More

    ಹೊಸ ಸನ್​ಗ್ಲಾಸ್​ ಧರಿಸಿ ಸೆಲ್ಫಿ ಕ್ಲಿಕ್ಕಿಸಿದ ಮಹಿಳೆ ಫೋಟೋದಲ್ಲಿನ ಪ್ರತಿಬಿಂಬ ನೋಡಿ ಬೆಚ್ಚಿಬಿದ್ದಳು..!

    ಲಂಡನ್​: ಹೊಸದಾಗಿ ಖರೀದಿಸಿದ ಸನ್​ಗ್ಲಾಸ್​ ಹಾಕಿಕೊಂಡು ಸೆಲ್ಫಿ ಕ್ಲಿಕ್ಕಿಸಿದ ಬಳಿಕ ಫೋಟೋ ನೋಡಿದ ಮಹಿಳೆಯೊಬ್ಬಳು ಸನ್​ಗ್ಲಾಸ್​ನಲ್ಲಿ ಕಾಣಿಸಿಕೊಂಡ ಪ್ರತಿಬಿಂಬವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

    ಹೊಸ ಸನ್​ಗ್ಲಾಸ್​ ಖರೀದಿಸಿದ ಮಹಿಳೆ ಅದನ್ನು ಒಂದು ಕಡೆ ತೆಗೆದಿಡುವ ಮುನ್ನ ಅದರ ಫೋಟೋವನ್ನು ಬಾಯ್​ಫ್ರೆಂಡ್​ ಕಳುಹಿಸಿ ಅಭಿಪ್ರಾಯ ತಿಳಿದುಕೊಳ್ಳಲು ನಿರ್ಧರಿಸುತ್ತಾಳೆ. ಅದರಂತೆ ಸನ್​ಗ್ಲಾಸ್​ ಧರಿಸಿ ಸೆಲ್ಫಿ ಕ್ಲಿಕ್ಕಿಸಿದ ಬಳಿಕ ಫೋಟೋವನ್ನು ಬಾಯ್​ಫ್ರೆಂಡ್​ಗೆ ಸೆಂಡ್​ ಮಾಡುತ್ತಾಳೆ. ಪ್ರತಿಕ್ರಿಯೆ ಬರೋವರೆಗೂ ಕಾಯುವ ಮಹಿಳೆ ಫೋಟೋ ಹೇಗಿದೆ ಎಂದು ಪರಿಶೀಲಿಸುತ್ತಾಳೆ. ಈ ವೇಳೆ ವಿಚಿತ್ರವೊಂದನ್ನು ಫೋಟೋದಲ್ಲಿ ಗಮನಿಸುತ್ತಾಳೆ.

    ಇದನ್ನೂ ಓದಿ: ನಾಣ್ಯ ಎಸೆಯಬೇಕೆಂದು ವಾಹನ ನಿಲ್ಲಿಸಿ ಹೆತ್ತವರ ಕಣ್ಣೆದುರಲ್ಲೇ ನದಿಗೆ ಜಿಗಿದು ಯುವತಿ ಆತ್ಮಹತ್ಯೆ!

    ಹೊಸ ಸನ್​ಗ್ಲಾಸ್​ ಧರಿಸಿ ಸೆಲ್ಫಿ ಕ್ಲಿಕ್ಕಿಸಿದ ಮಹಿಳೆ ಫೋಟೋದಲ್ಲಿನ ಪ್ರತಿಬಿಂಬ ನೋಡಿ ಬೆಚ್ಚಿಬಿದ್ದಳು..!

    ಈ ಬಗ್ಗೆ ವಿವರಣೆ ನೀಡಿರುವ ಮೂವರು ಮಕ್ಕಳ ತಾಯಿ, ನನ್ನ ಮಕ್ಕಳು ಸೆಲ್ಫಿ ತೆಗೆಯುವ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ. ನಾನೊಬ್ಬಳೆ ಮನೆಯಲ್ಲಿದ್ದೆ. ನಾನು ಅಡುಗೆ ಮನೆಯಲ್ಲಿ ಊಟದ ಕೋಣೆಯತ್ತ ಮುಖಮಾಡಿ ನಿಂತಿದ್ದೆ. ನೇರವಾಗಿ ಡೈನಿಂಗ್​ ರೂಮ್​ ಬಾಗಿಲು ಹಾಗೂ ಕೋಣೆಯೊಳಗೆ ಟೇಬಲ್​ ಮತ್ತು ನಾಲ್ಕು ಚೇರುಗಳು ಕಾಣುತ್ತವೆ. ಆದರೆ, ಫೋಟೋದಲ್ಲಿ ಇವುಗಳನ್ನು ಹೊರತುಪಡಿಸಿ ವಿಚಿತ್ರವೊಂದನ್ನು ನೋಡಿದೆ ಎಂದು ಮಹಿಳೆ ಹೇಳಿದ್ದಾಳೆ.

    ನಾನು ಎರಡು ಆಕಾರಗಳನ್ನು ನೋಡಿದೆ. ಒಂದು ಭಾಗದಲ್ಲಿ ಚಿಕ್ಕ ಹುಡುಗನಂತಿರುವ ಆಕಾರ ನೋಡಿದೆ. ಇನ್ನೊಂದು ಭಾಗದಲ್ಲಿ ಉದ್ದನೆಯ ವ್ಯಕ್ತಿಯ ಆಕಾರ ಕಾಣಿಸಿತು. ಬಹುಶಃ ಅವುಗಳು ಆತ್ಮಗಳು ಇರಬಹುದೆಂದು ನಾನು ನಂಬಿದೆ. ಅವು ನಮ್ಮೊಂದಿಗೆ ಇವೆ ಎಂದು ಭಾವಿಸಿದೆ ಎಂದಿದ್ದಾರೆ.

    ಇದನ್ನೂ ಓದಿ: ಉಡುಪಿ ಯುವತಿ ಅನುಮಾನಾಸ್ಪದ ಸಾವು ಪ್ರಕರಣ: ಕಾಲ್​ ರೆಕಾರ್ಡ್ಸ್​ನಲ್ಲಿ ಸ್ಫೋಟಕ ಮಾಹಿತಿ..!

    ಹೊಸ ಸನ್​ಗ್ಲಾಸ್​ ಧರಿಸಿ ಸೆಲ್ಫಿ ಕ್ಲಿಕ್ಕಿಸಿದ ಮಹಿಳೆ ಫೋಟೋದಲ್ಲಿನ ಪ್ರತಿಬಿಂಬ ನೋಡಿ ಬೆಚ್ಚಿಬಿದ್ದಳು..!

    ಆದರೆ, ಚಿತ್ರದಲ್ಲಿ ಏನೂ ಪ್ರತಿಬಿಂಬವಾಗಿದೆಯೋ ಅದನ್ನು ಖಚಿತವಾಗಿ ಹೇಳಲಾರೆ. ಆದರೆ, ಪ್ರತಿಬಿಂಬವನ್ನು ನೋಡಿ ನಿಜಕ್ಕೂ ಹೆದರಿದೆ. ಇದೇ ಫೋಟೋವನ್ನು ಕೋರಾ (Quora) ಜಾಲತಾಣಕ್ಕೆ ಅಪ್​ಲೋಡ್​ ಮಾಡಿ ಈ ಫೋಟೋ ನೋಡಿದ ನಂತರ ನೀವು ಕಂಡುಕೊಂಡ ಭಯಾನಕ ವಿಷಯ ಯಾವುದು? ಎಂದು ಪ್ರಶ್ನಿಸಿದೆ. ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಫೋಟೋ ನೋಡಿ ನನ್ನಂತೆಯೇ ಹೆದರಿದ್ದಾಗಿ ಹೇಳಿದ್ದಾರೆ. ಇನ್ನು ಕೆಲವರು ನೀವು ಹೇಳಿದಂತೆ ನಮಗೇನು ಗೋಚರವಾಗುತ್ತಿಲ್ಲ ಎಂದಿದ್ದಾರೆ. ಇನ್ನು ಕೆಲವರು ಬೆಳಕಿನ ಪ್ರತಿಬಿಂಬ ಈ ರೀತಿ ಕಂಡಿರಬಹುದೆಂದು ಕಮೆಂಟ್​ ಮಾಡಿದ್ದಾರೆಂದು ಮಹಿಳೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಕಾಳಿ ಮಾತೆಯನ್ನು ಒಲಿಸೋದಕ್ಕಾಗಿ ನಾಲಿಗೆಯನ್ನೇ ಕತ್ತರಿಸಿ ಪೂಜೆಗಿಟ್ಟ!

    ಹೊಸ ಸನ್​ಗ್ಲಾಸ್​ ಧರಿಸಿ ಸೆಲ್ಫಿ ಕ್ಲಿಕ್ಕಿಸಿದ ಮಹಿಳೆ ಫೋಟೋದಲ್ಲಿನ ಪ್ರತಿಬಿಂಬ ನೋಡಿ ಬೆಚ್ಚಿಬಿದ್ದಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts