More

    ತರಕಾರಿ ವ್ಯಾಪಾರಕ್ಕೆ ತಕರಾರು

    ಮುದಗಲ್: ಪಟ್ಟಣದ ಕಂದಾಯ ಭವನದ ಹತ್ತಿರ ಸೋಮವಾರ ವಾರದ ತರಕಾರಿ ಸಂತೆ ನಡೆಯುವ ವೇಳೆ, ಸ್ಥಳೀಯ ಮತ್ತು ಕುಷ್ಟಗಿ ತಾಲೂಕಿನ ತರಕಾರಿ ವ್ಯಾಪಾರಸ್ಥರ ನಡುವೆ ಜಟಾಪಟಿ ನಡೆಯಿತು.

    ಕುಷ್ಟಗಿ ತಾಲೂಕಿನ ವ್ಯಾಪಾರಸ್ಥರು ರೈತರಿಂದ ತರಕಾರಿಯನ್ನು ನೇರವಾಗಿ ಖರಿದೀಸುತ್ತಾರೆ. ಗ್ರಾಹಕರಿಗೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ಮಧ್ಯವರ್ತಿಗಳಿಂದ ಖರೀದಿಸಿ ಮಾರಾಟ ಮಾಡುವ ತಮಗೆ ನಷ್ಟವಾಗುತ್ತದೆ. ಇದು 7-8 ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದ್ದರಿಂದ ಕುಷ್ಟಗಿಯ ತರಕಾರಿ ವ್ಯಾಪಾರಿಗಳು ಇಲ್ಲಿಗೆ ಮಾರಾಟಕ್ಕೆ ಬರಬಾರದು ಎಂದು ಸ್ಥಳೀಯರು ತಕರಾರು ತೆಗೆದರು.

    ಮೊದಲಿನಿಂದಲೂ ಮುದಗಲ್ ಸಂತೆಯಲ್ಲಿ ತರಕಾರಿ ಮಾರಲು ಬರುತ್ತಿದ್ದೇವೆ. 3-4 ತಿಂಗಳಿಂದ ಕರೋನಾ ಲಾಕ್‌ಡೌನ್ ಇತ್ತು. ಇದರಿಂದಾಗಿ ಸಂತೆಗೆ ನಿಷೇಧ ಹೇರಲಾಗಿತ್ತು. ಈ ಸೋಮವಾರದಿಂದ ಸಂತೆ ಪುನರಾರಂಭವಾಗಿದೆ. ಆದ್ದರಿಂದ ತಮಗೂ ಮಾರಾಟ ಮಾಡಲು ಅನುವು ಮಾಡಿಕೊಡಬೇಕು ಎಂದು ಕುಷ್ಟಗಿ ವ್ಯಾಪಾರಸ್ಥರು ಒತ್ತಾಯಿಸಿದರು.

    ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಯಿತು. ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ ಎಎಸ್‌ಐ ಚೆನ್ನಪ್ಪ ಸ್ಥಳಕ್ಕೆ ಭೇಟಿ ನೀಡಿ, ವಿಷಯ ಕೇಳಿದರು. ನಂತರ, ಯಾವ ವ್ಯಾಪಾರಿಯೂ ಮತ್ತೊಬ್ಬ ವ್ಯಾಪಾರಿಯ ವಹಿವಾಟಿಗೆ ತಕರಾರು ಮಾಡಬಾರದು. ಗ್ರಾಹಕರಿಗೆ ಕಡಿಮೆ ದರದಲ್ಲಿ ತರಕಾರಿ ದೊರೆಯಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ಎಲ್ಲ ವ್ಯಾಪಾರಸ್ಥರಿಗೂ ಸೂಚನೆ ನೀಡಲಾಗಿದೆ. ಸಲಹೆ-ಸೂಚನೆ ಮೀರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts