More

    ಪೇರಲ ಬೆಳೆದು ಲಾಭ ಕಂಡ ರೈತ : ಏಳು ಎಕರೆಯಲ್ಲಿ 5 ಸಾವಿರ ಸಸಿಗಳ ನಾಟಿ; ಮಿತ ನೀರಾವರಿ ಬಳಕೆ, ಉತ್ತಮ ಫಸಲು

    ಮುದೇನೂರು: ಮಿತ ನೀರಾವರಿಯಲ್ಲಿ ತೋಟಗಾರಿಕೆ ಬೆಳೆ ಪೇರಲ ಬೆಳೆದು ಲಾಭ ಕಂಡುಕೊಂಡಿರುವ ಕನ್ನಾಳ ಗ್ರಾಮದ ರೈತ ಎನ್.ಶ್ರೀನಿವಾಸ, ಮಾದರಿಯಾಗಿದ್ದಾರೆ.

    ಕುಷ್ಟಗಿ ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದೆ. ಈ ಭಾಗದಲ್ಲಿ ಆಹಾರ ಧಾನ್ಯಗಳ ಕೃಷಿಗೆ ರೈತರು ಹೆಚ್ಚು ಒತ್ತು ನೀಡಿದ್ದಾರೆ. ಆದರೆ, ಬರಡು ಭೂಮಿಯಲ್ಲಿ ಶ್ರೀನಿವಾಸ, ಅಲ್ಪ ನೀರು ಬಳಸಿ ತೋಟಗಾರಿಕೆ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಕನ್ನಾಳ ಗ್ರಾಮದ ಏಳು ಎಕರೆಯಲ್ಲಿ ಐದು ಸಾವಿರ ಪೇರಲ ಸಸಿ ನಾಟಿ ಮಾಡಿದ್ದು, ಬಂಗಾರದಂಥಹ ಫಸಲು ತೆಗೆಯುತ್ತಿದ್ದಾರೆ. ವರ್ಷವಿಡೀ ತೋಟದಲ್ಲಿ ಪೇರಲ ನಳಿನಳಿಸುತ್ತಿದ್ದು, ಸುತ್ತಲಿನ ಗ್ರಾಮಗಳ ರೈತರಿಗೆ ಪ್ರೇರಣೆಯಾಗಿದ್ದಾರೆ.

    ಲಕ್ಷಾಂತರ ರೂ.ಆದಾಯ: ಕಳೆದ ವರ್ಷ 150 ಟನ್ ಪೇರಲ ಹಣ್ಣನ್ನು ಮಾರುಕಟ್ಟೆಗೆ ಕಳಿಸಿ, ಲಕ್ಷಾಂತರ ರೂ. ಲಾಭ ಗಳಿಸಿದ್ದಾರೆ ರೈತ ಶ್ರೀನಿವಾಸ. ಕೆಲವೊಮ್ಮೆ ಖರೀದಿದಾರರು ತೋಟಕ್ಕೆ ಬಂದು ಪೇರಲ ಕೊಂಡೊಯ್ಯುತ್ತಾರೆ. ಮೊದಲೇ ಒಪ್ಪಂದ ಮಾಡಿಕೊಂಡಂತೆ ರಾಜ್ಯದ ಮಂಗಳೂರು, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಇತರ ನಗರ ಪ್ರದೇಶಕ್ಕೆ ಪೇರಲಕಳಿಸಿಕೊಡಲಾಗಿದೆ. ಪೇರಲ ಬೆಳೆ ಉತ್ತಮ ಆದಾಯ ನೀಡುತ್ತಿದ್ದು, ಕುಟುಂಬ ನೆಮ್ಮದಿ ಜೀವನ ನಡೆಸುತ್ತಿದೆ ಎನ್ನುತ್ತಾರೆ ರೈತ ಶ್ರೀನಿವಾಸ.

    ಕುಷ್ಟಗಿ ತಾಲೂಕಿನ ಬಹುತೇಕ ರೈತರು ಮಳೆಯಾದರೆ ಬೆಳೆ ಪಡೆಯುವ ಸ್ಥಿತಿ ಇದೆ. ಸ್ವಂತ ಜಮೀನಿನಲ್ಲಿ ನಾಲ್ಕಾರು ಬೊರ್‌ವೆಲ್ ಕೊರೆಸಲಾಗಿದೆ. ಅದರಲ್ಲಿ ದೊರೆತ ನೀರು ಬಳಸಿಕೊಂಡು ಹನಿ ನೀರಾವರಿ ಮೂಲಕ ಪೇರಲ ಬೆಳೆಸಲು ಮುಂದಾದೆ. ಪ್ರತಿ ವರ್ಷ ಲಕ್ಷಾಂತರ ರೂ. ಆದಾಯ ಬರುತ್ತಿದ್ದು, ಕೃಷಿಯಲ್ಲಿ ಖುಷಿ ಸಿಕ್ಕಿದೆ. ರೈತರು ಒಂದೇ ಬೆಳೆಗೆ ಸೀಮಿತವಾಗದೆ ಮಿಶ್ರ ಬೇಸಾಯ ಕಂಡುಕೊಳ್ಳಬೇಕು.
    | ಎನ್.ಶ್ರೀನಿವಾಸ, ಕನ್ನಾಳ ರೈತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts