More

    ತೊಗರಿ ಖರೀದಿ ನೋಂದಣಿ ದಿನಾಂಕ ವಿಸ್ತರಣೆಗೆ ಒತ್ತಾಯ

    ಮುದ್ದೇಬಿಹಾಳ: ಬೆಂಬಲ ಬೆಲೆಯಡಿ ತೊಗರಿ ಖರೀದಿಯ ನೋಂದಣಿ ದಿನಾಂಕವನ್ನು ವಿಸ್ತರಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ ಆಗ್ರಹಿಸಿದರು.
    ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಟಿಎಪಿಸಿಎಂಎಸ್ ಕಚೇರಿಯಲ್ಲಿ ಶನಿವಾರ ತೊಗರಿ ಬೆಳೆಗಾರರ ನೋಂದಣಿ ಪ್ರಕ್ರಿಯೆಗೆ ಸಂಘದ ಅಧ್ಯಕ್ಷರೊಂದಿಗೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
    ತಾಲೂಕಿನಲ್ಲಿ ಮೂರು ಟಿಎಪಿಸಿಎಂಎಸ್ ಸೇರಿ ಮತಕ್ಷೇತ್ರದಲ್ಲಿ ಒಟ್ಟು 21 ಪಿಕೆಪಿಎಸ್‌ನಲ್ಲಿ ಒಬ್ಬ ರೈತರಿಂದ ತಲಾ ಇಪ್ಪತ್ತು ಕ್ವಿಂಟಾಲ್ ತೊಗರಿಯನ್ನು ತಲಾ 6 ಸಾವಿರ ರೂಗಳ ಬೆಂಬಲ ಬೆಲೆಯಡಿ ಖರೀದಿಸಲಾಗುತ್ತದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಶುರುವಾಗಿದ್ದು ಜ.1 ರಿಂದ ತೊಗರಿ ಖರೀದಿಸಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ನೋಂದಣಿ ಪ್ರಕ್ರಿಯೆ ದಿನಾಂಕ ವಿಸ್ತರಿಸುವಂತೆ ಮನವಿ ಮಾಡುವುದಾಗಿ ಹೇಳಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಮನೋಹರ ಮೇಟಿ ಮಾತನಾಡಿ, ಸರ್ಕಾರ ಬೆಂಬಲ ಬೆಲೆಯಡಿ ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸಲು ಸೂಚಿಸಿರುವುದು ಸ್ವಾಗತಾರ್ಹ. ಟಿಎಪಿಸಿಎಂಎಸ್ ವ್ಯಾಪ್ತಿಯ ಮುದ್ದೇಬಿಹಾಳ, ತಾಳಿಕೋಟೆ ಹಾಗೂ ನಾಲತವಾಡದಲ್ಲಿ ತೊಗರಿ ಖರೀದಿಸಲಾಗುವುದು ಎಂದು ಹೇಳಿದರು. ಸಂಘದ ಸಹಾಯಕ ವ್ಯವಸ್ಥಾಪಕ ಗುರುರಾಜ ಕೋನರೆಡ್ಡಿ, ಸಿಬ್ಬಂದಿ ಮಹಾಂತಗೌಡ ಪಾಟೀಲ, ರೈತ ಮುಖಂಡ ರಮೇಶ ಕರಡ್ಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts