More

    ಮುಂಬೈನಿಂದ ಶವ ತಂದು ಅಂತ್ಯಕ್ರಿಯೆ ಮಾಡಿದ ಪ್ರಕರಣ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು

    ಮಂಡ್ಯ: ಮುಂಬೈನಿಂದ ಮೃತದೇಹ ತಂದು ಮಂಡ್ಯದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಎಸ್​.ಪುಟ್ಟರಾಜು ಮಾತನಾಡಿ, ಮೃತ ವ್ಯಕ್ತಿಗೂ ಕರೊನಾ ಸೋಂಕಿತ್ತು ಎಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೃತ ವ್ಯಕ್ತಿಗೆ ಕರೊನಾ ಇತ್ತೆಂಬ ಮಾಹಿತಿಯನ್ನು ಅವರ ಸಂಬಂಧಿಕರೇ ಹೇಳಿದ್ದಾರೆ. ಆತ ಕೋವಿಡ್​ನಿಂದಲೇ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ಶವ ತರುತ್ತಿರುವ ವಿಷಯವನ್ನು ಗ್ರಾಮಸ್ಥರು ನನಗೆ ತಿಳಿಸಿದ್ದರು. ತಕ್ಷಣ ನಾನು ಅಧಿಕಾರಿಗಳಿಗೆ ಕರೆ ಮಾಡಿ, ಯಾವ ಕಾರಣಕ್ಕೂ ನಮ್ಮ ತಾಲೂಕಿಗೆ ಶವ ಪ್ರವೇಶ ಮಾಡದಂತೆ ತಡೆಯಲು ಸೂಚಿಸಿದ್ದೆ, ಹೀಗಾಗಿ ತಾಲೂಕು ಗಡಿಯಲ್ಲೇ ಅಧಿಕಾರಿಗಳು ವಾಹನ ತಡೆದಿದ್ದಾರೆ ಎಂದು ತಿಳಿಸಿದರು.

    ಇದನ್ನೂ ಓದಿ: ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ ಪಾಪಿ: ತಂದೆ, ತಾಯಿ, ಅಣ್ಣ, ಅತ್ತಿಗೆ, ಮಕ್ಕಳಿಬ್ಬರನ್ನು ಕೊಂದು ಪೊಲೀಸರಿಗೆ ಶರಣು

    ಮುಂಜಾಗ್ರತಾ ಕ್ರಮ ಕೈಗೊಂಡು ಮೃತದೇಹದ ಅಂತ್ಯಕ್ರಿಯೆ ಮಾಡಿದ್ದಾರೆ. ಹಲವಾರು ಗ್ರಾಮಗಳಲ್ಲಿ ಅಂತಿಮ ದರ್ಶನವೂ ಆಗಿದೆ. ಹಾಸನ ಜಿಲ್ಲೆ ಸೇರಿದಂತೆ ಹಲವೆಡೆ ಅಂತಿಮ ದರ್ಶನ ಆಗಿದೆ. ಆಂಬ್ಯುಲೆನ್ಸ್​ನಲ್ಲಿ ಮುಂಬೈನಿಂದ ಶವದ ಜತೆಯಲ್ಲಿ ಬಂದ ವ್ಯಕ್ತಿಯೊಬ್ಬ ಕೆ.ಆರ್.ಪೇಟೆಯಲ್ಲಿ ಇಳಿದಿದ್ದಾನೆ. ಆತನನ್ನು ಕೂಡಲೇ ಪತ್ತೆ ಮಾಡಬೇಕು ಎಂದರು.

    ಇದನ್ನೂ ಓದಿ: ಮುಂಬೈನಿಂದ ಮಂಡ್ಯಕ್ಕೆ ತಂದು ಶವ ಸಂಸ್ಕಾರ: ಮೇಲುಕೋಟೆ ಸುತ್ತಮುತ್ತ ಹೆಚ್ಚಿದ ಆತಂಕ

    ಮುಂಬೈ ಅಧಿಕಾರಿಗಳು ನಕಲಿ ಪ್ರಮಾಣ ಪತ್ರಗಳನ್ನು ಕೊಟ್ಟಿದ್ದಾರೆ. ಮಹಾರಾಷ್ಟ್ರದಿಂದ ಸರ್ಕಾರಿ ವಾಹನದಲ್ಲೇ ಶವ ಬಂದಿದೆ. ಸರ್ಕಾರಿ ಆಂಬುಲೆನ್ಸ್ ನಲ್ಲಿ ಶವ ರವಾನೆಗೆ ಅವಕಾಶ ಇದೆಯಾ? ಹೀಗಾಗಿ ಇದರ ಹಿಂದೆ ಪ್ರಭಾವ ಸಾಕಷ್ಟಿದೆ. ಈ ಮಟ್ಟದ ಪ್ರಭಾವ ಬೀರಿದವರನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿದರು.

    ಮುಂಬೈನಿಂದ ಮಂಡ್ಯಕ್ಕೆ ಮೃತದೇಹ ರವಾನಿಸಿದ ಪ್ರಕರಣ: ಅನುಮತಿ ನೀಡಿದ್ದು ಯಾರೆಂಬ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts