More

    ಕಾರ್ಯಕರ್ತರ ಚುನಾವಣೆಯಲ್ಲಿ ಒಗ್ಗಟ್ಟಾಗಿರೋಣ

    ಮುಧೋಳ: ಗ್ರಾಮ ಪಂಚಾಯಿತಿ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದ್ದು, ಈ ಚುನಾವಣೆಯಲ್ಲಿ ಪಕ್ಷದ ಮುಖಂಡರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಹೇಳಿದರು.

    ಮುಧೋಳ ಹಾಗೂ ಲೋಕಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಸವಪ್ರಭು (ಕತ್ತಿ) ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಪಂ ಚುನಾವಣೆ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

    ಗ್ರಾಪಂಗಳಲ್ಲಿ ಕಾಂಗ್ರೆಸ್ ಪರವಾಗಿ ನಿಲ್ಲುವ ಕಾರ್ಯಕರ್ತರ ಪರವಾಗಿ ನಾನೇ ಚುನಾವಣೆಯಲ್ಲಿ ಸ್ಪರ್ಧಿಸಿದಂತೆ ಪ್ರಾಮಾಣಿಕವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವೆ. ಯಾವಾಗಲೂ ನಿಮ್ಮ ಜತೆಗೆ ಇರುವೆ ಎಂದು ಹೇಳಿದರು.

    ಪಕ್ಷದ ಸಭೆಗಳನ್ನು ಕರೆಯುವ ಅಧಿಕಾರ ಕೇವಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಮಾತ್ರ ಇದ್ದು, ಮುಖಂಡರು ಕೇವಲ ಸಭೆಯಲ್ಲಿ ಭಾಗವಹಿಸಬಹುದೇ ಹೊರತು ಪ್ರತ್ಯೇಕ ಸಭೆ ಮಾಡುವಂತಿಲ್ಲ. ನಾನು ಎಂಎಲ್‌ಸಿ ಆಗಲು ಎರಡು ಕೋಟಿ ರೂ. ಕೊಟ್ಟಿರುವ ಸುದ್ದಿ ಹರಡುತ್ತಿದ್ದು, ಅಂತಹ ಸ್ಥಿತಿ ನನಗೆ ಬಂದಿಲ್ಲ ಹಾಗೂ ಪಕ್ಷಕ್ಕೂ ಇಲ್ಲ. ನಾನು ಮೂರು ಬಾರಿ ಸೋತರೂ ನಯಾಪೈಸೆ ಇಲ್ಲದೆ ಎಂಎಲ್‌ಸಿ ಹಾಗೂ ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ, ಸೋನಿಯಾಜಿ, ರಾಹುಲ್ ಗಾಂಧಿ, ಸಿದ್ರಾಮಯ್ಯ, ಡಿಕೆಶಿ ಹಾಗೂ ಮುಖಂಡರು ಎಂದು ಹೇಳಿದರು.

    ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಾನು ವಿಧಾನ ಪರಿಷತ್ ಸದಸ್ಯನಾಗಿರುವ ಕಾರಣ ಸ್ಪರ್ಧೆ ಮಾಡಿರಲಿಲ್ಲ. ಈ ಸಂದರ್ಭದಲ್ಲಿ ಮೈಸೂರಿನಿಂದ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯಅವರ ಪರವಾಗಿ ಹೆಚ್ಚಿನ ಸಮಯ ವ್ಯಯ ಮಾಡಿದ್ದರಿಂದ ಮುಧೋಳ ವಿಧಾನಸಭೆ ನಮ್ಮ ಕೈತಪ್ಪಿತು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಧೋಳ ಮೀಸಲು ಕ್ಷೇತ್ರದಿಂದ ಆರ್.ಬಿ.ತಿಮ್ಮಾಪುರ ಸ್ಪರ್ದಿಸುತ್ತಿದ್ದು, ಈಗಾಗಲೇ ಕ್ಷೇತ್ರದಲ್ಲಿ ನಡೆದಿರುವ ಗೊಂದಲಕ್ಕೆ ಕೆಪಿಸಿಸಿ ಹದಿನೈದರಿಂದ ಒಂದು ತಿಂಗಳೊಳಗೆ ತೆರೆ ಬೀಳುತ್ತದೆ ಎಂದು ಹೇಳಿದರು.

    ಲೋಕಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲೋಕಣ್ಣ ಕೊಪ್ಪದ, ನಗರ ಘಟಕ ಅಧ್ಯಕ್ಷ ದಾನೇಶ ತಡಸಲೂರ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನಮಂತ ಕಡಪಟ್ಟಿ, ಭೀಮಸಿ ಸರ್ಕಾರಕುರಿ, ಅಶೋಕ ಕಿವಡಿ, ವೆಂಕಪ್ಪ ಹೊಸಮನಿ, ಮಹಾದೇವ ಹೊಸಟ್ಟಿ, ಜಿಲ್ಲಾ ಯುವ ಘಟಕದ ಅದ್ಯಕ್ಷ ವಿನಯ ತಿಮ್ಮಾಪುರ ಸೇರಿದಂತೆ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts