More

    ಆಲೋಚನೆಗಳು ಯೋಜನೆಗಳಾಗಲಿ

    ಮುಧೋಳ: ಚಿಂತೆ ಚಿಂತನೆಯಾಗಿ, ಎಲ್ಲ ಆಲೋಚನೆಗಳು ದೇಶದ ಅಭಿವೃದ್ಧಿಗಾಗಿ ಯೋಜನೆಗಳಾದಾಗ ಮಾತ್ರ ನಮ್ಮ ನಾಡು, ದೇಶ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಭೂಸೇನೆ ನಿವೃತ್ತ ಉಪಮಹಾದಂಡನಾಯಕ ರಮೇಶ ಹಲಗಲಿ ಹೇಳಿದರು.

    ನಗರದ ಹೊರವಲಯದಲ್ಲಿರುವ ಮಂಟೂರ ರಸ್ತೆಯ ನಂದೇಶ್ವರ ಕಲ್ಯಾಣ ಮಂಟಪದಲ್ಲಿ ದಿ.ವಾಸಣ್ಣ ದೇಸಾಯಿ ಸ್ಥಾಪಿಸಿದ ‘ಚಿಂತನಸಿರಿ ಸಂಸ್ಥೆಯ 15ನೇ ವಾರ್ಷಿಕ ಹೋಳಿ ಹುಣ್ಣಿಮೆ ಬಣ್ಣ ಆಡದವರಿಗಾಗಿ 15ನೇ ವೈಚಾರಿಕ ಓಕುಳಿ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಸಾಧನೆಯ ಗುರಿ ಇಟ್ಟುಕೊಂಡಿರಬೇಕು. ಚಿಕ್ಕ ಚಿಕ್ಕ ಉದ್ಯಮಗಳನ್ನು ಸ್ಥಾಪನೆ ಮಾಡಬೇಕು ಎಂದರು.

    ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ವಿ.ಐ. ಬೆಣಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾವಯವ ಕೃಷಿ ಮಾಡುವ ಜತೆಗೆ ನೂತನ ತಂತ್ರಜ್ಞಾನ ಬಳಸಿದರೆ ಹೆಚ್ಚು ಆಹಾರೋತ್ಪಾದನೆ ಮಾಡಬಹುದು. ಇದರಿಂದ ದೇಶದ ಆಹಾರ ಸಮಸ್ಯೆ ನೀಗುವ ಜತೆಗೆ ಗುಣಮಟ್ಟದ ಸರಕನ್ನು ವಿದೇಶಗಳಿಗೆ ರಪ್ತು ಮಾಡಬಹುದು ಎಂದರು.

    ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ, ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಶ್ರವಣಕುಮಾರ ಕೆರೂರ, ವೀರಣ್ಣ ಗುರಡ್ಡಿ, ವೀರಶೈವ ಸಮಾಜ ಅಧ್ಯಕ್ಷ ರಾಜಪ್ಪಣ್ಣ ಕರೆಹೊನ್ನ, ಕೃಷ್ಣಾ ಮೇಲ್ದಂಡೆ ಮುಳುಗಡೆ ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎಚ್. ಹಂಚಿನಾಳ ನಿರೂಪಿಸಿದರು. ಉದಯ ವಾಳ್ವೇಕರ ವಂದಿಸಿದರು. ಖ್ಯಾತ ಸಂಬಾಳವಾದಕಿ ಮಂಜುಳಾ ಸಂಬಾಳಮಠ ಅವರಿಂದ ಸಂಗೀತ ಸುಧೆ ಜರುಗಿತು.

    ಜನಪದರ ಕಾರ್ಯ ಸ್ಮರಣೀಯ
    ಜಾನಪದ ಗೋಷ್ಠಿ: ವಿಶೇಷ ಉಪನ್ಯಾಸಕರಾಗಿ ಇಳಕಲ್ಲದ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಮಾತನಾಡಿ, ಜನಪದರು ನಿತ್ಯ ಕಾಯಕದಲ್ಲಿ ಗಾಯನ ರೂಪದಲ್ಲಿ ಬಂದ ವಿಶಿಷ್ಟ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಸ್ಮರಣೀಯ ಎಂದು ಹೇಳಿದರು. ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ಮಾತನಾಡಿದರು. ಪತ್ರಕರ್ತ ಅಶೋಕ ಕುಲಕರ್ಣಿ, ಗಾಲವ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಶಿವಾನಂದ ಪುರಾಣಿಕ, ನಿಕೇತನ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ರಾಜೇಶ ವಾಲಿ, ಅಕ್ಬರಬಾದಶಾ ರಾಮದುರ್ಗ, ಕುಶಾಲಗೌಡ ಪಾಟೀಲ, ಪ್ರಕಾಶ ವಸದ, ಡಾ.ಸಿದ್ದಣ್ಣ ಬಾಡಗಿ ಇದ್ದರು.ವಿಶ್ರಾಂತ ಡಿಡಿಪಿಐ ಎಂ.ಜಿ. ದಾಸರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಯರಗಟ್ಟಿ, ಬಿ.ಜಿ. ಕೆರಕಲಮಟ್ಟಿ ನಿರೂಪಿಸಿದರು.

    ಕೃಷಿ ಗೋಷ್ಠಿ: ರಾಜ್ಯ ಕೃಷಿ ಬೆಲೆ ಆಯೋಗ ಅಧ್ಯಕ್ಷ ಹನುಮಂತಗೌಡ ಬೆಳಗುರ್ಕಿ ನೇತೃತ್ವದಲ್ಲಿ ನಡೆದ ಕೃಷಿಗೋಷ್ಠಿಯಲ್ಲಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಕೃಷಿ ವಿವಿಯ ಡಾ.ವೈ.ಕೆ. ಕೋಟಿಕಲ್, ಗಾಂಧಿವಾದಿ ತಮ್ಮಣ್ಣಪ್ಪ ಬುದ್ನಿ, ರಾಜು ಅಂಗಡಿ, ಕೃಷ್ಣಪ್ಪ ಕನಕರಡ್ಡಿ, ಎಪಿಎಂಸಿ ಅಧ್ಯಕ್ಷ ವೆಂಕಣ್ಣ ಗಿಡ್ಡಪ್ಪನವರ, ರಾಚಪ್ಪ ಕಳ್ಳೊಳ್ಳಿ, ಸಂಗಮೇಶ ನಿರಾಣಿ ಇದ್ದರು. ಚಿಂತನಸಿರಿ ಅಧ್ಯಕ್ಷ ಬಿ.ಪಿ. ಹಿರೇಸೋಮಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಎಂ. ಬೆಣ್ಣೂರ ನಿರೂಪಿಸಿದರು. ಬಿ.ಜಿ. ಕೆರಕಲಮಟ್ಟಿ ವಂದಿಸಿದರು.

    ಸಮಾರೋಪ ಸಮಾರಂಭ
    ಕಸಬಾಜಂಬಗಿ ಹಿರೇಮಠದ ಶಿವಕುಮಾರ ದೇವರ ಸಾನ್ನಿಧ್ಯ ವಹಿಸಿ ಮಾತನಾಡಿ, ದಿ.ವಾಸಣ್ಣ ದೇಸಾಯಿ ಚಿಂತಕರೊಂದಿಗೆ ಮಾಡಿದ ಚಿಂತನ ಸಿರಿ ಜನಮನ ಗೆದ್ದಿರುವುದು ಸ್ಮರಣೀಯ ಎಂದು ಹೇಳಿದರು.

    ಚಿಂತನಸಿರಿ ಗೌರವಾಧ್ಯಕ್ಷ ಶಶಿಕುಮಾರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಡಾ.ಶಿವಾನಂದ ಕುಬಸದ, ಡಾ.ಸಿದ್ದು ದಿವಾಣ, ಕಾನೂನು ವಿವಿ ಸಿಂಡಿಕೇಟ್ ನೂತನ ಸದಸ್ಯ ಬಿ.ಎಚ್. ಪಂಚಗಾಂವಿ ಮಾತನಾಡಿದರು. ಹಿರಿಯರಾದ ವಿ.ಪಿ. ಹುಣಸಿಕಟ್ಟಿ, ಶಂಕರ ಉತ್ತೂರ, ಮಹಾದೇವಪ್ಪ ಮಡಿವಾಳರ, ಪ್ರೊ.ಆರ್.ನಾಗರಾಜ, ಕೆ.ಎಂ. ಪೆಟ್ಲೂರ, ಬಿ.ವೈ. ಪಾಟೀಲ ಉಪಸ್ಥಿತರಿದ್ದರು. ಕಾನೂನು ವಿವಿ ಸಿಂಡಿಕೇಟ್ ಸದಸ್ಯ ಬಿ.ಎಚ್. ಪಂಚಗಾಂವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಳಬಸಯ್ಯ ಸಂಬಾಳಮಠ, ಶಸಾಪ ನೂತನ ಅಧ್ಯಕ್ಷ ಎಸ್.ಡಿ. ಬಳ್ಳೂರ ಅವರನ್ನು ಸನ್ಮಾನಿಸಲಾಯಿತು. ಡಾ.ಸಂಗಮೇಶ ಕಲ್ಯಾಣಿ, ಸಿ.ಎಲ್.ರೂಗಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts