More

    ಹೊಂದಾಣಿಕೆಯಿಂದ ಜೀವನ ನಡೆಸಿ: ಅಂಕಲಿಮಠದ ವೀರಭದ್ರ ಸ್ವಾಮೀಜಿ ಸಲಹೆ

    ಮುದೇನೂರು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು ಹೊಂದಾಣಿಕೆ, ಸಹನೆ, ತಾಳ್ಮೆಯಿಂದ ಬದುಕಿನ ಬಂಡಿ ನಡೆಸಬೇಕು ಎಂದು ಅಂಕಲಿಮಠದ ವೀರಭದ್ರ ಸ್ವಾಮೀಜಿ ಹೇಳಿದರು.

    ಗುಡ್ಡದ ಹನುಮಸಾಗರ ಕ್ಯಾಂಪ್‌ನಲ್ಲಿ ಶ್ರೀ ನಿರುಪಾದೇಶ್ವರ ಪುರಾಣ ಮಹಾ ಮಂಗಲ ನಿಮಿತ್ತ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸಾಮೂಹಿಕ ವಿವಾಹ ಆಯೋಜಿಸುವುದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ. ಜಾತ್ರೆ, ಉತ್ಸವಗಳ ಅಂಗವಾಗಿ ವಿವಾಹ ಮಾಡಿಕೊಡುವುದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ನವದಂಪತಿ ಸದಾ ಸಂತಸದಿಂದ ಜೀವನ ಸಾಗಿಸುವಂತೆ ಹಾರೈಸಿದರು. ಐದು ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

    ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಗ್ರಾಪಂ ಸದಸ್ಯರ ಒಕ್ಕೂಟದ ಕುಷ್ಟಗಿ ತಾಲೂಕು ಅಧ್ಯಕ್ಷ ಶರಣೇಗೌಡ ಪಾಟೀಲ್, ಜಿಪಂ ಮಾಜಿ ಸದಸ್ಯ ಅಯ್ಯನಗೌಡ ಪಾಟೀಲ್, ತಾಪಂ ಮಾಜಿ ಸದಸ್ಯ ವೀರೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts