More

    ಮನಸ್ಸು, ದೇಹದ ಏಕೀಕೃತ ತತ್ವವೇ ಶಿವತ್ವ

    ಚಿಕ್ಕಬಳ್ಳಾಪುರ : ಮನಸ್ಸು ಮತ್ತು ದೇಹದ ಏಕೀಕೃತ ತತ್ವವೇ ಶಿವತ್ವ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.

    ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಪ್ರೇಮಾಮೃತಮ್ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವರಾತ್ರಿ ಮಹೋತ್ಸವವನ್ನುದ್ದೇಶಿಸಿ ಮಾತನಾಡಿದರು.

    ಮೂರು ಜನ್ಮಗಳಿಂದ ಸಾಗಿಬಂದ ಪಾಪವನ್ನು ಕಳೆಯುವ ಶಕ್ತಿ ತ್ರಿಗುಣಗಳನ್ನು ಮೇಳೈಸಿ ಏಕೀಭವಗೊಂಡ ಶಿವತ್ವಕ್ಕಿದೆ, ಶಿವೇತರವಾದುದು ದೂರವಾಗಲಿ, ಲೋಕ ಕಲ್ಯಾಣವಾಗಲಿ ಎಂದು ಆಶೀರ್ವದಿಸಿದರು..

    ಜಗತ್ತಿನ ಕಲ್ಯಾಣ ಮತ್ತು ಮಾನವ ಅಭ್ಯುದಯವೇ ಶಿವತತ್ವದ ಮೂಲಮಂತ್ರ, ಇದನ್ನು ಸಾಧಿಸುವ ಉದ್ದೇಶದಿಂದಲೇ ಬೇರೆ ಬೇರೆ ಕಾಲದಲ್ಲಿ ನಾನಾ ಅವತಾರಗಳು ಗೋಚರಿಸುತ್ತವೆ. ಇದಕ್ಕೆ ಪ್ರತಿಫಲವಾಗಿ ಮಹತ್ವದ ಸಂದೇಶವನ್ನು ಸಾರುವ ಕ್ರಿಯೆಗಳು ನಡೆಯುತ್ತವೆ ಎಂದರು.

    ಶಿವಲಿಂಗವನ್ನು ಅನಾವರಣಗೊಳಿಸಲಾಯಿತು. ಬಳಿಕ ವಿಶೇಷ ಅಭಿಷೇಕ, ಅಲಂಕಾರ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳು, ಜಾಗರಣೆ ಮತ್ತು ಲೋಕ ಕಲ್ಯಾಣಾರ್ಥ ಅಖಂಡ ಪ್ರಾರ್ಥನೆ ನಡೆಯಿತು. ಶಿವತತ್ವ ಮತ್ತು ಶಿವರಾತ್ರಿಯ ಆಚರಣೆಯ ಮಹತ್ವವನ್ನು ಉಪನ್ಯಾಸಕರು ತಿಳಿಸಿದರು.

    ಮಾಜಿ ಸಚಿವ ಟಿ.ಬಿ.ಜಯಚಂದ್ರ, ಸತ್ಯಸಾಯಿ ಲೋಕಸೇವಾ ಸಂಸ್ಥೆ ಮುಖ್ಯ ಮಾರ್ಗದರ್ಶಿ ನರಸಿಂಹಮೂರ್ತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts