More

    ಮೊಹರಂ ಹಬ್ಬ ಸೌಹಾರ್ದತೆಯಿಂದ ಆಚರಿಸಿ:ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಅನಿಸಿಕೆ

    ತಾವರಗೇರಾ: ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದರು.


    ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದರು. ಯಾವುದೇ ಅಹಿತಕರ ಘಟನೆ ನಡೆಯಂತೆ ಮೊಹರಂ ಹಬ್ಬ ಆಚರಿಸಬೇಕು. ಭಾವಕ್ಯತೆಗೆ ಧಕ್ಕೆ ಬರುವಂತ ಕೆಲಸ ಮಾಡಿದರೂ ಅಂತಹವರ ವಿರುದ್ಧ ಗುಂಡಾ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

    ಇದನ್ನೂ ಓದಿ: ಮೊಹರಂ ಹಬ್ಬಕ್ಕೆಂದು ಬರುತ್ತಿದ್ದವ ಸಮುದ್ರ ಪಾಲಾದ


    ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ವಕ್ಫ್ ಬೋರ್ಡ್‌ನ ಅಧಿಕಾರಿ ರಹಿಮತ್ ವುಲ್ಲಾ, ತಹಸೀಲ್ದಾರ್ ಮುರಳಿಧರ ಮಾತನಾಡಿದರು. ಶಾಮಿದ್ ಅಲಿ ದರ್ಗಾದ ಆವರಣದಲ್ಲಿ ನೂತನ ಮಸೀದಿ ಕಟ್ಟಡ ನಿರ್ಮಾಣಕ್ಕೆ ಪರ ವಿರೋಧ ಚರ್ಚೆಯಾಯಿತು. ಸದ್ಯ ದರ್ಗಾದಲ್ಲಿ ಯಾವುದೇ ಕಟ್ಟಡ ಅಥವಾ ಅಭಿವೃದ್ಧಿ ಕಾಮಗಾರಿ ನಡೆಸಬಾರದೆಂದು ತಹಸೀಲ್ದಾರ್ ಮುರಳೀಧರ ಆದೇಶ ನೀಡಿದರು.


    ಪಿಎಸ್‌ಐ ಪುಂಡಲೀಕಪ್ಪ, ಕಂದಾಯ ನಿರೀಕ್ಷಕ ಶರಣಪ್ಪ ದಾಸರ, ಗ್ರಾಮ ಲೆಕ್ಕಾಧಿಕಾರಿ ಸೂರ್ಯಕಾಂತ, ಪಪಂ ಸಿಬ್ಬಂದಿ ಶ್ಯಾಮೂರ್ತಿ ಕಟ್ಟಿಮನಿ, ಶರಣಬಸವ ಸೈಂದರ್, ಮುಖಂಡರಾದ ಮಸೀದಿ ಸದರ್, ನಾದೀರ್ ಪಾಷಾ ಮುಲ್ಲಾ, ಶ್ಯಾಮೀದ್ ಸಾಬ್ ನಾಡಗೌಡ, ಚಂದ್ರಶೇಖರ ನಾಲತವಾಡ, ಶರಣಪ್ಪ, ಸಿದ್ದನಗೌಡ ಪುಂಡಗೌಡ್ರು, ಶಾಮಸಿಂಗ್, ವಿಠಲಸಿಂಗ್, ನಾಗರಾಜ ಮಡಿವಾಳರ, ಫಯಾಜ್ ಬನ್ನು, ರಾಜಾ ನಾಯಕ, ಎಂ ಡಿ ಬಾಬು, ಶ್ಯಾಮಣ್ಣ ಶಿರವಾಟಿ, ಸಂಜೀವ ಚಲುವಾದಿ, ಚಂದ್ರಸಿಂಗ್ ಬನ್ನಿಕಟ್ಟಿ, ಶಂಕರ್ ಸಿಂಗ್, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts