More

    ಮಸಾರಿ ರೈತರಿಗೆ ವರವಾದ ತುಂತುರು ನೀರಾವರಿ

    ಮುದೇನೂರು: ಅಲ್ಪ-ಸ್ವಲ್ಪ ನೀರಾವರಿ ಹೊಂದಿದ, ಮಳೆ ಕೊರತೆಯಿಂದ ಬೆಳೆ ಉಳಿಸಿಕೊಳ್ಳುವುದು ಹೇಗೆ ಎನ್ನುವ ರೈತಾಪಿ ವರ್ಗಕ್ಕೆ ತುಂತುರು ನೀರಾವರಿ ವರದಾನವಾಗಿದೆ.

    ತಾವರಗೇರಾ ಹೋಬಳಿ ವ್ಯಾಪ್ತಿಗೆ ಬರುವ ಮಸಾರಿ ಭಾಗದಲ್ಲಿ ರೈತರು ಹಿಂಗಾರು ಹಂಗಾಮಿನಲ್ಲಿ ಈಗಾಗಲೇ ನಾಟಿ ಮಾಡಿದ ಶೇಂಗಾ, ಹುರುಳಿ, ಮೆಕ್ಕೆಜೋಳ, ಕಡಲೆ, ಜೋಳ, ಸೂರ್ಯಕಾಂತಿ ಸೇರಿ ಇದೀಗ ಬಿತ್ತನೆ ಮಾಡಿದ ಬೆಳೆಗಳಿಗೆ ನೀರು ಸಾಕಾಗುತ್ತಿರಲಿಲ್ಲ. ಹೀಗಾಗಿ ಈ ಭಾಗದ ಅನೇಕ ರೈತರು ತುಂತುರು ನೀರಾವರಿ ಯೋಜನೆ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.

    ತುಂತುರು ನೀರಾವರಿ ಪದ್ಧತಿಯಿಂದ ಅಕ್ಟೋಬರ್-ನವೆಂಬರ್ ಹಿಂಗಾರು ಹಂಗಾಮಿನಲ್ಲಿ ನಾಟಿ ಮಾಡಿ ಬೆಳೆ ತೆಗೆಯುತ್ತಿದ್ದಾರೆ. ಹೋಬಳಿಯಲ್ಲಿ ಹೆಚ್ಚಾಗಿ ಶೇಂಗಾ ಬಿತ್ತನೆ ಮಾಡಿದ್ದು, ವರ್ಷದಿಂದ ವರ್ಷಕ್ಕೆ ತುಂತುರು ನೀರಾವರಿ ಯೋಜನೆಯನ್ನು ಹಲವಾರು ರೈತರು ಆಳವಡಿಸಿಕೊಳ್ಳುತ್ತಿದ್ದಾರೆ. ಸಕಾಲಕ್ಕೆ ಮಳೆಗಳು ಆಗದಿದ್ದರಿಂದ ಹಲವಾರು ಬೆಳೆಗಳು ಹಾಳಾಗುತ್ತಿದ್ದವು. ಅನ್ನದಾತರು ಪರ್ಯಾಯವಾಗಿ ಇದೀಗ ತುಂತುರು ನೀರಾವರಿಗೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಅನುಕೂಲವಾಗಿದೆ.

    3,350 ಸ್ಪಿಂಕ್ಲರ್ ಸೆಟ್ ವಿತರಣೆ: ಕುಷ್ಟಗಿ ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಗೆ ಬರುವ ಹನುಮಸಾಗರ, ತಾವರಗೇರಾ, ಹನುಮನಾಳ ಹಾಗೂ ಪಟ್ಟಣ ಸೇರಿ 2021-22 ನೇ ಸಾಲಿನಲ್ಲಿ ಒಟ್ಟು 5,000 ರೈತರಿಂದ ತುಂತುರು ನೀರಾವರಿ ಯೋಜನೆಯ ಸ್ಪಿಂಕ್ಲರ್ ಸೆಟ್ ಬೇಡಿಕೆಯಿದ್ದು, ಈ ಪೈಕಿ 3,350 ಸ್ಪಿಂಕ್ಲರ್ ಸೆಟ್ ಹಂಚಿಕೆ ಮಾಡಲಾಗಿದೆ. ತಾಲೂಕು ಖುಷ್ಕಿ ಪ್ರದೇಶದಲ್ಲಿ ಬೋರ್‌ವೆಲ್ ಕೊರೆಯಿಸಿ ಬೇಸಾಯ ಮಾಡುವ ರೈತರಿಗೆ ಸರ್ಕಾರದಿಂದ ದೊರೆತ ಸಹಾಯಧನದಲ್ಲಿ ಹಂಚಿಕೆ ಮಾಡಲಾದ ಸ್ಪಿಂಕ್ಲರ್ ಸೆಟ್ ಅನುಕೂಲವಾಗಿದೆ. ವರ್ಷದಿಂದ ವರ್ಷಕ್ಕೆ ಸ್ಪಿಂಕ್ಲರ್‌ಗಾಗಿ ರೈತರಿಂದ ಅರ್ಜಿಗಳು ಹೆಚ್ಚು ಸ್ವೀಕೃತವಾಗುತ್ತಿದ್ದು, ಆಯಾ ಹೋಬಳಿಯಲ್ಲಿ ಹಂಚಿಕೆ ಮಾಡಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

    ಕುಷ್ಟಗಿ ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ ಬೇಸಾಯ ಮಾಡುವ ಅನ್ನದಾತರಿಗೆ ತುಂತುರು ನೀರಾವರಿ ಘಟಕ ಮೂಲಕ ಬೆಳೆಗಳಿಗೆ ನೀರು ಹಾಯಿಸಲಾಗಿದೆ. ಅನ್ನದಾತರಿಗೆ ಸರ್ಕಾರದಿಂದ ದೊರೆತ ಸಹಾಯಧನ ಮೂಲಕ ಕಾರಂಜಿ ಸೆಟ್ ವಿತರಣೆ ಮಾಡಿದ್ದು, ಪ್ರತಿ ವರ್ಷವೂ ಬೇಡಿಕೆಗಿಂತ ಹೆಚ್ಚು ಅರ್ಜಿಗಳು ಬರುತ್ತಿವೆ. ಅರ್ಜಿ ಸಲ್ಲಿಸಿದ ಎಲ್ಲ ರೈತರಿಗೆ ಸ್ಪಿಂಕ್ಲರ್ ಸೆಟ್ ಹಂಚಿಕೆ ಮಾಡಲಾಗಿದೆ.
    | ತಿಪ್ಪೇಸ್ವಾಮಿ ವಿ., ಸಹಾಯಕ ಕೃಷಿ ನಿರ್ದೇಶಕರು, ಕುಷ್ಟಗಿ

    ತಾವರಗೇರಾ ಹೋಬಳಿ ವ್ಯಾಪ್ತಿಯ ರೈತರು ಹಿಂಗಾರು ಹಂಗಾಮಿನಲ್ಲಿ ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ತರಕಾರಿ ಬೆಳೆಗಳಿಗೆ ಕಾರಂಜಿ ಮೂಲಕ ನೀರು ಹಾಯಿಸಲಾಗಿದೆ. ಆರ್‌ಎಸ್‌ಕೆನಿಂದ ಹಂಚಿಕೆ ಮಾಡಲಾದ ಸ್ಪಿಂಕ್ಲರ್ ಸೆಟ್ ಮೂಲಕ ಎಲ್ಲ ಬೆಳೆಗಳಿಗೆ ಸುಲಲಿತವಾಗಿ ನೀರು ಹಾಯಿಸಲಾಗಿದೆ.
    | ಶರಣಪ್ಪ ಪಿ.ಕಲಬಾವಿ, ರೈತ ಮುಖಂಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts