More

    ಮುಳಬಾಗಿಲು ತಾಲೂಕಿನಲ್ಲಿರುವ ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹಿಸಿ

    ಮುಳಬಾಗಿಲು: ತಾಲೂಕಿನಲ್ಲಿರುವ ಹೊರರಾಜ್ಯಗಳ ಕಾರ್ಮಿಕರನ್ನು ಗುರುತಿಸಿ ಅವರ ಬ್ಯಾಂಕ್ ಮತ್ತು ಆಧಾರ್ ಸಂಖ್ಯೆ ಗಣಕೀಕರಣ ವಾಡಿ ಆಯಾ ರಾಜ್ಯಗಳಿಗೆ ಕಳುಹಿಸಿಕೊಡುವ ಕೆಲಸವಾಗಬೇಕು ಎಂದು ತಹಸೀಲ್ದಾರ್ ಕೆ.ಎನ್.ರಾಜಶೇಖರ್ ಹೇಳಿದರು.

    ತಹಸೀಲ್ದಾರ್ ಕಚೇರಿಯಲ್ಲಿ ವಲಸೆ ಕಾರ್ಮಿಕರ ಸಮಸ್ಯೆಗಳ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಶನಿವಾರ ಮಾತನಾಡಿ, ತಾಲೂಕಿನಲ್ಲಿ ಹೊರರಾಜ್ಯಗಳ 25 ಕಾರ್ಮಿಕರನ್ನು ಗುರುತಿಸಲಾಗಿದ್ದು, ಇವರೆಲ್ಲರೂ ಉತ್ತರಪ್ರದೇಶ ಮತ್ತು ಬಿಹಾರಕ್ಕೆ ಸೇರಿದವರಾಗಿದ್ದಾರೆ. ಇವರಲ್ಲದೇ ಫೆಬ್ರವರಿಯಲ್ಲಿ ಉರುಸ್‌ನ ಸಂಚಾರಿ ವ್ಯಾಪಾರಿಗಳಾಗಿ ಆಗಮಿಸಿದ್ದ 79 ಜನರು ಇಲ್ಲಿ ಉಳಿದುಕೊಂಡಿದ್ದು, ಅವರಲ್ಲಿ ಬಿಹಾರದ 10, ಉತ್ತರ ಪ್ರದೇಶದ 11, ನೇಪಾಳ 1, ಕೊಡಗಿನ ಇಬ್ಬರನ್ನು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಇವರು ಸ್ವಂತ ಊರುಗಳಿಗೆ ತೆರಳಲು ಇಚ್ಛಿಸಿರುವುದರಿಂದ ಜಿಲ್ಲಾಡಳಿತಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

    ಬಾಂಬೆಯಿಂದ ಮುಳಬಾಗಿಲಿನ ಸಂಬಂಧಿಕರ ಮನೆಗೆ 17 ಮಂದಿ 3 ತಿಂಗಳ ಹಿಂದೆ ಬಂದಿದ್ದು, ಅವರು ವಾಪಸ್ ತೆರಳಲು ಅನುಮತಿ ಕೇಳಿದ್ದು, ಸರ್ಕಾರದ ನಿಬಂಧನೆಗಳಂತೆ ಜಿಲ್ಲಾಡಳಿತಕ್ಕೆ ವರದಿ ಕಳುಹಿಸಲಾಗಿದೆ. ದೇವರಾಯಸಮುದ್ರ ಬಳಿ ಜೆಲ್ಲಿ ಕ್ರಷರ್‌ನಲ್ಲಿ ಯಾದಗಿರಿಯ 8 ಕಾರ್ಮಿಕರಿದ್ದು ಅವರಿಗೆ ವಾಲಿಕರೇ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ರಾಜ್ಯದ ಒಳಗಡೆ ಇರುವ ಕಾರ್ಮಿಕರಿಗೆ ಅವರವರ ಜಿಲ್ಲೆಗೆಳಿಗೆ ತೆರಳಲು ವಾತ್ರ ತಾಲೂಕು ಆಡಳಿತದಿಂದ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

    ಕಾರ್ಮಿಕ ನಿರೀಕ್ಷಕಿ ಕೆ.ರಾಜೇಶ್ವರಿ ವಾತನಾಡಿ, 30 ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರನ್ನು ಗುರುತಿಸುವ ಕಾರ್ಯವನ್ನು ಪಿಡಿಒಗಳು, ಕಾರ್ಯದರ್ಶಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ವ್ಯಾಪ್ತಿಯ ಕಾರ್ಮಿಕರನ್ನು ಪೌರಾಯುಕ್ತರು ಮತ್ತು ಸಿಬ್ಬಂದಿ ಗುರುತಿಸಿ, ಪ್ರತಿಯೊಬ್ಬರ ಬ್ಯಾಂಕ್ ಮತ್ತು ಆಧಾರ್ ಅನ್ನು ಆಯಾ ರಾಜ್ಯಗಳ ಸಂಪರ್ಕಕ್ಕೆ ತಲುಪಿಸಬೇಕು. ರಾಜ್ಯದ ಅಸಂಟಿತ ವಲಯದ ಕಾರ್ಮಿಕರ ಖಾತೆಗಳಿಗೆ ಈಗಾಗಲೇ ಸರ್ಕಾರ 2 ಸಾವಿರ ರೂಪಾಯಿ ವರ್ಗಾಯಿಸಿದೆ ಎಂದರು. ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ, ತಾ.ಪಂ. ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts