More

    ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆ

    ಮುದಗಲ್: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಬುಧವಾರ ನಡೆದ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಪರೀಕ್ಷೆ ಆರಂಭವಾದ ಒಂದು ಗಂಟೆಯೊಳಗೆ ಸ್ಥಳೀಯರ ವಾಟ್ಸಪ್‌ಗಳಲ್ಲಿ ಹರಿದಾಡಿದ್ದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಶಂಕೆಯಿಂದ ಪಾಲಕರು, ಶಿಕ್ಷಕರಲ್ಲಿ ಆತಂಕ ಮೂಡಿಸಿತ್ತು.

    ವಿದ್ಯಾರ್ಥಿ ಪರೀಕ್ಷೆಯುತ್ತಿರುವ ಪ್ಯಾಡ್ ಸಮೇತ ಎಂಟು ಪುಟಗಳ ಪ್ರಶ್ನೆ ಪತ್ರಿಕೆಯ ಫೋಟೊ ತೆಗೆದು ವಾಟ್ಸಪ್‌ಗಳಲ್ಲಿ ಹರಿದು ಬಿಡಲಾಗಿದ್ದು, ಅದು ನೈಜ ಪ್ರಶ್ನೆ ಪತ್ರಿಕೆಯೋ ಅಥವಾ ನಕಲಿ ಪ್ರಶ್ನೆ ಪತ್ರಿಕೆಯನ್ನು ಹಾಕಿ ಗೊಂದಲ ಮೂಡಿಸಲಾಗುತ್ತಿದೆಯೇ ಎನ್ನುವ ಶಂಕೆ ವ್ಯಕ್ತವಾಗಿತ್ತು.

    ಪರೀಕ್ಷೆ ಆರಂಭವಾದ ಒಂದು ಗಂಟೆಯ ನಂತರ ಪಟ್ಟಣದ ಹಲವರ ಮೊಬೈಲ್‌ಗಳಿಗೆ ಪ್ರಶ್ನೆ ಪತ್ರಿಕೆ ಹರಿದಾಡಿದ್ದರಿಂದ ಸ್ಥಳೀಯ ಪರೀಕ್ಷಾ ಕೇಂದ್ರದಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಗಲಿಬಿಲಿಗೆ ಒಳಗಾಗಿದ್ದರು.

    ನಂತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಾಟ್ಸಪ್‌ಗೆ ಬಂದಿದ್ದ ಪ್ರಶ್ನೆ ಪತ್ರಿಕೆಯ ಬಾರ್ ಕೋಡ್ ಪರಿಶೀಲಿಸಿದಾಗ ಆ ಪ್ರಶ್ನೆ ಪತ್ರಿಕೆ ಮುದ್ದೆಬಿಹಾಳ ತಾಲೂಕಿನ ರೂಡಗಿ ಪರೀಕ್ಷಾ ಕೇಂದ್ರದ ಪ್ರಶ್ನೆ ಪತ್ರಿಕೆ ಎಂದು ತಿಳಿದು ಬಂದಿದ್ದರಿಂದ ಸ್ಥಳೀಯವಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎನ್ನುವ ಸಮಾಧಾನ ಅಧಿಕಾರಿಗಳಲ್ಲಿ ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts