More

    4ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಜಯಿಸಿದ ಮುಂಬೈ ತಂಡ

    ನವದೆಹಲಿ: ದೇಶೀಯ ಕ್ರಿಕೆಟ್‌ನ ಬಲಿಷ್ಠ ತಂಡ ಮುಂಬೈ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿತು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾಳಗದಲ್ಲಿ ಯುವ ಆಟಗಾರ ಪೃಥ್ವಿ ಷಾ ಸಾರಥ್ಯದ ಮುಂಬೈ 6 ವಿಕೆಟ್‌ಗಳಿಂದ ಉತ್ತರ ಪ್ರದೇಶ ತಂಡವನ್ನು ಸೋಲಿಸಿತು. 2018-19ನೇ ಸಾಲಿನಲ್ಲಿ ಕಡೇ ಬಾರಿಗೆ ಚಾಂಪಿಯನ್ ಆಗಿದ್ದ ಮುಂಬೈ ಮರಳಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮತ್ತೊಂದೆಡೆ, 16 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ್ದ ಯುಪಿ ಮತ್ತೊಮ್ಮೆ ನಿರಾಸೆ ಕಂಡಿತು.

    ಇದನ್ನೂ ಓದಿ: ಪೂನಂ ರಾವತ್ ಶತಕ ವ್ಯರ್ಥ; ಭಾರತ ಮಹಿಳೆಯರಿಗೆ ಸರಣಿ ಸೋಲು

    ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ತಂಡ ಮಾಧವ್ ಕೌಶಿಕ್ (158*ರನ್, 156 ಎಸೆತ, 15 ಬೌಂಡರಿ, 4 ಸಿಕ್ಸರ್) ಹಾಗೂ ಸಮರ್ಥ್ ಸಿಂಗ್ (55ರನ್, 73 ಎಸೆತ, 4 ಬೌಂಡರಿ, 3 ಸಿಕ್ಸರ್) ಜೋಡಿ ಬಿರುಸಿನ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 312 ರನ್ ಪೇರಿಸಿತು. ಪ್ರತಿಯಾಗಿ ಮುಂಬೈ ತಂಡ ಆದಿತ್ಯ ತಾರೆ (118*ರನ್, 107 ಎಸೆತ, 18 ಬೌಂಡರಿ) ಹಾಗೂ ನಾಯಕ ಪೃಥ್ವಿ ಷಾ (73ರನ್, 39 ಎಸೆತ, 10 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 41.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 315 ರನ್‌ಗಳಿಸಿ ಜಯದ ನಗೆ ಬೀರಿತು.

    ಇದನ್ನೂ ಓದಿ: ಮತ್ತೆ ಬಸಿರಾದ ಗೀತಾ ಬಾಸ್ರಾ; 2ನೇ ಮಗುವಿನ ನಿರೀಕ್ಷೆಯಲ್ಲಿ ಹರ್ಭಜನ್ ಸಿಂಗ್

    ಉತ್ತರ ಪ್ರದೇಶ: 4 ವಿಕೆಟ್‌ಗೆ 312 (ಮಾಧವ್ ಕೌಶಿಕ್ 158*, ಸಮರ್ಥ್ ಸಿಂಗ್ 55, ಅಕ್ಷ್‌ದೀಪ್ ನಾಥ್ 55, ತನುಶ್ ಕೊಟಿಯನ್ 54ಕ್ಕೆ 2), ಮುಂಬೈ: 41.3 ಓವರ್‌ಗಳಲ್ಲಿ 4 ವಿಕೆಟ್‌ಗೆ 315 (ಪೃಥ್ವಿ ಷಾ 73, ಆದಿತ್ಯ ತಾರೆ 118*, ಶಿವಂ ದುಬೆ 42, ಯಶಸ್ವಿ ಜೈಸ್ವಾಲ್ 29, ಯಶ್ ದಯಾಲ್ 71ಕ್ಕೆ 1, ಶಿವಂ ಮಾವಿ 63ಕ್ಕೆ 1, ಶಿವಂ ಶರ್ಮ 71ಕ್ಕೆ 1, ಸಮೀರ್ ಚೌಧರಿ 43ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts