More

    ಕಾವ್ಯ ರಚನೆ ಸಮಾಜ ನಿರ್ಮಾಣಕ್ಕೆ ಸಮ: ಕವಿ ಡಾ.ಚಿಂತಾಮಣಿ ಕೂಡ್ಲಕೆರೆ ಅಭಿಮತ

    ಕಾರ್ಕಳ: ಕಾವ್ಯ ರಚನೆ ಸಮಾಜ ನಿರ್ಮಾಣಕ್ಕೆ ಸಮನಾದುದು. ಕನ್ನಡ ಸಾಹಿತ್ಯಾಸಕ್ತಿಯನ್ನೇ ಕಳೆದುಕೊಂಡು ಕನ್ನಡ ಭಾಷೆಯ ಒಲವು ಕೂಡ ಕಳೆದುಹೋಗುತ್ತಿರುವ ಈ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ನಿರಕ್ಷರಸ್ಥರನ್ನು ಸೃಷ್ಟಿಸುವಂತಿದೆ ಎಂದು ಹಿರಿಯ ಕವಿ ಡಾ.ಚಿಂತಾಮಣಿ ಕೂಡ್ಲಕೆರೆ ಕಳವಳ ವ್ಯಕ್ತಪಡಿಸಿದರು.

    ಕಾಂತಾವರ ಕನ್ನಡ ಸಂಘ ಭಾನುವಾರ ಕನ್ನಡ ಭವನದಲ್ಲಿ ಆಯೋಜಿಸಿದ ಮುದ್ದಣ ಸಾಹಿತ್ಯೋತ್ಸವದಲ್ಲಿ ‘ಮೈಮರೆತು ಕುಣಿವೆ’ ಕೃತಿಗಾಗಿ 2020ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
    ಕನ್ನಡ ಸಂಸ್ಕೃತಿ ಇಲಾಖೆ ನಿವೃತ್ತ ನಿರ್ದೇಶಕ ರಾಮಕೃಷ್ಣ ಸಮಾರಂಭ ಉದ್ಘಾಟಿಸಿದರು.
    ಕಸಾಪ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಕೂಡ್ಲಕೆರೆ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿದರು. ಅನಾಮಧೇಯ ಕೃತಿಕಾರನಾಗಿದ್ದ ಮುದ್ದಣ ಕವಿಗೆ ಸರ್ಕಾರದಿಂದ ಯಾವುದೇ ನ್ಯಾಯ ಸಿಕ್ಕಿಲ್ಲ. ಪ್ರಸ್ತುತ ಯೋಗ್ಯರಿಗೆ ಸರ್ಕಾರದಿಂದ ಮಾನ್ಯತೆ, ಗೌರವ ಸಿಗುತ್ತಿಲ್ಲ ಎಂದು ಪುನರೂರು ಹೇಳಿದರು.

    ಉಜಿರೆಯ ಡಾ.ರಾಜಶೇಖರ ಹಳೆಮನೆ ಅಭಿನಂದನಾ ಮಾತುಗಳನ್ನಾಡಿದರು. ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆ ನೂತನ ನಾಲ್ಕು ಕೃತಿಗಳನ್ನು ಎಂಸಿಎಸ್ ಬ್ಯಾಂಕಿನ ವಿಶೇಷ ಕರ್ತವ್ಯಾಧಿಕಾರಿ ಎಂ.ಚಂದ್ರಶೇಖರ್ ಅನಾವರಣಗೊಳಿಸಿದರು. ಸಂಘದ ಕಾರ್ಯಾಧ್ಯಕ್ಷ ಡಾ.ನಾ.ಮೊಗಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಂಘದ ಅಧ್ಯಕ್ಷ ನಿರಂಜನ ಮೊಗಸಾಲೆ, ಗ್ರಂಥಮಾಲೆಯ ಸಂಪಾದಕ ಡಾ.ಬಿ.ಜನಾರ್ದನ ಭಟ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಘದ ಸಂಚಾಲಕ ವಿಠಲ ಬೇಲಾಡಿ ಸ್ವಾಗತಿಸಿದರು. ಗ್ರಂಥ ಮಾಲೆಯ ಸಾಧಕರು, ಕೃತಿಕಾರರನ್ನು ಗೌರವಿಸಲಾಯಿತು. ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು.

    ನಾಡಿಗೆ ನಮಸ್ಕಾರ ಅನಾವರಣ
    ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಗ್ರಂಥಮಾಲೆ ನೂತನ ನಾಲ್ಕು ಕೃತಿಗಳನ್ನು ಎಂ.ಸಿ.ಎಸ್. ಬ್ಯಾಂಕಿನ ವಿಶೇಷ ಕರ್ತವ್ಯಾಧಿಕಾರಿ ಎಂ.ಚಂದ್ರಶೇಖರ್ ಅನಾವರಣಗೊಳಿಸಿದರು. ಕಾಂತಾವರ ಕನ್ನಡ ಸಂಘದ ಸಾಹಿತ್ಯ ಯಜ್ಞದಲ್ಲಿ ಮೂಡುಬಿದಿರೆಯ ಎಂ.ಸಿ.ಎಸ್. ಬ್ಯಾಂಕ್ ವಾರ್ಷಿಕ ನೆಲೆಯಲ್ಲಿ ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಎರಡು ಕೃತಿಗಳನ್ನು ಪ್ರಾಯೋಜಿಸುವುದಾಗಿ ಅವರು ಪ್ರಕಟಿಸಿದರು.

    ಕಾವ್ಯಗಳಲ್ಲಿ ಜೀವನೋತ್ಸಾಹವನ್ನೇ ತೋರಿದ ಮುದ್ದಣನ ಬದುಕು ಬವಣೆ ದೊಡ್ಡದು. ಕರಾವಳಿಯ ಈ ಭಾಗದಲ್ಲಿ ಮುದ್ದಣ ಮಾತ್ರವಲ್ಲ ಪಂಜೆಯವರ ನಿವಾಸಗಳನ್ನು ಸ್ಮಾರಕವಾಗಿ ಬೆಳೆಸುವಲ್ಲಿ ನಾವು ವಿಫಲವಾಗಿರುವುದು ವಿಷಾಧನೀಯ.
    ರಾಮಕೃಷ್ಣ, ಕನ್ನಡ ಸಂಸ್ಕೃತಿ ಇಲಾಖೆ ನಿವೃತ್ತ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts