More

    ಜನರ ಒಳಿತಿಗಾಗಿ ಯಾಗ

    ಮುದಗಲ್: ಲೋಕ ಕಲ್ಯಾಣಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯ ಎಂದು ಹಿಮಾಲಯ ಪೀಠಾಧೀಶ್ವರ ಶ್ರೀ1008 ಅನಂತ ವಿಭೂಷಣ ಮಹಾಂಡಲೇಶ್ವರ ಶಿವಾಂಗಿನಂದ ಗಿರಿಯ ಮಹಾರಾಜರು ಹೇಳಿದರು.

    ಲೋಕ ಕಲ್ಯಾಣಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯ

    ಸಮೀಪದ ಉಳಿಮೇಶ್ವರದಲ್ಲಿ ಸತ್ಯಮ್ಮ ದೇವಿ ದೇವಸ್ಥಾನ ಉದ್ಘಾಟನೆಯ ಪೂರ್ವ ಸಿದ್ಧತೆಯನ್ನು ವಿಕ್ಷೀಸಿ ಬುಧವಾರ ಮಾತನಾಡಿದರು. ದ್ವಾಪರ ಯುಗದಲ್ಲಿ ನಾಡಿನ ಪ್ರಜೆಗಳ ಒಳಿತಿಗಾಗಿ ಹಾಗೂ ದೇವರ ಸಂತೃಪ್ತಿಗಾಗಿ ಯಜ್ಞ, ಯಾಗಾದಿಗಳನ್ನು ಮಾಡುತ್ತಿದ್ದರು. ಅದರಂತೆ ಕಲಿಯುಗದಲ್ಲಿ ಕೂಡ ಪ್ರಕೃತಿಯ ಮಳೆ, ಬೆಳೆ ಚೆನ್ನಾಗಿ ಆಗಲಿ ಎಂಬ ಸದುದ್ದೇಶ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಉಳಿಮೇಶ್ವರದಲ್ಲಿ ಸತ್ಯಮ್ಮ ದೇವಿ ಮೂರ್ತಿ ಪ್ರತಿಷ್ಠಾನ ಹಾಗೂ ದೇವಸ್ಥಾನ ಉದ್ಘಾಟನೆಯಲ್ಲಿ ಫೇ.11 ರಂದು ಸಚ್ಛ ಚಂಡಿಯಾಗ ಮಾಡಲಾಗುತ್ತಿದೆ. ಕಾರ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಪಂಡಿತರ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

    ಇದನ್ನೂ ಓದಿ: ಮನೆಮನೆಗೂ ಸೋಲಾರ್ ವಿದ್ಯುತ್! ಬೆಸ್ಕಾಂನಿಂದ ಆಂದೋಲನ ಮಾದರಿ ಕ್ರಮ

    12 ರಂದು ಸತ್ಯಮ್ಮ ದೇವಿಯ ವಿಗ್ರಹ ಮಜ್ಜನ, 13 ರಂದು ಚಂಡಿಯಾಗದ ಸಂಪೂರ್ಣ ಅರ್ಪಣೆ ಮತ್ತು ದೇವಿಯ ವಿಗ್ರಹ ಪ್ರತಿಷ್ಠಾಪನೆ, ಧಾರ್ಮಿಕ ಸಭೆ ಜರುಗಲಿದೆ ಎಂದರು. ಪ್ರಮುಖರಾದ ಸಿದ್ದು ಬಂಡಿ, ಸತ್ಯಪ್ಪ ನೀರಾವರಿ, ಸತೀಶ ಬೋವಿ, ರಾಮಣ್ಣ ವ್ಯಾಸನಂದಿಹಾಳ, ಶರಣಪ್ಪ ವಡ್ಡರ್, ಹನುಮಂತ ನೀರಾವರಿ, ಸತ್ಯಪ್ಪ, ಸಣ್ಣ ಯಂಕಪ್ಪ, ದುರಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts