಗೋಪಾಲ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
    ನಗರದ ಸಿರಸನಕಲ್ಲು ಪ್ರದೇಶದ ಸರ್ಕಾರಿ ಜಾಗೆಯನ್ನು ಸಂತೋಷ ಕುದುರೆಮೇಟಿ ಎಂಬುವವರಿಗೆ ತಮ್ಮದೆಂದು ತೋರಿಸಿದ್ದ. ವೇಣುಗೋಪಾಲ ಪತ್ನಿ ಭಾಗ್ಯ ಅವರ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ೧೬ ಲಕ್ಷ ರೂ. ಗೆ ೨೦೨೦ರಲ್ಲಿ ಮಾರಾಟ ಮಾಡಿದ್ದರು. ವೇಣುಗೋಪಾಲ ಮಾರಾಟ ಮಾಡಿದ್ದ ನಿವೇಶನ ಸರ್ಕಾರಿ ಜಾಗೆ ಎಂಬುದು ಕೆಲ ತಿಂಗಳ ಹಿಂದೆ ಸಂತೋಷ ಅವರ ಗಮನಕ್ಕೆ ಬಂದಿದ್ದು, ಹಣ ಮರಳಿಸುವಂತೆ ಕೇಳಿದ್ದರು.
    ಹಣ ಕೊಡಲು ಆಗುವುದಿಲ್ಲ. ಏನು ಬೇಕಾದರೂ ಮಾಡಿಕೋ. ನನ್ನ ಹೆಂಡತಿಯಿಂದಲೇ ನಿನ್ನ ಮೇಲೆ ಅಟ್ರಾಸಿಟಿ ಕೇಸ್ ಹಾಕಿಸಿ, ಕೋರ್ಟ್‌ಗೆ ಅಲೆಯುವಂತೆ ಮಾಡುತ್ತೇನೆ. ಜೊತೆಗೆ ಕೊಲೆ ಮಾಡುವುದಾಗಿ ಬೆದಿಕೆ ಹಾಕಿದ್ದಾರೆ ಎಂದು ಸಂತೋಷ ಕುದುರೆಮೇಟಿ ದೂರಿದ್ದಾರೆ. ಈ ಕುರಿತು ಆಗಸ್ಟ್ ೨೭ ರಂದು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಂತರ ತಲೆ ಮರೆಸಿಕೊಂಡಿದ್ದ ವೇಣುಗೋಪಾಲ ಅವರನ್ನು ಶುಕ್ರವಾರ ರಾತ್ರಿ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ.ಅರುಣ್ ಕೆ. ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts