More

    ರಸ್ತೆ ಕಾಮಗಾರಿ ಸ್ಥಗಿತಗೊಳಿಸಿದ ಗ್ರಾಮಸ್ಥರು

    ಮುದ್ದೇಬಿಹಾಳ: ತಾಲೂಕಿನ ತಾಳಿಕೋಟೆ ರಾಜ್ಯ ಹೆದ್ದಾರಿಯಿಂದ ಇಂಗಳಗೇರಿ ಗ್ರಾಮ ಸಂಪರ್ಕಿಸುವ ರಸ್ತೆ ಕಾಮಗಾರಿ ಕಳಪೆಯಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಇಂಗಳಗೇರಿ ಗ್ರಾಮಸ್ಥರು ಕೆಲಸಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಂಗಳಗೇರಿ ಗ್ರಾಮದ ಸಮೀಪದಲ್ಲೇ ನಡೆದಿರುವ ರಸ್ತೆ ಕಾಮಗಾರಿ ಸ್ಥಳಕ್ಕೆ ತೆರಳಿದ ಗ್ರಾಮಸ್ಥರು ಅಲ್ಲಿದ್ದ ಕಾರ್ಮಿಕರು, ಸೂಪರ್‌ವೈಸರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಮಾಡುತ್ತಿರುವ ಕಾರ್ಮಿಕರಿಂದ ಸಲಿಕೆ ತೆಗೆದುಕೊಂಡು ರಸ್ತೆ ಅಗೆದು ತೋರಿಸಿದರು. ಇಷ್ಟೊಂದು ಕಳಪೆಯಾಗಿ ಮಾಡುವುದಿದ್ದರೆ ರಸ್ತೆ ಮಾಡುವ ಅವಶ್ಯಕತೆ ಏನಿದೆ? ಗುತ್ತಿಗೆದಾರರೇನು ಪುಕ್ಕಟೆಯಾಗಿ ಈ ರಸ್ತೆ ಮಾಡುತ್ತಾರೆಯೇ ಎಂದು ಹರಿಹಾಯ್ದರು.

    ಗ್ರಾಮಸ್ಥ ಬಸನಗೌಡ ಪಾಟೀಲ ಮಾತನಾಡಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತಾಲೂಕಿನ ಇಂಗಳಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕಳೆದ ಎರಡು ದಿನಗಳ ಹಿಂದಷ್ಟೆ ಪ್ರಾರಂಭಿಸಲಾಗಿದೆ. ಇರುವ ರಸ್ತೆಯನ್ನು ಕಿತ್ತದೆ ಅದರ ಮೇಲೆಯೇ ಕಸಗುಡಿಸಿ ನೇರವಾಗಿ ಅರ್ಧ ಇಂಚಿಗಿಂತಲೂ ಕಡಿಮೆ ಡಾಂಬರ್ ಹಾಕಿ ರೂಲರ್ ಓಡಾಡಿಸಿ ರಸ್ತೆ ಕಾಮಗಾರಿ ಮುಗಿಸಿ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆ ರಸ್ತೆಯನ್ನು ಎತ್ತಿನ ಚಕ್ಕಡಿ ಓಡಾಡುವ ರಸ್ತೆಯನ್ನಾಗಿ ಮಾಡಿ ಹಣ ಹೊಡೆಯುವ ಹುನ್ನಾರ ಗುತ್ತಿಗೆದಾರರು ನಡೆಸಿದ್ದಾರೆ ಎಂದು ದೂರಿದರು.

    ರಸ್ತೆ ಸಂಪೂರ್ಣವಾಗಿ ಕಳಪೆಯಾಗಿದೆ. ಮೇಲಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದ ಕಾಮಗಾರಿ ಮಾಡಬೇಕು. ಈಗಾಗಲೇ ಮಾಡಿರುವ 2.50 ಕಿಮೀ ರಸ್ತೆಯನ್ನು ಮತ್ತೊಮ್ಮೆ ಮಾಡಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು.
    ಬಸನಗೌಡ ಪಾಟೀಲ, ಗ್ರಾಮಸ್ಥ

    ಒಟ್ಟು 2.40 ಕೋಟಿ ರೂ. ವೆಚ್ಚದಲ್ಲಿ 5.45 ಕಿ.ಮೀ ರಸ್ತೆ ಇದ್ದು 3.75 ಮೀಟರ್ ಅಗಲ ರಸ್ತೆ ಮಾಡಬೇಕಿದೆ. ಈಗಾಗಲೇ 2.70 ಕಿ.ಮೀ. ರಸ್ತೆ ಪೂರ್ಣಗೊಂಡಿದೆ. 20 ಎಂ.ಎಂ.ನಷ್ಟು ಡಾಂಬರ್ ಹಾಕಬೇಕು ಎಂದು ಅಂದಾಜು ಪತ್ರಿಕೆಯಲ್ಲಿದೆ. ಗ್ರಾಮಸ್ಥರ ದೂರಿನ ಮೇರೆಗೆ ಕಳಪೆಯಾದ ಕಾಮಗಾರಿ ಸರಿಪಡಿಸಲಾಗುವುದು.
    ಗಂಗಾಧರ ಶೀಲವಂತರ, ಜೆಇ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts